ಸಾರಾಂಶ
ರಾಮನಗರ: ಜಾನಪದ ಲೋಕ ಸ್ಥಾಪನೆಯಾದ ನಂತರ ಖ್ಯಾತ ಹಾಗೂ ಪ್ರತಿಭಾವಂತ ಜನಪದ ಕಲಾವಿದರನ್ನು ಆಹ್ವಾನಿಸಿ, ಅವರ ಕಲೆಯನ್ನು ಗೌರವಿಸಿ, ಸನ್ಮಾನಿಸುವ ಕೆಲಸವನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ನಾಡೋಜಾ ಎಚ್.ಎಲ್.ನಾಗೇಗೌಡರ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ರಾಮನಗರ: ಜಾನಪದ ಲೋಕ ಸ್ಥಾಪನೆಯಾದ ನಂತರ ಖ್ಯಾತ ಹಾಗೂ ಪ್ರತಿಭಾವಂತ ಜನಪದ ಕಲಾವಿದರನ್ನು ಆಹ್ವಾನಿಸಿ, ಅವರ ಕಲೆಯನ್ನು ಗೌರವಿಸಿ, ಸನ್ಮಾನಿಸುವ ಕೆಲಸವನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ನಾಡೋಜಾ ಎಚ್.ಎಲ್.ನಾಗೇಗೌಡರ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ಸಹಯೋಗದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಲೋಕಸಿರಿ-103 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗೇಗೌಡರು ಕಟ್ಟಿ ಬೆಳೆಸಿದ ಈ ಸಂಸ್ಥೆ ರಾಜ್ಯಾದ್ಯಂತ ನೆಲೆಸಿರುವ ಎಲ್ಲಾ ಪ್ರಾಕಾರಗಳ ಕಲಾವಿದರು, ಅವರ ಕಲೆಯನ್ನು ಗೌರವಿಸಿ, ಅವರ ಕಲೆಯನ್ನು ಸಂವಾದ ಮೂಲಕ ಸಾರ್ವಜನಿಕರಿಗೆ ತಿಳಿಸಿಕೊಡುವ ಉತ್ತಮ ಕೆಲಸ ಮಾಡುಗುತ್ತಿದೆ ಎಂದರು.ಲೋಕಸಿರಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಗೊಂದಲಿಗರ ಕಲಾವಿದರಾದ ಹನುಮಂತಪ್ಪ ವೆಂಕಪ್ಪ ಸುಗತೇಕರ ಅವರನ್ನು ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಕಲಾವಿದರಾದ ಹನುಮಂತ ವೆಂಕಪ್ಪ ಸುಗತೇಕರ ಮತ್ತು ತಂಡದವರು ಗೊಂದಲಿಗರ ಪಾಪಪುಣ್ಯದ ಕಥೆ, ತಂಗಿ ಹೋಗುವ ಬಾರಮ್ಮ, ಅಂಬಾ ಭವಾನಿ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು. ತಮ್ಮ ಕುಟುಂಬದ ಕುಡಿಗಳಾದ ಅಂಬಾಜಿ, ಅಕ್ಷಯ್, ಚೇತನ್, ರಾಹುಲ್ ಸಂಬಾಳ ಮತ್ತು ತಾಳ ನುಡಿಸಿ ದನಿಗೂಡಿಸಿದರು. ತಂದೆಯ ಕಲೆಯಿಂದ ಜಾನಪದ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ, ಕೇಂದ್ರ ಸರ್ಕಾರದ ಪದ್ಮಶ್ರಿ ಪ್ರಶಸ್ತಿ ಪಡೆದ ಕುಟುಂಬ ನನ್ನದು ಎಂದು ಹೇಳಿಕೊಳ್ಳುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಅವರು ಸಂವಾದದಲ್ಲಿ ಗೊಂದಲಿಗರ ಸಂಪ್ರದಾಯ ಮತ್ತು ವಾದ್ಯಗಳ ಸ್ವಾರಸ್ಯಗಳನ್ನು ತಿಳಿಸಿದರು.ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸು.ತಾ.ರಾಮೇಗೌಡ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬು ವಿ.ಕುಂಬಾಪುರ ಮಾತನಾಡಿದರು.
ಕ್ಯೂರೇಟರ್ ಡಾ.ರವಿ ಯು.ಎಂ ಸ್ವಾಗತಿಸಿ, ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ರಂಗಸಹಾಯಕ ಪ್ರದೀಪ್.ಎಸ್ ನಿರೂಪಿಸಿದರು. ಪತ್ರಕರ್ತರಾದ ಗೊ.ರಾ.ಶ್ರೀನಿವಾಸ್, ಸಂಘಟಕರಾದ ನಾಗರಾಜು, ಜಾನಪದ ಲೋಕದ ಸಿಬ್ಬಂದಿಗಳು, ಡಿಪ್ಲೊಮಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.11ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಜಾನಪದ ಲೋಕದಲ್ಲಿ ನಡೆದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ಲೋಕಸಿರಿ-103 ಕಾರ್ಯಕ್ರಮದಲ್ಲಿ ಕಲಾವಿದ ಹನುಮಂತ ವೆಂಕಪ್ಪ ಸುಗತೇಕರ ಅವರನ್ನು ಗೌರವಿಸಲಾಯಿತು.