ಗ್ರಾಮೀಣ ಕ್ರೀಡಾಕೂಟಕ್ಕೆ ಪ್ರೋತ್ಸಾಹ ಅಗತ್ಯ

| Published : Oct 28 2024, 01:13 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ದಾಸರಾಗುತ್ತಿರುವ ಯುವಕರು ಸ್ನೇಹ, ಸಂಬಂಧಗಳಿಗೆ ಬೆಲೆ ನೀಡುತ್ತಿಲ್ಲ, ದುಶ್ಚಟಗಳಿಗೆ ಹೆಚ್ಚು ಶರಣಾಗುತ್ತಿರುವುದು ವಿಷಾದದ ಸಂಗತಿ. ಇಂತಹ ಸಂದರ್ಭದಲ್ಲಿ ಯುವಕರ ಮನಸ್ಥಿತಿ ಬದಲಾವಣೆಗೆ ಕ್ರೀಡೆಗಳು ಹೆಚ್ಚು ಉಪಯುಕ್ತವಾಗಿವೆ.

ಕನ್ನಡಪ್ರಭ ವಾರ್ತೆ ಕೋಲಾರಕ್ರೀಡೆಗಳು ಗ್ರಾಮೀಣ ಪ್ರದೇಶದ ಯುವಕರಲ್ಲಿ ಪರಸ್ಪರ ಸಾಮರಸ್ಯ, ಸ್ನೇಹ ಬಲವರ್ಧನೆ ಹೆಚ್ಚಿಸಲು ಸಹಕಾರಿಯಾಗಿವೆ. ಆದ್ದರಿಂದ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಬೇಕು. ಜತೆಗೆ ಸಾವಿರಾರು ಕುಟುಂಬಗಳಿಗೆ ಅನ್ನ ನೀಡಿದ ದಿವಂಗತ ರತನ್ ಟಾಟಾ ಅವರನ್ನು ಸ್ಮರಿಸುವ ಪ್ರಯತ್ನವೂ ಇಲ್ಲಿ ಆಗಿರುವುದು ಶ್ಲಾಘನೀಯ ಎಂದು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಕೆ.ನಾರಾಯಣಸ್ವಾಮಿ ತಿಳಿಸಿದರು.ತಾಲೂಕಿನ ಕೂತಂಡಹಳ್ಳಿ ಪದ್ಮವಿಭೂಷಣ ರತನ್ ಟಾಟಾ ಸ್ಮರಣಾರ್ಥ ಹೋಬಳಿ ಮಟ್ಟದ ಟೆನ್ನೀಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಕೃಷಿ ಮರೆತ ಯುವಕರು

ಇತ್ತೀಚಿನ ದಿನಗಳಲ್ಲಿ ಮೊಬೈಲ್ ದಾಸರಾಗುತ್ತಿರುವ ಯುವಕರು ಸ್ನೇಹ, ಸಂಬಂಧಗಳಿಗೆ ಬೆಲೆ ನೀಡುತ್ತಿಲ್ಲ, ದುಶ್ಚಟಗಳಿಗೆ ಹೆಚ್ಚು ಶರಣಾಗುತ್ತಿರುವುದು ವಿಷಾದದ ಸಂಗತಿ. ಇಂತಹ ಸಂದರ್ಭದಲ್ಲಿ ಯುವಕರ ಮನಸ್ಥಿತಿ ಬದಲಾವಣೆಗೆ ಕ್ರೀಡೆಗಳು ಹೆಚ್ಚು ಉಪಯುಕ್ತವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ವಿಮುಖರಾಗಿರುವ ಯುವಕರು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಎಂದರು.

ಆರೋಗ್ಯ ರಕ್ಷಣೆಗೆ ಕ್ರೀಡೆ ಸಹಕಾರಿ

ಎಪಿಎಂಸಿ ಮಾಜಿ ಉಪಾಧ್ಯಕ್ಷ ರವಿಶಂಕರ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಹೆಚ್ಚು ಸಹಕಾರಿಯಾಗಿದೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಂದ ಮುಕ್ತಿ ಹೊಂದಲು ಇಂದು ನಿತ್ಯ ವ್ಯಾಯಾಮ, ವಾಕಿಂಗ್ ಮಾಡುತ್ತಿದ್ದೇವೆ, ಆದರೆ ಕ್ರೀಡೆಗಳಲ್ಲಿ ಸದಾ ತೊಡಗುವವರಿಗೆ ಈ ರೋಗಗಳು ಹತ್ತಿರ ಸುಳಿಯುವುದಿಲ್ಲ ಎಂದರು. ಟೂರ್ನಿಯಲ್ಲಿ ೩ ತಂಡಗಳು ಪಾಲ್ಗೊಂಡಿದ್ದು, ಗ್ರಾಮದ ಯುವ ಮುಖಂಡ ವಿಜಯಬಾಬು, ಪತ್ರಕರ್ತ ಮಹೇಶ್, ಟೂರ್ನಿಯ ನೇತೃತ್ವ ವಹಿಸಿದ್ದು, ಟೂರ್ನಿಮೆಂಟ್‌ನಲ್ಲಿ ಮೂರು ತಂಡಗಳು ಭಾಗವಹಿಸಿದ್ದು, ಎ ತಂಡ ಪ್ರಥಮ ಬಹುಮಾನ, ಬಿ ತಂಡಕ್ಕೆ ದ್ವಿತೀಯ ಬಹುಮಾನ ಹಾಗೂ ಸಿ ತಂಡ ಸಮಾಧಾನಕರ ಬಹುಮಾನ ಪಡೆಯಿತು. ಕೂತಂಡಹಳ್ಳಿ ಗ್ರಾ.ಪಂ ಅಧ್ಯಕ್ಷ ತಿಮ್ಮಣ್ಣ ಉಪಸ್ಥಿತರಿದ್ದರು