ಸಾರಾಂಶ
ಬಾಗಲಕೋಟೆ: ನೀರನ್ನು ಪೋಲಾಗದಂತೆ, ಕಲುಷಿತಗೊಳಿಸದೆ ಜಲಾಶಯಗಳಿಂದ ನೀರಾವರಿ ಮೂಲಕ ರೈತರಿಗೆ ತಲುಪುವಂತೆ ಮಾಡುವುದು ಬಹಳ ಮುಖ್ಯ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ನಿರ್ದೇಶಕ ಬಿ.ವೈ. ಬಂಡಿವಡ್ಡರ್ ಹೇಳಿದರು. ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಧಾರವಾಡದ ವಾಲ್ಮಿ ಸಂಸ್ಥೆ ಮತ್ತು ಬಾಗಲಕೋಟೆ ಬಿಇಸಿ ಸಂಸ್ಥೆಯೊಂದಿಗೆ ಜಂಟಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನೀರನ್ನು ಪೋಲಾಗದಂತೆ, ಕಲುಷಿತಗೊಳಿಸದೆ ಜಲಾಶಯಗಳಿಂದ ನೀರಾವರಿ ಮೂಲಕ ರೈತರಿಗೆ ತಲುಪುವಂತೆ ಮಾಡುವುದು ಬಹಳ ಮುಖ್ಯ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ನಿರ್ದೇಶಕ ಬಿ.ವೈ. ಬಂಡಿವಡ್ಡರ್ ಹೇಳಿದರು.ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಧಾರವಾಡದ ವಾಲ್ಮಿ ಸಂಸ್ಥೆ ಮತ್ತು ಬಾಗಲಕೋಟೆ ಬಿಇಸಿ ಸಂಸ್ಥೆಯೊಂದಿಗೆ ಜಂಟಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನೆಲ ಮತ್ತು ಜಲವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ನೀರಾವರಿ ಮೂಲಕ ರೈತರ ಜಮೀನುಗಳಿಗೆ ನೀಡಿ ಅವರಿಗೆ ಅನುಕೂಲ ಮಾಡಿಕೊಡುವುದು ಬಹಳಮುಖ್ಯವಾಗಿದೆ. ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಅತ್ಯುತ್ತಮ ತರಬೇತಿ ಸಂಸ್ಥೆಯಾಗಿದ್ದು, ಇಲ್ಲಿ ನೀವು ಕಲಿಯುವಾಗ ಎಲ್ಲ ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿಕೊಂಡು ಹೊರಗಡೆ ಬರಬೇಕು. ಸಮಾಜ ನಿಮ್ಮಿಂದ ಬಹಳಷ್ಟು ನಿರೀಕ್ಷಿಸುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಸುಪರಿಟೆಂಡೆಂಟ್ ಎಂಜಿನಿಯರ್ ಭೀಮಾ ನಾಯಕ್ ಮಾತನಾಡಿ, ನೀರಿನ ಒಂದು ತೊಟ್ಟನ್ನೂ ಪೋಲು ಮಾಡದೆ ಮುಂದಿನ ಪೀಳಿಗೆಗೆ ಶುದ್ಧವಾದ ನೀರು, ಉತ್ತಮ ನೆಲವನ್ನು ಹಸ್ತಾಂತರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಎಂಜಿನಿಯರ್ ಮಹಾದೇವನಗೌಡ ಹುತ್ತನಗೌಡರ ವಾಲ್ಮಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಮಳೆನೀರು ಸಂಗ್ರಹಣೆ ಮತ್ತು ಸದ್ಬಳಕೆ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಸ್. ಜಂಗಮಶೆಟ್ಟಿ ಅಧ್ಯಕ್ಷೀಯ ಮಾತುಗಳನ್ನಾಡಿದರು.ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್. ಹಿರೇಮಠ ಸ್ವಾಗತಿಸಿದರು. ಪ್ರೊ.ರಾಜಶೇಖರ ಸಿವಿಲ್ ವಿಭಾಗದ ಮಾಹಿತಿ ನೀಡಿದರು. ಪ್ರೊ.ಮಂಜುನಾಥ ಎಂ.ವೈ. ಪರಿಚಯಿಸಿದರು. ಡಾ.ಜಯಲತಾ ನಿರೂಪಿಸಿದರು. ಡಾ.ಜಿ.ಬಿ. ಮೆಗೇರಿ ವಂದಿಸಿದರು.