ಕ್ರೀಡೆಗಳಲ್ಲಿ ತೊಡಗುವುದರಿಂದ ಮನಶಾಂತಿ: ಡಾ.ಎಸಿಎಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ

| Published : Mar 04 2024, 01:17 AM IST

ಕ್ರೀಡೆಗಳಲ್ಲಿ ತೊಡಗುವುದರಿಂದ ಮನಶಾಂತಿ: ಡಾ.ಎಸಿಎಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಮಹಾರಾಜ ಉದ್ಯಾನದಲ್ಲಿ ಡಾ.ಎ.ಸಿ.ಎಂ.ಮುನಿವೆಂಕಟೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಭಾನುವಾರ ಬೆಳಿಗ್ಗೆ ಏರ್ಪಡಿಸಲಾಗಿದ್ದ ಡಾ ಎ.ಸಿ. ಮುನಿವೆಂಕಟೇಗೌಡರ ಸಂಸ್ಮರಣೆ ಅಂಗವಾಗಿ ೪ನೇ ಜಿಲ್ಲಾ ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿ ನಡೆಯಿತು.

ಜಯಲಕ್ಷ್ಮಿ ಮುನಿವೆಂಕಟೇಗೌಡ । ಕರಾಟೆ ಪಂದ್ಯಾವಳಿಕನ್ನಡಪ್ರಭ ವಾರ್ತೆ ಹಾಸನ

ಯಾವುದೇ ಕ್ರೀಡೆ ಆಗಿರಲಿ ಅದರಲ್ಲೆ ಮುಂದುವರಿದರೇ ಆರೋಗ್ಯ ವೃದ್ಧಿಸುವುದರ ಜತೆಗೆ ಮನಶಾಂತಿ ದೊರೆಯುತ್ತದೆ ಎಂದು ಡಾ.ಎಸಿಎಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಜಯಲಕ್ಷ್ಮಿ ಮುನಿವೆಂಕಟೇಗೌಡ ಹೇಳಿದರು.

ನಗರದ ಮಹಾರಾಜ ಉದ್ಯಾನದಲ್ಲಿ ಡಾ.ಎ.ಸಿ.ಎಂ.ಮುನಿವೆಂಕಟೇಗೌಡ ಚಾರಿಟಬಲ್ ಟ್ರಸ್ಟ್, ಆಶ್ರಯ ಸೆಂಟರ್ ಫಾರ್ ಟ್ರನ್ಸ್‌ ಫಾರ್ಮೇಷನ್, ಡಾ.ಎಸಿಎಂ ನೆನಪಿನ ಬಳಗ, ಜಿಲ್ಲಾ ಕ್ರೀಡಾ ಪರಿಷತ್ ಹಾಗೂ ಜಿಲ್ಲಾ ಅಮೆಚೂರು ಬಾಡಿ ಬಿಲ್ಡರ್ರ್ಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಏರ್ಪಡಿಸಲಾಗಿದ್ದ ಡಾ ಎ.ಸಿ. ಮುನಿವೆಂಕಟೇಗೌಡರ ಸಂಸ್ಮರಣೆ ಅಂಗವಾಗಿ ೪ನೇ ಜಿಲ್ಲಾ ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮನುಷ್ಯರಾಗಿರುವ ನಾವು ಮಕ್ಕಳಿಂದಲೇ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ವ್ಯಾಯಾಮವೇ ಆಗಿರಬಹುದು, ಕ್ರೀಡೆ ಆಗಿರಬಹುದು, ಅದರಲ್ಲಿ ವಾಕಿಂಗ್, ಸ್ವಿಮಿಂಗ್ ಇರಬಹುದು, ಕಡೆಯವರೆಗ ಅದನ್ನು ಬೆಳೆಯಿಸಿಕೊಂಡರೆ ನಮ್ಮ ಆರೋಗ್ಯ ವೃದ್ದಿಸುವುದಲ್ಲದೆ ಮನಶಾಂತಿಯ ಸಮತೋಲನ ಕಾಪಾಡಿಕೊಳ್ಳಬಹುದು’ ಎಂದು ಹೇಳಿದರು.

ಎ.ಸಿ.ಮುನಿವೆಂಕಟೇಗೌಡರು ಬದುಕಿದ್ದ ಕಾಲದಲ್ಲಿ ಅವರ ವೈದ್ಯರಾದರೂ ಕೂಡ ಅವರು ವಾಲಿಬಾಲ್, ಪುಟ್ಬಾಲ್ ಆಟ ಎಂದರೆ ಪಂಚಪ್ರಾಣ ಎನ್ನುತ್ತಿದ್ದರು. ಯಾವುದಾದರೂ ಕ್ರೀಡೆಯನ್ನು ಆರಿಸಿಕೊಂಡು ನಿರಂಜನ್ ಮತ್ತು ಕೈಲಾಸ್ ಶಂಕರ್ ಸಹಕಾರದ ಮೂಲಕ ಉತ್ತಮವಾಗಿ ಆಯೋಜಿಸುತ್ತಿದ್ದರು. ಈ ಕ್ರಿಡೆಯಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳಿಗೂ ಶುಭ ಹಾರೈಸುವುದಾಗಿ ಹೇಳಿದರು.

ಹಿರಿಯ ಪತ್ರಕರ್ತೆ ಲೀಲಾವತಿ ಮಾತನಾಡಿ, ಕ್ರೀಡೆ ಎಂಬುದು ಮನುಷ್ಯನ ಆರೋಗ್ಯ ಕಾಪಾಡುವುದಲ್ಲದೇ ಆತ್ಮವಿಶ್ವಾಸ ತಂದುಕೊಡುತ್ತದೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೊಡಲು ಅನೇಕರು ಕಳೆದ ೪೫ ವರ್ಷಗಳಿಂದಲೂ ಕ್ರೀಡೆ ನಡೆಸಿಕೊಂಡು ಬರುತ್ತಿದ್ದಾರೆ. ಜಿಲ್ಲಾ ಮಟ್ಟದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯಲ್ಲಿ ಎಲ್ಲಾ ಕ್ರೀಡಾಪಟುಗಳು ಭಾಗವಹಿಸಿ ಉತ್ತಮ ಆಟ ಪ್ರದರ್ಶಿಸುವಂತೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಕರಾಟೆ ಹಾಗೂ ಇತರೆ ಕ್ರೀಡೆಗೆ ಅನುಕೂಲದ ದೃಷ್ಟಿಯಲ್ಲಿ ಮಂಜುನಾಥ್ ಸುಮಾರು ೭೫ ಸಾವಿರ ರು. ಬೆಲೆ ಬಾಳುವ ನೆಲ ಹಾಸಿನ ಮ್ಯಾಟನ್ನು ಉಡುಗೊರೆಯಾಗಿ ನೀಡಿದರು. ಚಂದ್ರಮ್ಮ ೧೦ ಸಾವಿರ ರು. ಅನ್ನು ಸಂಸ್ಥೆಗೆ ಕೊಟ್ಟರು.

ಹಾಸನ ಜಿಲ್ಲಾ ಕ್ರೀಡಾ ಪರಿಷತ್ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ, ಮಾನವ ಸಂಪನ್ಮೂಲ ಇಲಾಖೆ ಡೈಪುಟಿ ಮ್ಯಾನೇಜರ್ ಬಿ. ನಿತ್ಯಾವತಿ, ಚಂದ್ರಮ್ಮ, ಜನನಿ ಫೌಂಡೇಶನ್ ಅಧ್ಯಕ್ಷೆ ಭಾನುಮತಿ, ಕರಾಟೆ ಮಾಸ್ಟರ್ ಮಾದೇವ್, ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಹಿರಿಯರಾದ ನಿರಂಜನ್ ಹಾಗೂ ಕೈಲಾಸ್ ಶಂಕರ್ ಇದ್ದರು.ಹಾಸನದಲ್ಲಿ ಭಾನುವಾರ ಏರ್ಪಡಿಸಿದ್ದ ೪ನೇ ಜಿಲ್ಲಾ ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯನ್ನು ಡಾ.ಎ.ಸಿ.ಎಂ.ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಜಯಲಕ್ಷ್ಮಿ ಮುನಿವೆಂಕಟೇಗೌಡ ಉದ್ಘಾಟಿಸಿದರು.