ಸಾರಾಂಶ
ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ಈದ್ ಉಲ್ ಫಿತ್ರ್ ಅನ್ನು ನಗರ, ಸೇರಿದಂತೆ ದಾವಣಗೆರೆ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಮುಸ್ಲಿಮರು ಆಚರಿಸಿದರು. ರಂಜಾನ್ ಅಂಗವಾಗಿ ಕಳೆದೊಂದು ತಿಂಗಳಿನಿಂದಲೂ ಉಪವಾಸ ಆಚರಿಸಿದ ಮುಸ್ಲಿಮರು ಗುರುವಾರ ಮಸೀದಿಗಳು, ಕಬರಸ್ಥಾನಗಳಲ್ಲಿ ಮಕ್ಕಳು, ಯುವಕರು, ಪುರುಷರು, ವಯೋವೃದ್ಧರೆನ್ನದೇ, ಹೊಸ ವಸ್ತ್ರಧಾರಿಗಳಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.
ದಾವಣಗೆರೆ: ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ಈದ್ ಉಲ್ ಫಿತ್ರ್ ಅನ್ನು ನಗರ, ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಮುಸ್ಲಿಮರು ಆಚರಿಸಿದರು.
ರಂಜಾನ್ ಅಂಗವಾಗಿ ಕಳೆದೊಂದು ತಿಂಗಳಿನಿಂದಲೂ ಉಪವಾಸ ಆಚರಿಸಿದ ಮುಸ್ಲಿಮರು ಗುರುವಾರ ಮಸೀದಿಗಳು, ಕಬರಸ್ಥಾನಗಳಲ್ಲಿ ಮಕ್ಕಳು, ಯುವಕರು, ಪುರುಷರು, ವಯೋವೃದ್ಧರೆನ್ನದೇ, ಹೊಸ ವಸ್ತ್ರಧಾರಿಗಳಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.ಹಳೇ ಪಿಬಿ ರಸ್ತೆಯ ಈದ್ಗಾ ಮೈದಾನ, ಮಾಗಾನಹಳ್ಳಿ ರಸ್ತೆಯ ರಜಾವುಲ್ಲಾ ಮುಸ್ತಫಾ ನಗರದ ಹೊಸ ಈದ್ಗಾ ಮೈದಾನ, ಕೈಗಾರಿಕಾ ಪ್ರದೇಶದ ಖಲಂದರಿಯಾ ಈದ್ಗಾ ಮೈದಾನ, ಇಂಡಸ್ಟ್ರಿಯಲ್ ಏರಿಯಾದ ಕಬರಸ್ಥಾನ ಇತರೆಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು, ಮಲೇಬೆನ್ನೂರು ಸೇರಿದಂತೆ ಇತರೆಡೆಗಳಲ್ಲೂ ಮುಸ್ಲಿಂ ಬಂಧುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಮಳೆ-ಬೆಳೆ, ಸರ್ವರ ಕಲ್ಯಾಣಕ್ಕಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು. ಪರಸ್ಪರರಿಗೆ ಸಿಹಿ ಹಂಚಿ, ಆಲಂಗಿಸಿ ಹಬ್ಬದ ಶುಭಾಶಯ ಕೋರಿದರು.