ಸಾರಾಂಶ
Encroachment of space reserved for women's toilet: Outrage
ಕನ್ನಡಪ್ರಭ ವಾರ್ತೆ ಹುಣಸಗಿ
ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಮೀಸಲಿಟ್ಟಿರುವ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟುತ್ತಿರುವುದನ್ನು ಖಂಡಿಸಿ ಹಗರಟಗಿ ಗ್ರಾಮದಲ್ಲಿ ಮಹಿಳೆಯರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಸರಸ್ವತಿ ಕುಳಗೇರಿ ಮಾತನಾಡಿ, ಹಗರಟಗಿ ಗ್ರಾಮದಲ್ಲಿ ಮಹಿಳೆಯರ ಶೌಚಾಲಯಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಅಲ್ಲಿನ ನಿವಾಸಿಗಳು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರಿಂದ ದಿನನಿತ್ಯ ಮಹಿಳೆಯರು ಶೌಚಕ್ಕಾಗಿ ಪರದಾಡುವಂತಾಗಿದೆ. ಮೀಸಲಿಟ್ಟ ಜಾಗದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮವಾಗಿ ಮನೆಗಳನ್ನು ಕಟ್ಟುತ್ತಿರುವುದನ್ನು ತೆರವುಗೊಳಿಸಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸಿದರು.ಶಾಂತಮ್ಮ ಬಿದರಕುಂದಿ, ಕಾಶಿಬಾಯಿ ಬಿದರಕುಂದಿ, ನೀಲಮ್ಮ ನಾಗೂರ, ಸಾಬಮ್ಮ ಬಳಗಾನೂರ, ಬಸಮ್ಮ ಬಾಕಲಿ, ನೀಲಮ್ಮ ಬಿದರಕುಂದಿ ಸೇರಿದಂತೆ ಇತರರಿದ್ದರು.
-----ಫೋಟೊ:20ವೈಡಿಆರ್2:ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದಲ್ಲಿ ಮೀಸಲಿಟ್ಟ ಮಹಿಳಾ ಶೌಚಾಲಯದ ಸ್ಥಳದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿತುರುವುದನ್ನು ಖಂಡಿಸಿ ಮಹಿಳೆಯರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.