ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಕಾವೇರಿ ಉದ್ಯಾನವನದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕೃಷಿಕ ಅಲಯನ್ಸ್ ಸಂಸ್ಥೆ ಮತ್ತು ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಅಭಿಯಂತರರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ದೇಶಕ್ಕೆ ಮತ್ತು ವಿಶ್ವಕ್ಕೆ ಅಪಾರ ಕೊಡುಗೆ ನೀಡಿದವರಲ್ಲಿ ಪ್ರಮುಖರಾದ ಕರ್ನಾಟಕದ ಮೋಕ್ಷಗುಂಡಂ ಸರ್‌ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನೇ ರಾಷ್ಟ್ರೀಯ ಅಭಿಯಂತರರ ದಿನ ಎಂದು ಘೋಷಿಸಿತು. ೧೯೬೮ರಿಂದ ಆರಂಭಗೊಂಡು ಇಂದಿನವರೆಗೂ ಎಂಜಿನಿಯರ್ಸ್ ಡೇ ಆಚರಣೆಯಾಗುತ್ತಿದೆ ಎಂದು ನುಡಿದರು.ಹೈದರಬಾದ್‌ನ ಅವಳಿ ನಗರಗಳಿಗೆ ಕುಡಿಯುವ ನೀರಿನ ಮೂಲವಾಗಿರುವ ಅವಳಿ ಜಲಾಶಯಗಳ ನಿರ್ಮಾಣ. ವಿನ್ಯಾಸಕ, ಕ್ರಿಯೆ, ಇವೆಲ್ಲವೂ ಭಾರತ ಹೆಮ್ಮೆ ಪಡಬಹುದಾದ ಮೊದಲ ತಲೆಮಾರಿನ ಎಂಜಿನಿಯರಿಂಗ್ ತಜ್ಞರಾಗಿದ್ದರು. ಒಳಚರಂಡಿ ವ್ಯವಸ್ಥೆಗೆ ಮೊದಲ ಬುನಾದಿ ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಸ್ಮರಿಸಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಶ್ರೀಲಂಕಾ ಮತ್ತು ತಾಂಜೀನಿಯಾದಲ್ಲೂ ಕೂಡ ಇವರ ಜನ್ಮದಿನವನ್ನು ಆಚರಿಸಿ, ಅಲ್ಲಿನ ಎಂಜನಿಯರ್‌ಗಳ ಸೇವೆಯನ್ನು ಸ್ಮರಿಸಲಾಗುತ್ತದೆ ಎಂದರು.ಸರ್ ಎಂ.ವಿಶ್ವೇಶ್ವರಯ್ಯನವರು ೧೯೧೨ರಿಂದ ಮೈಸೂರಿನ ಅರಸು ನಾಲ್ವಡಿ ಅವರ ಕಾಲಾವಧಿಯಲ್ಲಿ ದಿವಾನರಾಗಿ ಸೇವೆ ಸಲ್ಲಿಸಿದರು. ಕೆಆರ್‌ಎಸ್ ನಿರ್ಮಾಣದಲ್ಲಿ ಇವರ ಸೇವೆ ಅನನ್ಯ, ಜಲಾಶಯಗಳಿಗೆ ಪ್ರವಾಹ ದ್ವಾರಗಳನ್ನು ಸ್ವಯಂಚಾಲಿತವಾಗಿ ತೆರೆಯುವ ವಿಶ್ವದ ಮೊದಲ ವ್ಯವಸ್ಥೆಯನ್ನು ಅವರು ಕಂಡುಹಿಡಿದರು ಎಂದರು.
ಇದೇ ವೇಳೆ ಎಂಜಿನಿಯರ್‌ಗಳಾದ ಚಂದ್ರಶೇಖರ್, ಎಚ್.ಎಚ್.ಕುಮಾರ್, ಡಿ.ಶಿವರಾಜು, ಎಚ್.ಜೆ.ಸುರೇಶ್ ಅವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ವಲಯಾಧ್ಯಕ್ಷ ಪ್ರೊ.ಬಿ.ಎಸ್. ಶಿವಕುಮಾರ್, ಶಿಕ್ಷಕ ಶಶಿಧರ ಈಚೆಗೆರೆ, ಜಗದೀಶ್, ಕೆ.ಎಂ ಕುಮಾರ್, ಪ್ರೊ.ಡೇವಿಡ್, ಎನ್ ಕೃಷ್ಣಪ್ಪ, ಎಂ.ಲೋಕೇಶ್, ಎಸ್.ರಮೇಶ್, ಎಂಜಿನಿಯರ್‌ಗಳಾದ ಕಾಳೇಗೌಡ, ಕೆಂಪರಾಜು, ಉಮಾಶಂಕರ್, ನಾಗರಾಜು, ಪುರುಷೋತ್ತಮ್, ಕೀಲಾರ ಕೃಷ್ಣೇಗೌಡ ಮುಸಂತಾದವರು ಉಪಸ್ಥಿತರಿದ್ದರು.
ನಾಳೆ ವಿಶ್ವಕರ್ಮ ಜಯಂತ್ಯುತ್ಸವಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ವಿಶ್ವಕರ್ಮ ಜಯಂತಿ ಸೆ.೧೭ರಂದು ಮಧ್ಯಾಹ್ನ ೦೨ಗಂಟೆಗೆ ನಡೆಯಲಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎಂ.ಎನ್.ಸುದರ್ಶನ್‌ಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿನ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಕಾರಿ ಕಚೇರಿಯಿಂದ ಮೆರವಣಿಗೆ ನಡೆಯಲಿದೆ ಎಂದರು.
ವಿಶ್ವ ಒಕ್ಕಲಿಗ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮುಡಾ ಅಧ್ಯಕ್ಷ ನಯೀಮ್ ಭಾಗವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ವಿಶೇಷ ಆಹ್ವಾನಿತರಾಗಿ ಜಿಲ್ಲಾಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಸಿ ಬಿ.ಸಿ.ಶಿವಾನಂದಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಸೇರಿದಂತೆ ಇತರರು ಭಾಗವಹಿಸುವರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ೧೧ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಮುಖಂಡರಾದ ಬಸವರಾಜು, ಪುಟ್ಟಸ್ವಾಮಿ, ಬಿ.ವಿ.ಸೋಮು, ನರಸಿಂಹಚಾರ್ ಇತರರು ಗೋಷ್ಠಿಯಲ್ಲಿದ್ದರು.