ಸಾರಾಂಶ
ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಕ್ರೀಡೆಗಳು ಆರೋಗ್ಯಕರವಾಗಿರುತ್ತದೆ. ತಾಲ್ಲೂಕು ಮಟ್ಟದಲ್ಲಿ ಜಯಗಳಿಸಿದ ತಂಡಗಳು ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ತಲುಪಿ ತಾಲ್ಲೂಕಿಗೆ ಕೀರ್ತಿ ತರಬೇಕು
ಕನ್ನಡಪ್ರಭ ವಾರ್ತೆ ಮಾಲೂರು
ಮನಸ್ಸು ಹಾಗೂ ದೇಹ ಆರೋಗ್ಯ ಸ್ಥಿರವಾಗಿರಲು ವಿದ್ಯಾರ್ಥಿಗಳು ವ್ಯಾಸಂಗ ಕಾಲದಲ್ಲಿ ಕ್ರೀಡೆಗಳಲ್ಲಿ ಹಂಚ್ಚಾಗಿ ಭಾಗವಹಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಹೋಂಡಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜೆ. ಎಸ್. ಎಸ್. ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿತಾಲ್ಲೂಕು ಮಟ್ಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಕ್ರೀಡೆಗಳು ಆರೋಗ್ಯಕರವಾಗಿರುತ್ತದೆ. ತಾಲ್ಲೂಕು ಮಟ್ಟದಲ್ಲಿ ಜಯಗಳಿಸಿದ ತಂಡಗಳು ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ತಲುಪಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಗೌರವ ರಕ್ಷೆ ಸ್ವೀಕಾರಶಾಸಕ ಕೆ.ವೈ.ನಂಜೇಗೌಡ, ಪೋಲಿಸ್ ಇನ್ಸ್ಪೆಕ್ಟರ್ ವಸಂತ್, ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಕ್ರೀಡಾ ಧ್ವಜಾರೋಹಣ, ಪಥಸಂಚಲನ, ಗೌರವ ರಕ್ಷಾ ಸ್ವೀಕಾರ ನಡೆಯಿತು. ತಂಡಗಳ ಪರಿಚಯವನ್ನು ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ಸುರೇಂದ್ರ ಗೌಡ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ಸುರೇಂದ್ರ ಗೌಡ, ದರಖಾಸ್ತು ಸಮಿತಿ ಸದಸ್ಯ ಬನಹಳ್ಳಿ ಸತೀಶ್ ಗೌಡ, ದಿನ್ನಹಳ್ಳ್ಳಿ ಡಿ.ಎನ್.ರಮೇಶ್ ಗೌಡ, ಶಿಕ್ಷಣ ಇಲಾಖೆಯ, ಟಿ.ಪಿ.ಒ ವಿ.ವೆಂಕಟೇಶ್, ಶಿವಲಿಂಗಯ್ಯ, ಗೋಪಿನಾಥ್, ಆನಂದ್, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು ಹಾಜರಿದ್ದರು.