ಸರ್ಕಾರಿ ಜಾಗ ಅತಿಕ್ರಮಿಸಿಕೊಂಡು ಅನಧಿಕೃತ ದಾಖಲೆ ಸೃಷ್ಟಿ

| Published : Jul 02 2025, 12:20 AM IST

ಸರ್ಕಾರಿ ಜಾಗ ಅತಿಕ್ರಮಿಸಿಕೊಂಡು ಅನಧಿಕೃತ ದಾಖಲೆ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ವಾಸವಿ ವಿದ್ಯಾಸಂಸ್ಥೆಯವರು ಸರ್ಕಾರಿ ಜಾಗವಾದ 80 ಸೆಂಟ್ ಸಾರ್ವಜನಿಕ ಸ್ಮಶಾನ ಜಾಗವನ್ನು ಅತಿಕ್ರಮಿಸಿಕೊಂಡು ಅನಧಿಕೃತ ದಾಖಲೆ ಸೃಷ್ಟಿಸಿಕೊಂಡಿದ್ದಾರೆ, ಈ ಹಿನ್ನೆಲೆ ಅತಿಕ್ರಮಿತ 80ಸೆಂಟ್ ಜಾಗ ತೆರವುಗೊಳಿಸಿ, ಟ್ರಂಚ್ ತೆಗೆಸುವ ಮೂಲಕ ಈ ಜಾಗ ಸಂರಕ್ಷಿಸಬೇಕು, ಇಲ್ಲದಿದ್ದರೆ ಸರ್ಕಾರಿ ಆಸ್ತಿ ಭೂಗಳ್ಳರಿಂದ ಉಳಿಸಿ ಎಂಬ ನಿಟ್ಟಿನಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಣಗಳ್ಳಿ ದಶರಥ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ದಿನಗಳ ಹಿಂದೆ ತಹಸೀಲ್ದಾರ್ ಈ ಜಾಗದ ಅತಿಕ್ರಮ ತೆರವುಗೊಳಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ತಿಳಿದು ನಗರಸಭೆ ಹಾಗೂ ಕಂದಾಯ. ಇಲಾಖೆ ಅಧಿಕಾರಿಗಳ ಜೊತೆ ನಾವು ಆಗಮಿಸಿದ್ದೆವೆ, ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸಂಸ್ಥೆಯವರಿಂದ ಮನವಿ ಸ್ವೀಕರಿಸಿ ವಾಪಸ್ಸಾಗಿದ್ದಾರೆ.

ವಾಸವಿ ವಿದ್ಯಾಸಂಸ್ಥೆಯವರು ಸೃಷ್ಟಿಸಿಕೊಂಡಿರುವ ದಾಖಲೆ 706 ಎ1ರಲ್ಲಿದೆ, ಅಲ್ಲಿಗೆ ಅವರು ಹೋಗಲಿ, ಅದನ್ನ ಬಿಟ್ಟು 706 ಎ ರಲ್ಲಿನವ ಜಾಗ ನಮ್ಮದು ಎಂದು ನಕಲಿ ದಾಖಲೆ ಸೃಷ್ಠಿಸಿ ವಾದ ಮಾಡುತ್ತಿದ್ದಾರೆ, ಅಧಿಕಾರಿಗಳನ್ನೇ ನೋಟೀಸ್ ನೀಡಿ ಎಂದು ಕೇಳುತ್ತಾರೆ, ಈ ಕ್ರಮ ಸರಿಯಲ್ಲ, ಇದು ಅಕ್ಷಮ್ಯ ಅಪರಾಧ, ಸರ್ಕಾರಿ ಜಾಗವನ್ನು ಈ ಸಂಸ್ಥೆಯವರೆ ಬಿಟ್ಟುಕೊಡಬೇಕು, ಅವರು ಬಿಟ್ಟುಕೊಡದದಿದ್ದರೆ ಜಿಲ್ಲಾಡಳಿತ ಅತಿಕ್ರಮ ತೆರವು ಮಾಡಲು ನಿರ್ಲಕ್ಷ್ಯ ಖಂಡಿಸಿ ಅಮರಣಾಂತ ಉಪವಾಸ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಸ್ತುತ ವಾಸವಿ ಸಂಸ್ಥೆ ಅತಿಕ್ರಮಿಸಿಕೊಂಡು ಆಟದ ಮೈದಾನವಾಗಿ ಬಳಸುತ್ತಿರುವ 80ಸೆಂಚ್ ಜಾಗ ಸರ್ಕಾರದ್ದು ಅದಕ್ಕೆ ನಗರಸಭೆ ಹಿಂದಿನ ಅಧಿಕಾರಿಗಳು ಶಾಮೀಲ್ಲಾಗಿ ನಕಲಿ ದಾಖಲೆ ನೀಡಿದ್ದಾರೆ, ಆದರೆ ಆರ್ ಟಿ ಸಿ ಯಲ್ಲಿ ಇದು ಇಂದಿಗೂ ಸರ್ಕಾರಿ ಸ್ಮಶಾನವಾಗಿಯೇ ಇದೆ. ಸರ್ಕಾರಿ ಜಾಗ ಎಂಬುದಕ್ಕೆ ದಾಖಲೆಗಳಿವೆ. ಹಾಗಾಗಿ ತಕ್ಷಣ ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.