ಸಾರಾಂಶ
ಗ್ರಾಮೀಣ ಪ್ರದೇಶಗಳಲ್ಲಿ ಗೃಹ, ಕರಕುಶಲ,ಸಣ್ಣ ಕೈಗಾರಿಕೆಗಳು ನಶಿಸುತ್ತಿವೆ. ಆದ್ದರಿಂದ ಅವುಗಳನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಮಾಸಿಕ ಸಂತೆಗಳನ್ನು ಪ್ರೋತ್ಸಾಹಿಸಬೇಕು ಎಂದು ಮೆಣಸೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶುಭಾಷಿಣಿ ತಿಮ್ಮಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ, ಶೃಂಗೇರಿ
ಗ್ರಾಮೀಣ ಪ್ರದೇಶಗಳಲ್ಲಿ ಗೃಹ, ಕರಕುಶಲ,ಸಣ್ಣ ಕೈಗಾರಿಕೆಗಳು ನಶಿಸುತ್ತಿವೆ. ಆದ್ದರಿಂದ ಅವುಗಳನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಮಾಸಿಕ ಸಂತೆಗಳನ್ನು ಪ್ರೋತ್ಸಾಹಿಸಬೇಕು ಎಂದು ಮೆಣಸೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶುಭಾಷಿಣಿ ತಿಮ್ಮಪ್ಪ ಹೇಳಿದರು.ತಾಲೂಕಿನ ಮೆಣಸೆಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿ ಮೆಣಸೆ ಸಂಜೀವಿನ ಒಕ್ಕೂಟ ಆಯೋಜಿಸಿದ್ದ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗೃಹಕೈಗಾರಿಕೆಗಳು ಅವನತಿಯಂಚಿಗೆ ತಲುಪಿವೆ. ಬುಟ್ಟಿ, ತಟ್ಟಿ ಸೇರಿದಂತೆ ಗೃಹೊಪಯೋಗಿ ವಸ್ತುಗಳನ್ನು ತಯಾರಿಸ ಲಾಗುತ್ತಿಲ್ಲ.ಹಾಗೇಯೇ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುತ್ತಿರುವ ವಿವಿಧ ರೀತಿಯ ತರಕಾರಿವುಗಳಿಗೆ ಮಾರುಕಟ್ಟೆ ಯಿಲ್ಲದೇ ಪ್ರೋತ್ಸಾಹ ಸಿಗುತ್ತಿಲ್ಲ. ಇವುಗಳಿಗೆ ಸೂಕ್ತ ಮಾರುಕಟ್ಟೆ ದೊರೆತಲ್ಲಿ ಉತ್ಪಾದಕರಿಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ. ಆದ್ದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಮಾಸಿಕ ಸಂತೆಗಳೇ ಉತ್ತಮ ಮಾರುಕಟ್ಟೆಗಳಾಗಿವೆ. ಮಾಸಿಕ ಸಂತೆಗಳಲ್ಲಿ ಮಲೆನಾಡಿನ ಹಳ್ಳಿಗಾಡಿನಲ್ಲಿ ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ,ಶಾವಿಗೆ ಸೇರಿದಂತೆ ಗೃಹವಸ್ತುಗಳು, ತರಕಾರಿಗಳು, ಹಣ್ಣು ಹಂಪಲು ಸೇರಿದಂತೆ ಎಲ್ಲಾ ರೀತಿಯ ವಸ್ತುಗಳು ಕಾಣಸಿಗುತ್ತವೆ. ಜನರು ಮಾಸಿಕ ಸಂತೆಗಳನ್ನು ಪ್ರೋತ್ಸಾಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮೆಣಸೆ ಗ್ರಾಪಂ ಅಧ್ಯಕ್ಷೆ ಸಂದ್ಯಾ ಮರಿಯಪ್ಪ,ಸದಸ್ಯರಾದ ತ್ರಿಮೂರ್ತಿ,ರಾಜೇಶ್,ಅಶೋಕ್,ಒಕ್ಕೂಟದ ಶಾಂತಾ,ಸೌಮ್ಯ,ಕುಸುಮ ಮತ್ತಿತರರು ಇದ್ದರು.4 ಶ್ರೀ ಚಿತ್ರ 1-ಶೃಂಗೇರಿ ಮೆಣಸೆಯಲ್ಲಿ ಸಂಜೀವಿನ ಒಕ್ಕೂಟದ ಮಾಸಿಕ ಸಂತೆ ಉದ್ಘಾಟಿಸಿ ಶುಭಾಷಿಣಿ ತಿಮ್ಮಪ್ಪ ಮಾತನಾಡಿದರು.