ಸಾರಾಂಶ
English mediam class inaugeration in Government School
ಹೊಳಲ್ಕೆರೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂಗ್ಲಿಷ್ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಹಂತ ಹಂತವಾಗಿ ಸರ್ಕಾರಿ ಶಾಲೆಗಳಲ್ಲಿ
ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶೀನಿವಾಸ್ ಹೇಳಿದರು.ತಾಲೂಕಿನ ಬೊಮ್ಮನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗೆ ಚಾಲನೆ ನೀಡಿ ಮಾತನಾಡಿದರು .
ಇಂಗ್ಲಿಷ್ ಶಿಕ್ಷಣ ಕೊಡುವುದು ಸರ್ಕಾರದ ಉದ್ದೇಶ, ಇಂಗ್ಲಿಷ್ ಮಾಧ್ಯಮ ಆರಂಭ ಮಾಡುವ ಶಾಲೆಗಳಿಗೆ ಮೂಲ ಸೌಕರ್ಯ ನೀಡಿ ಶಿಕ್ಷಕರನ್ನು ನೇಮಿಸಲಾಗುವುದು, ಪೋಷಕರು ಖಾಸಗಿ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು,ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಥ್ ಮಾತನಾಡಿ, ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಿದ ಮೊದಲ ವರ್ಷವೇ ಒಂದನೇ ತರಗತಿಗೆ 13 ವಿದ್ಯಾರ್ಥಿ ಗಳು ದಾಖಲಾಗಿರುವುದು ಸಂತೋಷದ ಸಂಗತಿ ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗಸ್ವಾಮಿ, ಎಸ್‌ಡಿಎಂಸಿ ಆಧ್ಯಕ್ಷ ಕೆ. ರವಿನಾಯ್ಕ, ರೂಪ ಕರಿಯಮ್ಮ , ಪ್ರಮೀಳ, ರೂಪ, ಬಿಆರ್‌ಸಿ ಮನೋಹರ್ , ರುದ್ರಪ್ಪ, ಮುಖ್ಯ ಶಿಕ್ಷಕ ಎಚ್ ಸಾವಿತ್ರಮ್ಮ , ಮಾಲತಿ ರುದ್ರಮ್ಮ , ಸಿ.ರಾಜಪ್ಪ ಶಬಾನಾ ಹಾಗೂ ಗ್ರಾಮಸ್ದರು ಇದ್ದರು.-------
ಪೋಟೋ : 9 ಹೆಚ್ ಎಲ್ ಕೆ 2ಹೊಳಲ್ಕೆರೆ ತಾಲೂಕಿನ ಬೊಮ್ಮನಕಟ್ಟೆ ಸರ್ಕಾರಿ ಶಾಲೆಯಲ್ಲಿ ಬಿಇಒ ಎಚ್ .ಶ್ರೀನಿವಾಸ್, ಇಂಗ್ಲಿಷ್ ಮಾಧ್ಯಮ ತರಗತಿಗೆ ಚಾಲನೆ ನೀಡಿದರು.
-----