ಎಂಸಿಎಸ್ ಪಬ್ಲಿಕ್ ಶಾಲೆಯಲ್ಲಿ ಇಂಗ್ಲಿಷ್ ಹಬ್ಬ

| Published : Feb 19 2024, 01:36 AM IST

ಸಾರಾಂಶ

ಪಟ್ಟಣದ ಎಂಸಿಎಸ್ ಶಾಲೆಯಲ್ಲಿ ಇಂಗ್ಲಿಷ್ ಕವಿ ವಿಲಿಯಂ ಷೇಕ್ಸ್‌ ಸ್ಪಿಯರ್ ಸ್ಮರಣೆ ಪ್ರಯುಕ್ತ ಇಂಗ್ಲಿಷ್ ಹಬ್ಬ ಆಚರಿಸಲಾಯಿತು. ಶಾಲಾವರಣದಲ್ಲಿ ಇಂಗ್ಲಿಷ್ ಹಬ್ಬದ ವಸ್ತುಪ್ರದರ್ಶನ ಅನೇಕ ವಿಶೇಷತೆ, ಹೊಸತನಗಳಿಗೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಪಟ್ಟಣದ ಎಂಸಿಎಸ್ ಶಾಲೆಯಲ್ಲಿ ಇಂಗ್ಲಿಷ್ ಕವಿ ವಿಲಿಯಂ ಷೇಕ್ಸ್‌ ಸ್ಪಿಯರ್ ಸ್ಮರಣೆ ಪ್ರಯುಕ್ತ ಇಂಗ್ಲಿಷ್ ಹಬ್ಬ ಆಚರಿಸಲಾಯಿತು. ಶಾಲಾವರಣದಲ್ಲಿ ಇಂಗ್ಲಿಷ್ ಹಬ್ಬದ ವಸ್ತುಪ್ರದರ್ಶನ ಅನೇಕ ವಿಶೇಷತೆ, ಹೊಸತನಗಳಿಗೆ ಸಾಕ್ಷಿಯಾಯಿತು. ಇಂಗ್ಲಿಷ್ ಹಬ್ಬದ ಕಲರವದಲ್ಲಿ ಪುಟಾಣಿ ಕಂದಮ್ಮಗಳು ಹಾಡುಗಳಿಗೆ ಪುಟ್ಟಪುಟ್ಟ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ವಿದ್ಯಾರ್ಥಿಗಳ ನೃತ್ಯ, ನಾನಾ ವೇಶಧಾರಿಗಳ ಚಿತ್ತಾರವನ್ನು ಪೋಷಕರು. ಕಣ್ತುಂಬಿಕೊಂಡರು. ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಶೀಲಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿದೆ. ಇಂಗ್ಲಿಷ್ ಶ್ರೀಮಂತ ಭಾಷೆ ಎಂದರೆ ತಪ್ಪಾಗಲ್ಲ, ನಿತ್ಯ ಇಂಗ್ಲಿಷ್ ಬಳಕೆಯಾಗುತ್ತಿದೆ. ಇಂತಹ ಇಂಗ್ಲಿಷ್ ಹಬ್ಬದಿಂದ ಮಕ್ಕಳು ಇಂಗ್ಲಿಷ್ ಕಲಿಕೆಯಲ್ಲಿ ಮುಂದೆ ಬರಲು ಸಹಕಾರಿಯಾಗಿದೆ ಎಂದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಾಷೆಯ ಸಂಸ್ಕೃತಿ, ಮಹತ್ವ ತಿಳಿಸಿಕೊಡುವ ಜೊತೆಗೆ ನಾನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಅನೇಕ ವೈಶಿಷ್ಟ ಸಂಭ್ರಮಗಳಿಗೆ ಕಾರಣವಾಗಿದೆ ಎಂದರು. ಟ್ರಸ್ಟಿ ಡಿ.ಎನ್.ಮಹದೇವಪ್ಪ ಮಾತನಾಡಿ, ಸಂಸ್ಥೆಯ ಇಂಗ್ಲಿಷ್ ಹಬ್ಬದಿಂದ ಮಕ್ಕಳಲ್ಲಿ ಇಂಗ್ಲಿಷ್ ಕಲಿಕೆಗೆ ಪೂರಕವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಬಳಕೆ ಹಚ್ಚಿನ ಮಹತ್ವ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದರು. ಸಂಸ್ಥೆಯ ಎಒ ಆಡಳಿತಾಧಿಕಾರಿ ನಾಗರಾಜು ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ಇಂಗ್ಲಿಷ್ ಹಬ್ಬವನ್ನು ಅಯೋಜಿಸಿದ್ದು ಮಕ್ಕಳಲ್ಲಿ ಹೊಸಚೈತನ್ಯ ಜೊತೆಗೆ ಸಾಮಾಜಿ ಕಳಕಳಿ, ವೈಜ್ಞಾನಿಕ ಚಿಂತನೆ ಮೂಡಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ನೀಲಮ್ಮ, ಗೌರಿಸೆಂದಿಲ್, ಪ್ರಾಂಶುಪಾಲ ಕೆ.ಸಿ.ಶ್ರೀಧರಮೂರ್ತಿ, ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಚಿತ್ರಕಲಾ ಶಿಕ್ಷಕ ಸಂಪತ್‌ಕುಮಾರ್, ಶಿಕ್ಷಕಿ ಉಮೆಸನ್ಮಾಂ, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.