ನಗರದೆಲ್ಲೆಡೆ ಮತ್ತೆ ಆಂಗ್ಲ ನಾಮಫಲಕಗಳ ಹಾವಳಿ: ಕರವೇ ಖಂಡನೆ

| Published : Sep 23 2025, 01:03 AM IST

ನಗರದೆಲ್ಲೆಡೆ ಮತ್ತೆ ಆಂಗ್ಲ ನಾಮಫಲಕಗಳ ಹಾವಳಿ: ಕರವೇ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಾದ್ಯಂತ ಪ್ರಮುಖ ವೃತ್ತ, ರಸ್ತೆಗಳು ಸೇರಿದಂತೆ ಎಲ್ಲೆಡೆ ಆಂಗ್ಲ ನಾಮಫಲಕಗಳು ರಾರಾಜಿಸುತ್ತಿವೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದ್ದಾರೆ.

- ಕ್ರಮ ಕೈಗೊಳ್ಳದಿದ್ದರೆ ವೇದಿಕೆಯಿಂದಲೇ ತೆರವು: ರಾಮೇಗೌಡ

- - -

ದಾವಣಗೆರೆ: ನಗರಾದ್ಯಂತ ಪ್ರಮುಖ ವೃತ್ತ, ರಸ್ತೆಗಳು ಸೇರಿದಂತೆ ಎಲ್ಲೆಡೆ ಆಂಗ್ಲ ನಾಮಫಲಕಗಳು ರಾರಾಜಿಸುತ್ತಿವೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ವರ್ಷಗಳಿಂದ ಆಂಗ್ಲ ನಾಮಫಲಕಗಳ ಮತ್ತು ಪರಭಾಷೆಗಳ ಫಲಕಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಇತ್ತೀಚೆಗೆ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಹೋರಾಟದ ನಡೆಸಲಾಗಿತ್ತು. ಇದರ ಫಲವಾಗಿ ರಾಜ್ಯ ಸರ್ಕಾರ 60 ಮತ್ತು 40 ಅನುಪಾತದಲ್ಲಿ ಶೇ.60ರಷ್ಟು ಕನ್ನಡದಲ್ಲಿ ನಾಮಫಲಕಗಳನ್ನು ಹಾಕಬೇಕೆಂದು ಆದೇಶ ಮಾಡಿದೆ. ಅದರಂತೆ ಜಿಲ್ಲಾಧಿಕಾರಿ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆದಂತೆ ಕಾಣುತ್ತಿಲ್ಲ ಎಂದಿದ್ದಾರೆ.

ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಕೆಲವು ಅಂಗಡಿಗಳ ನಾಮಫಲಕಗಳು, ಜಾಹೀರಾತು ಫಲಕಗಳು ಹಾಗೂ ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿಗಳು ಆಂಗ್ಲ ನಾಮಫಲಕ ಹಾಕಿವೆ. ತಕ್ಷಣ ಮಹಾನಗರ ಪಾಲಿಕೆ ಆಯುಕ್ತರು ನಗರದಲ್ಲಿ ಪರಿಶೀಲಿಸಿ, ಆಂಗ್ಲ ಜಾಹೀರಾತು ಫಲಕಗಳ ತೆರವುಗೊಳಿಸಲು ಕ್ರಮ ಜರುಗಿಸಬೇಕು. ಶೇ.60ರಷ್ಟು ಕನ್ನಡದಲ್ಲಿ ನಾಮಫಲಕಗಳನ್ನು ಹಾಕಿಸಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಅಂತಹ ನಾಮಫಲಕಗಳನ್ನು ಕಿತ್ತು ಹಾಕಲಾಗುವುದೆಂದು ರಾಮೇಗೌಡ ಎಚ್ಚರಿಕೆ ನೀಡಿದ್ದಾರೆ.

- - -

-22ಕೆಡಿವಿಜಿ46, 47, 48, 49: ದಾವಣಗೆರೆಯಲ್ಲಿ ಎಲ್ಲೆಡೆ ರಾರಾಜಿಸುತ್ತಿರುವ ಆಂಗ್ಲನಾಮಫಲಕಗಳು.