ಧರ್ಮದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಶ್ರೇಷ್ಠ ಕೆಲಸ-ಕಾಗಿನೆಲೆ ಶ್ರೀ

| Published : Aug 20 2024, 12:53 AM IST

ಧರ್ಮದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಶ್ರೇಷ್ಠ ಕೆಲಸ-ಕಾಗಿನೆಲೆ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ಕೆಲಸಗಳು ಕೇವಲ ಗುರುಪೀಠಕ್ಕೆ ಸೀಮಿತಗೊಳ್ಳಬಾರದು, ತಾನು ಗುರ್ತಿಸಿಕೊಂಡ ಧರ್ಮವನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ಧರ್ಮದ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅತ್ಯಂತ ಶ್ರೇಷ್ಠವಾದ ಕೆಲಸ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಧಾರ್ಮಿಕ ಕೆಲಸಗಳು ಕೇವಲ ಗುರುಪೀಠಕ್ಕೆ ಸೀಮಿತಗೊಳ್ಳಬಾರದು, ತಾನು ಗುರ್ತಿಸಿಕೊಂಡ ಧರ್ಮವನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ಧರ್ಮದ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅತ್ಯಂತ ಶ್ರೇಷ್ಠವಾದ ಕೆಲಸ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ, ಪಟ್ಟಣದ ಅಗಸನಹಳ್ಳಿ ಬಳಿ ಕನಕಭವನ ಹಾಗೂ ಹೊರಬೀರಪ್ಪ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾಸ್ತಿಕ ಮನೋಭಾವನ ಅಪ್ರಸ್ತುತ: ವ್ಯಕ್ತಿ ನಾಸ್ತಿಕನಾದರೇ ಆತನ ಜೀವನವೇ ನಶ್ವರ ಎಂದೆನಿಸಲಿದೆ, ದೇವರು-ಧರ್ಮದ ಭಕ್ತಿ ಆಚರಣೆಗಳಲ್ಲಿ ತೊಡಗುವ ಮೂಲಕ ಆಸ್ತಿಕ ಮನೋಭಾವನೆಯಿಂದ ವ್ಯಕ್ತಿಯ ಮನಸ್ಸು ಶುದ್ಧಗೊಳ್ಳಲಿದೆ. ಅಂತರ್ಗತ ಸ್ವಭಾವ ಹಾಗೂ ಕಟ್ಟುಪಾಡು ಸಂಪ್ರದಾಯಗಳಿಂದ ಧರ್ಮದ ಆಚರಣೆಗಳು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿವೆ ಎಂದರು.

ಹೇರಲ್ಪಟ್ಟ ಭಕ್ತಿ ಬೇಡ: ಧಾರ್ಮಿಕ ಆಚರಣೆಗಳು ವ್ಯಕ್ತಿಗೆ ತನ್ನ ಬಾಲ್ಯದಿಂದಲೇ ರೂಢಿಸಿಕೊಂಡಿರುತ್ತಾನೆ. ಧರ್ಮವನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಪೋಷಕರು ನಮ್ಮನ್ನು ದೇವಸ್ಥಾನಗಳಲ್ಲಿನ ಚಾಕರಿ ಕೆಲಸಗಳಿಗೆ ಜಾತ್ರೆಗಳಿಗೆ ಕಳಹಿಸಿಕೊಡುವುದೂ ಸಹ ಇದೇ ಕಾರಣಕ್ಕಾಗಿ, ನಮ್ಮ ಶಿಸ್ತು ಬದ್ಧ ಜೀವನಕ್ಕೆ ಧರ್ಮದಿಂದ ಕಲಿಯವುದು ಬಹಳಷ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಭಕ್ತಿಯನ್ನು ನಮ್ಮ ಮೇಲೆ ಹೇರಲ್ಪಡಲಾಗುತ್ತಿದೆ ಎಂಬ ಮನೋಭಾವನೆ ರೂಢಿಸಿಕೊಳ್ಳುತ್ತಿರುವುದು ದುರಂತದ ಸಂಗತಿ ಎಂದರು.

ಶಾಲೆ ಗ್ರಂಥಾಲಯದಂತೆ ದೇವಸ್ಥಾನಗಳು ಬೇಕು: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಶಾಲೆ ಮತ್ತು ಗ್ರಂಥಾಲಯಗಳು ನಮ್ಮ ಬದುಕಿಗೆ ಎಷ್ಟು ಅವಶ್ಯವೋ ಅಷ್ಟೇ ಪ್ರಮಾಣದ ಅವಶ್ಯಕತೆ ದೇವಾಲಯಗಳು ಬೇಕಾಗಿದೆ. ಶಾಲೆಗಳಿಂದ ಜ್ಞಾನ ಸಂಪಾದನೆ ಕಲಿತರೇ ದೇವಾಲಯಗಳಿಂದ ಭಯ ಮತ್ತು ಭಕ್ತಿಗಳನ್ನು ರೂಢಿಸಿಕೊಳ್ಳುತ್ತಾನೆ. ಹೀಗಾಗಿ ನಮ್ಮ ಅಧಿಕಾರದ ಅವಧಿಯಲ್ಲಿ ಸಾಧ್ಯವಾದಷ್ಟು ದೇವಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಹಾಲುಮತ ಸಮಾಜದ ಮುಖಂಡರಾದ ಭೋಜರಾಜ ಕರೂದಿ, ಚಿಕ್ಕಪ್ಪ ಹಾದೀಮನಿ, ಮಹೇಶ ಉಜನಿ, ರವಿ ಕಂಬಳಿ, ಯಮನೂರಪ್ಪ ಉಜನಿ, ಶ್ರೀಕಾಂತ ಉಜನಿ, ಮಲ್ಲೇಶ ಬಣಕಾರ, ರಾಮಣ್ಣ ಚೌಟಿ, ವಸಂತ ಮಾಸಣಗಿ, ಸೋಮಶೇಖರ ಭರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.