ಒತ್ತುವರಿಯಾಗಿದ್ದ ಬಿಡಿಎಗೆ ಸೇರಿದ್ದ 8.20 ಕೋಟಿ ರು. ಮೌಲ್ಯದ ಆಸ್ತಿ ವಶ

| N/A | Published : Jun 26 2025, 01:32 AM IST / Updated: Jun 26 2025, 08:16 AM IST

ಒತ್ತುವರಿಯಾಗಿದ್ದ ಬಿಡಿಎಗೆ ಸೇರಿದ್ದ 8.20 ಕೋಟಿ ರು. ಮೌಲ್ಯದ ಆಸ್ತಿ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಜೆ.ಪಿ.ನಗರ 9ನೇ ಹಂತದ 2ನೇ ಬ್ಲಾಕ್‌ನಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಅನಧಿಕೃತ ನಿರ್ಮಾಣಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧಿಕಾರಿಗಳು ತೆರವುಗೊಳಿಸಿ ಅಂದಾಜು 8.20 ಕೋಟಿ ರು. ಮೌಲ್ಯದ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ.

 ಬೆಂಗಳೂರು :  ಜೆ.ಪಿ.ನಗರ 9ನೇ ಹಂತದ 2ನೇ ಬ್ಲಾಕ್‌ನಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಅನಧಿಕೃತ ನಿರ್ಮಾಣಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧಿಕಾರಿಗಳು ತೆರವುಗೊಳಿಸಿ ಅಂದಾಜು 8.20 ಕೋಟಿ ರು. ಮೌಲ್ಯದ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ, ಆಲಹಳ್ಳಿ ಗ್ರಾಮದ ಸರ್ವೆ ನಂ. 84/1ರಲ್ಲಿನ ನಿವೇಶನ ಸಂಖ್ಯೆ 34, 73, 74, 114 ರಲ್ಲಿ ನಿವೇಶನಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಅನೇಕ ಬಾರಿ ಸೂಚನೆ ನೀಡಿದ್ದರೂ ಒತ್ತುವರಿದಾರರು ತೆರವು ಮಾಡಿರಲಿಲ್ಲ. ಇದರಿಂದ ಬುಧವಾರ ಕಾರ್ಯಾಚರಣೆ ನಡೆಸಿ ಅನಧಿಕೃವಾಗಿ ನಿರ್ಮಾಣಗಳನ್ನು ತೆರವುಗೊಳಿಸಿ, 7340 ಚದರ ಅಡಿ ವಿಸ್ತೀರ್ಣದ ಪ್ರದೇಶವನ್ನು ವಶಕ್ಕೆ ಪಡೆದರು.

ಕಾರ್ಯಾಚರಣೆಯಲ್ಲಿ ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಪಾಲ್ಗೊಂಡಿದ್ದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ತೆರವು ಕಾರ್ಯ ನಿರ್ವಹಿಸಿದರು.

Read more Articles on