ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ತಂತ್ರಜ್ಞಾನದಲ್ಲಿ ಮೊಬೈಲ್ ಜಗತ್ತಿನಲ್ಲಿ ಮುಳುಗಿದ್ದು, ಗ್ರಾಮೀಣ ಜಾನಪದ ಕಲೆಗಳನ್ನು ಮರೆತ್ತಿರುವ ಮುಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಗ್ರಾಮೀಣ ಸೊಗಡಿನ ಕ್ರೀಡೆ, ಗೀತಗಾಯನ, ಕಲೆ ಮತ್ತು ಸಂಸ್ಕೃತಿಯನ್ನು ತೊರಿಸಲು ಮತ್ತೆ ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಮಾಡುವ ಈ ಯುಗದಲ್ಲಿ ಮರಳಿ ಮನೆಗೆ ಎಂಬಂತೆ ಇಂದಿನ ಪೀಳಿಗೆಗೆ ಇದರ ಅವಶ್ಯಕತೆ ಇದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಗ್ರಾಮೀಣ ಭಾಗದ ಜಾನಪದ ಕಲಾವಿದರ ಪ್ರೋತ್ಸಾಹಕ್ಕೆ ಮಾಸಾಶನ ಮತ್ತು ಅವರ ಬೇಡಿಕೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಸಹಕರಿಸುತ್ತೇನೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಆಯೋಜನೆ ಮಾಡುತ್ತೇನೆ ಎಂದು ಶಾಸಕ ಡಿ. ರವಿಶಂಕರ್ ಭರವಸೆ ನೀಡಿದರು.

ಪಟ್ಟಣದ ಪುರಸಭೆ ಬಯಲು ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ 115ನೇ ಸಂಸ್ಥಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ತಂತ್ರಜ್ಞಾನದಲ್ಲಿ ಮೊಬೈಲ್ ಜಗತ್ತಿನಲ್ಲಿ ಮುಳುಗಿದ್ದು, ಗ್ರಾಮೀಣ ಜಾನಪದ ಕಲೆಗಳನ್ನು ಮರೆತ್ತಿರುವ ಮುಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಗ್ರಾಮೀಣ ಸೊಗಡಿನ ಕ್ರೀಡೆ, ಗೀತಗಾಯನ, ಕಲೆ ಮತ್ತು ಸಂಸ್ಕೃತಿಯನ್ನು ತೊರಿಸಲು ಮತ್ತೆ ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಮಾಡುವ ಈ ಯುಗದಲ್ಲಿ ಮರಳಿ ಮನೆಗೆ ಎಂಬಂತೆ ಇಂದಿನ ಪೀಳಿಗೆಗೆ ಇದರ ಅವಶ್ಯಕತೆ ಇದೆ ಎಂದರು.

ತೊಗಲುಗೊಂಬೆ ಪ್ರದರ್ಶನ ಇಂದಿಗೂ ಜೀವಂತ:

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿಂಡಿಮ ಶಂಕರ್‌ ಮಾತನಾಡಿ, ಗ್ರಾಮೀಣ ಜಾನಪದ ಕಲೆಗಳು ಇಂದಿಗೂ ಜೀವಂತ ನಮ್ಮ ಹಿರಿಯರು ಗ್ರಾಮದಲ್ಲಿ ಆಚರಿಸುತ್ತಿದ್ದ ಗ್ರಾಮೀಣ ತೊಗಲುಗೊಂಬೆ ಪ್ರದರ್ಶನ ಇಂದಿಗೂ ಜೀವಂತವಾಗಿದ್ದು, ಜಾನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರ ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳು ಸಹಕರಿಸುವಂತೆ ಹೇಳಿದರು.

ಕನ್ನಡ ನಾಡು-ನುಡಿಯ ಸಂಸ್ಕೃತಿಯನ್ನು ಇಡೀ ವಿಶ್ವವೇ ಗೌರವಿಸುತ್ತಿರುವುದು ಬಹಳ ಸಂತೋಷ ಆದರೆ ಗ್ರಾಮೀಣ ಭಾಗದ ಜಾನಪದ ಕಲೆಗಳಲ್ಲಿ ತೊಗಲು ಗೊಂಬೆ ಪ್ರದರ್ಶನ ನಸೀಸುತ್ತಿರುವುದು ತುಂಬಾ ಬೇಸರವಾಗಿದ್ದು ಕಲೆಯನ್ನೆ ನಂಬಿರುವ ಕುಟುಂಬಗಳ ಬಗ್ಗೆ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಆಸಕ್ತಿವಹಿಸುವಲ್ಲಿ ನಿರ್ಲಕ್ಷ್ಯದಿಂದಾಗಿ ಆ ಕಲೆಯನ್ನೇ ನಂಬಿರುವ ಕಲಾವಿದರ ಬದುಕು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯುರ ಹೆಸರಿನಲ್ಲಿ ನಿರ್ಮಾಣಗೊಂಡ ಕೃಷ್ಣರಾಜನಗರ ತಾಲೂಕಿನ ಸಾತಿಗ್ರಾಮದ ಸಂಜೀವಯ್ಯನವರ ಕುಟುಂಬ ಅಂದಿನಿಂದ ಇಂದಿನವರೆಗೆ ಸುಮಾರು 80 ವರ್ಷಗಳಿಂದ ಗ್ರಾಮೀಣ ಭಾಗದ ಜಾನಪದ ಕಲೆಯಾದ ತೊಗಲುಗೊಂಬೆ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವ ಪುತ್ರ ನಾಗೇಂದ್ರ ಪತ್ನಿ ಕಾಮಕ್ಷಿ ಸೇವೆ ಇಂದಿಗೂ ನಮ್ಮ ಮೈಸೂರು ಸಾಂಸ್ಕೃತಿಕ ನಗರದ ಹೆಸರಿಗೆ ಸಾಕ್ಷಿಯಾಗಿದೆ ಎಂದರು.

ಕಲೆ ಮತ್ತು ಸಾಹಿತ್ಯ:

ಜನತೆಗೆ ಮನರಂಜನೆ ಮುಖ್ಯ ಜೊತೆಗೆ ಆರೋಗ್ಯ ರಕ್ಷಣೆಗೆ ಗ್ರಾಮೀಣ ಭಾಗದ ಜಾನಪದ ತೊಗಲುಗೊಂಬೆ ಪ್ರದರ್ಶನದಿಂದ ನಮ್ಮ ಜೀವನದ ಮೌಲ್ಯವನ್ನು ಆಡಿಸುವ ಕೈಚಳಕ ಆ ಕಲಾವಿದರ ಕೈಯಲ್ಲಿದೆ ಇದು ಇಂದಿನ ಮಕ್ಕಳಿಗೆ ತಿಳಿಸುವ ಕೆಲಸ ನಮ್ಮಂತಹ ಹಿರಿಯರು ಮಾರ್ಗದರ್ಶನ ನೀಡಬೇಕೆಂದು ವೈದ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.

ರೋಟರಿ ಘಟಕದ ಅಧ್ಯಕ್ಷ ದಯಾನಂದ, ನಗರ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಕನ್ನಡ ಜಾನಪದ ಪರಿಷತ್ತಿನ ತಿಮ್ಮಶೆಟ್ಟಿ, ಸಾಹಿತ್ಯ ಪರಿಷತ್‌ ಸಮಿತಿಯ ಉದಯಕುಮಾರ್, ಭಾಸ್ಕರ್, ನಿವೃತ್ತ ಉಪನ್ಯಾಸಕ ಕೃಷ್ಣ, ರಾಮಕೃಷ್ಣ, ಮಹದೇವ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕೆ.ಎನ್. ಪ್ರಸನ್ನಕುಮಾರ್, ಸಂಪತ್ತುಕುಮಾರ್, ಶಿಕ್ಷಕಿ ಭಾರತಿ, ನಾಗರತ್ನ ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳು ಮತ್ತು ಸಾರ್ವಜನಿಕರು ಇದ್ದರು.