ಸಾರಾಂಶ
ವಾಟಾಳು ಮಠಾಧೀಶರಿಂದ ಜೆಎಸ್‌ಎಸ್ ರಂಗೋತ್ಸವ ಉದ್ಘಾಟನೆ । ಡೋಲು ಬಡಿದ ನಟ ವಿಕ್ಕಿ ವರುಣ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್ ಸಂಸ್ಥೆ ರಂಗ ತರಬೇತಿ ನೀಡುವ ಜೊತೆಗೆ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೂ ಸುತ್ತೂರು ಶ್ರೀಗಳು ಮುಂದಾಗಿದ್ದು ಮಕ್ಕಳಲ್ಲಿ ಕಲೆಯ ಅಭಿರುಚಿ ಬೆಳೆಸುವಲ್ಲಿ ಮಹತ್ವದ ಹೆಜ್ಜೆಗಳನ್ನಿಟ್ಟಿದ್ದಾರೆ ಎಂದು ವಾಟಾಳು ಮಠಾಧೀಶ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜೆಎಸ್‌ಎಸ್ ಸಂಸ್ಥೆ ರಂಗ ತರಬೇತಿ ನೀಡುವ ಜೊತೆಗೆ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೂ ಸುತ್ತೂರು ಶ್ರೀಗಳು ಮುಂದಾಗಿದ್ದು ಮಕ್ಕಳಲ್ಲಿ ಕಲೆಯ ಅಭಿರುಚಿ ಬೆಳೆಸುವಲ್ಲಿ ಮಹತ್ವದ ಹೆಜ್ಜೆಗಳನ್ನಿಟ್ಟಿದ್ದಾರೆ ಎಂದು ವಾಟಾಳು ಮಠಾಧೀಶ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಜೆಎಸ್‌ಎಸ್ ರಂಗೋತ್ಸವದಲ್ಲಿ ಅವರು ಮಾತನಾಡಿದರು.ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಜೆಎಸ್‌ಎಸ್ ಕಲಾ ಮಂಟಪ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜೆಎಸ್‌ಎಸ್ ರಂಗೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
೧೯೪೮ ರಲ್ಲಿ ಜೆಎಸ್‌ಎಸ್ ಕಲಾಮಂಟಪವನ್ನು ಲಿಂಗೈಕ್ಯ ಡಾ.ರಾಜೇಂದ್ರ ಶ್ರೀಗಳು ಕಲಾ ಪೋಷಣೆಗೆ ಕಾರಣರಾದರು. ಇಂದಿನ ಶ್ರೀಗಳು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.ಜೆಎಸ್‌ಎಸ್ ರಂಗೋತ್ಸವವನ್ನು ನಟ ವಿಕ್ಕಿ ವರುಣ್ ಡೋಲು ಬಡಿಯುವ ಮೂಲಕ ಉದ್ಘಾಟಿಸಿ ತಮ್ಮ ನಂಜನಗೂಡಿನ ಜೆಎಸ್‌ಎಸ್ ಕಾಲೇಜಿನಲ್ಲಿ ಓದುತ್ತಿದ್ದ ದಿನಮಾನಗಳನ್ನು ಮೊದಲಿಗೆ ನೆನದರು.
ಅಲ್ಲಿ ತಾವು ನೀಡಿದ್ದ ರಂಗ ಪ್ರದರ್ಶನದ ಬಗ್ಗೆ ಕಾಲೇಜಿನಲ್ಲಿ ದೊರೆತ ಪ್ರೋತ್ಸಾಹ ತಮ್ಮ ಸಾಧನೆಗೆ ಪ್ರೇರಣೆ ನೀಡಿತ್ತು. ಜೆಎಸ್‌ಎಸ್ ಸಂಸ್ಥೆಯು ಹಲವು ಕಲಾವಿದರನ್ನು ಸೃಷ್ಟಿ ಮಾಡಿದೆ ಎಂದರು.ತಾಲೂಕು ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆದ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ ಮಾತನಾಡಿ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಅನೇಕ ವ್ಯವಸ್ಥೆಗಳನ್ನು ಮಾಡಿದೆ ಎಂದರು.
ಜೆಎಸ್‌ಎಸ್ ರಂಗೋತ್ಸವ ಸಂಚಾಲಕ ಚಂದ್ರಶೇಖರಾಚಾರ್ ಹೆಗ್ಗೊಠಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.ನಾಟಕ ಪ್ರದರ್ಶನ
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ‘ಕುಹೂ ಕುಹೂ ಕೋಗಿಲೆ’ ನಾಟಕ ಪ್ರದರ್ಶನ ಮಾಡಲಾಯಿತು.ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹದೇವಮ್ಮ,ಎಚ್.ಪಿ.ಬಸವರಾಜಪ್ಪ, ಜೆಎಸ್‌ಎಸ್ ಪ್ರೌಢಶಾಲೆ ಶಿಕ್ಷಕ ಪಶುಪತಿ, ಕನ್ನಡ ಉಪನ್ಯಾಸಕ ಸಿದ್ಧಮಲ್ಲಿಕಾರ್ಜುನ ಸ್ವಾಮಿ ಹಾಗೂ ಡಾ.ಮಲ್ಲು ಚನ್ನಂಜಯ್ಯನಹುಂಡಿ, ವಿದ್ಯಾರ್ಥಿಗಳಾದ ಕು.ದೀಪಿಕಾ ಎಚ್.ಎನ್., ಯಶಸ್ವಿನಿ ಎಚ್.ಬಿ. ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿದ್ದರು.
ರಾಜ್‌ಗೂ ಇತ್ತು ಭಕ್ತಿ‘ಶ್ರೀ ಶಿವರಾತ್ರೀಶ್ವರ ಜಯಂತಿ ಮೈಸೂರಿನಲ್ಲಿ ನಡೆದಾಗ ಹಾಜರಿದ್ದ ಚಲನಚಿತ್ರ ನಟ ಡಾ.ರಾಜ್‌ಕುಮಾರ್ ಶ್ರೀಗಳ ಸಿಂಹಾಸನಾರೋಹಣದ ಕಾರ್ಯಕ್ರಮದ ಬಳಿಕ ಭಕ್ತರು ಸಮರ್ಪಿಸುತ್ತಿದ್ದ ಹಾರಗಳಲ್ಲಿ ಕೆಳಗೆ ಬಿದ್ದ ಹೂಗಳನ್ನು ಎತ್ತಿಕೊಂಡು ಜೇಬಿನಲ್ಲಿಟ್ಟುಕೊಂಡದ್ದನ್ನು ನಾನೇ ನೋಡಿದ್ದೆ’ ಎಂದರು.
ಗುಂಡ್ಲುಪೇಟೆ ಜೆಎಸ್‌ಎಸ್ ರಂಗೋತ್ಸವವನ್ನು ನಟ ವಿಕ್ಕಿ ವರುಣ್ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.