ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ಈಗಾಗಲೇ ಎರಡು ವರ್ಷ ಪೂರೈಸಿದೆ. ಮಹಿಳೆಯರನ್ನು ಸಶಕ್ತರನ್ನಾಗಿಸುವ ಮೂಲಕ ಉತ್ತಮ ಆಡಳಿತಕ್ಕೆ ಕೈಗನ್ನಡಿಯಾಗಿದೆ. ಪಂಚ ಗ್ಯಾರಂಟಿ ಅನುಷ್ಠಾನಗೊಳಿಸಿದ ಮುಖ್ಯಮಂತ್ರಿಗಳಿಗೆ ರಾಜ್ಯದ ಮಹಿಳೆಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷ 2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನಗೊಳಿಸ ಭರವಸೆ ನೀಡಿತ್ತು. ಇದರಲ್ಲಿ ಕಾರ್ಮಿಕ ಬಲದಲ್ಲಿ ಅವರ ಬಾಗೀದಾರಿಕೆ ಹೆಚ್ಚಿದೆ ಎಂದರು.ಈಗಾಗಲೇ ರಾಜ್ಯದಲ್ಲಿ 500 ಕೋಟಿ ಮಹಿಳೆಯರು ಶಕ್ತಿ ಯೋಜನೆ ಸದುಪಯೋಗಪಡಿಸಿಕೊಂಡಿದ್ದಾರೆ. ನಮ್ಮ ಮುದ್ದೇಬಿಹಾಳ ಘಟಕದಿಂದ ಸುಮಾರು 2.24 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ನಮ್ಮ ತಂದೆಯವರಾದ ಶಾಸಕ ಮತ್ತು ಕೆಎಸ್‌ಡಿಎಲ್ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಮಹಿಳೆಯರ ಮತ್ತು ವಿವಿಧ ಗ್ರಾಮಗಳಿಗೆ ಮತ್ತು ತಾಲೂಕು ಜಿಲ್ಲೆಗೆ ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾಂವಿ, ಬೆಂಗಳೂರು, ಮಂಗಳೂರು, ನಾರಾಯಣಪೂರ, ನಾಲತವಾಡ, ಬೈಲಕೂರ, ಕಂದಗನೂರ, ಹುಣಸಗಿ ಸೇರಿದಂತೆ ಅನೇಕ ಊರುಗಳಿಗೆ ತೆರಳಲು ಹೊಸದಾಗಿ 24 ಬಸ್‌ಗಳನ್ನು ಹೆಚ್ಚಿಸಿದ್ದಾರೆ. ಜೊತೆಗೆ ರಸ್ತೆ, ಕುಡಿಯುವ ನೀರು, ಶಾಲಾ ಕಟ್ಟಡಗಳ ದುರಸ್ಥಿ ಸೇರಿದಂತೆ ಅನೇಕ ಅಭಿವೃದ್ಧಿ ಪೂರಕ ಕಾಮಗಾರಿಗಳು ಭರದಿಂದ ಸಾಗಿವೆ. ಮುಂದಿನ ಮೂರು ವರ್ಷಗಳಲ್ಲಿ ಇನ್ನಷ್ಟು ಅನುದಾನ ತಂದು ಮಾದರಿ ಮತಕ್ಷೇತ್ರ ಮಾಡುವ ಗುರಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದು ಹೇಳಿದರು.----
ಕೋಟ್‌ಯೋಜನೆಗಳನ್ನು ಅನುಷ್ಠಾನಗೊಳಿಸಿ ಸರ್ಕಾರ ನುಡಿದಂತೆ ನಡೆದಿದೆ. ಆದರೆ, ವಿರೋಧ ಪಕ್ಷದವರು ಯೋಜನೆಯ ಕುರಿತು ಕಟು ಟೀಕೆಗಳನ್ನು ಮಾಡುತ್ತಿದ್ದಾರೆ. ಯೋಜನೆಗಳು ಪ್ರಯೋಜನಕಾರಿ ಎಂಬುದಕ್ಕೆ ಈ ಯೋಜನೆಯೇ ನಿದರ್ಶನ. ಪ್ರಾರಂಭದಲ್ಲಿ ಇದನ್ನು ರಾಜಕೀಯ ಗಿಮಿಕ್ ಅಂತಲೇ ಎಲ್ಲರೂ ಪರಿಗಣಿಸಿದ್ದರು. ಇದೀಗ ಸಾಮಾಜಿಕ ಪ್ರಯೋಜನದ ಆರ್ಥಿಕ ಯೋಜನೆಯಾಗಿ ಪರಿವರ್ತನೆಯಾಗಿದೆ. ಈ ಯೋಜನೆಯಿಂದಾಗಿ ಮಹಿಳೆಯರ ಆದಾಯ ಮತ್ತು ಉಳಿತಾಯದಲ್ಲಿ ಹೆಚ್ಚಳವಾಗಿದೆ.ಪಲ್ಲವಿ ನಾಡಗೌಡ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ