ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಮತ್ತು ಸಾಧಕರನ್ನು ಗೌರವಿಸುವುದು ದೇವರಿಗೆ ಇಷ್ಟವಾಗುವ ಶ್ರೇಷ್ಠ ಕೆಲಸ, ಇಂತಹ ಕೆಲಸ ಮಾಡಿದ ಕಳತ್ತೂರು ಶೇಖರ ಶೆಟ್ಟಿಯವರಿಗೆ ದೇವರ ದಯೆ ಖಂಡಿತ ಇದೆ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಕಾಪು: ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಮತ್ತು ಸಾಧಕರನ್ನು ಗೌರವಿಸುವುದು ದೇವರಿಗೆ ಇಷ್ಟವಾಗುವ ಶ್ರೇಷ್ಠ ಕೆಲಸ, ಇಂತಹ ಕೆಲಸ ಮಾಡಿದ ಕಳತ್ತೂರು ಶೇಖರ ಶೆಟ್ಟಿಯವರಿಗೆ ದೇವರ ದಯೆ ಖಂಡಿತ ಇದೆ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಕಳತ್ತೂರು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ, ಕಳತ್ತೂರು ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಶನಲ್ ಅಡಿಟೋರಿಯಂನಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಉಡುಪಿ ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ, ಸಮಾಜ ಸೇವಕ ಕಳತ್ತೂರು ದಿವಾಕರ ಬಿ. ಶೆಟ್ಟಿ ಹಾಗೂ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ 11 ವರ್ಷದ, ನಾಲ್ಕು ರಾಜ್ಯಗಳಲ್ಲಿ ಆರು ಭಾಷೆಗಳಲ್ಲಿ ಮತದಾನ ಜಾಗೃತಿ ಮೂಡಿಸಿದ ಕುಮಾರಿ ಸನ್ನಿಧಿ ಕಶೆಕೋಡಿ ಅವರನ್ನು ಸನ್ಮಾನಿಸಲಾಯಿತು, 19 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕುಶಲಶೇಖರ ಚಾರಿಟೇಬಲ್ ಟ್ರಸ್ಟ್‌ನಿಂದ ಪ್ರೋತ್ಸಾಹಿಸಲ್ಪಟ್ಟ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು, ಇದು ಶೇಖರ ಶೆಟ್ಟಿಯವರ ಮಹಾಸಾಧನೆಯಾಗಿದೆ ಎಂದರು.ಅಡಿಟೋರಿಯಂನ ಮಾಲಕ ಕಳತ್ತೂರು ಶೇಖರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಸಾಯಿರಾಧ ಗ್ರೂಪ್‌ನ ಮನೋಹರ್ ಎಸ್. ಶೆಟ್ಟಿ, ಕಾಪು ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮಿ ಎಸ್. ಶೆಟ್ಟಿ, ಅಂಚೆ ಇಲಾಖೆಯ ನಿವೃತ್ತ ಅಧೀಕ್ಷಕ ನವೀನ್ ಚಂದರ್, ಕುತ್ಯಾರು ಪಿಡಿಓ ರಾಜೇಶ್ ಶೆಣೈ, ಉದ್ಯಮಿಗಳಾದ ರವೀಂದ್ರ ಆಳ್ವ, ಪ್ರದೀಪ್ ಶೆಟ್ಟಿ, ಟ್ರಸ್ಟ್‌ನ ಪ್ರಮುಖರಾದ ಕುಶಲ ಶೇಖರ ಶೆಟ್ಟಿ, ಕುಶಲ ಭುಜಂಗ ಶೆಟ್ಟಿ, ಪ್ರೇಮ ಸುಂದರ ಶೆಟ್ಟಿ, ಆನಂದಿ ವಾಸು ಶೆಟ್ಟಿ, ಅಮರನಾಥ ಶೆಟ್ಟಿ, ನಯನ ಎಸ್. ಶೆಟ್ಟಿ, ಉಜ್ವಲ್ ಶೆಟ್ಟಿ, ರೋಶಿನಿ ಶೆಟ್ಟಿ ಉಪಸ್ಥಿತರಿದ್ದರು. ಚಾಂದಿನಿ ಉಜ್ವಲ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಸುಮನ ದೇವಾಡಿಗ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಉದಯ ಕುಮಾರ್ ವಂದಿಸಿದರು, ನಿವೃತ್ತ ಮುಖ್ಯೋಪಾಧ್ಯಾಯರಾದ ನಿರ್ಮಲಕುಮಾರ್ ಹೆಗ್ಡೆ ನಿರೂಪಿಸಿದರು.