ಸಾರಾಂಶ
ಕೊಟ್ಟೂರು: ಶಾಲಾ ಮಕ್ಕಳು ಆಂಗ್ಲ ಸೇರಿ ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಮನೆಯಲ್ಲಿ ಅವರಿಗೆ ಪೋಷಕರು ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲಿಸಬೇಕು ಎಂದು ಭಾಗೀರಥಿ ಪಿಯು ಕಾಲೇಜು ಪ್ರಾಚಾರ್ಯೆ ನಿರ್ಮಲಾ ಶಿವನಗುತ್ತಿ ಹೇಳಿದರು.
ಪಟ್ಟಣದ ವಿದ್ಯಾ ಭಾರತಿ ಶಾಲೆ ಆವರಣದಲ್ಲಿ ತಾಲೂಕು ಅನುದಾನಿತ ರಹಿತ ಖಾಸಗಿ ಶಾಲೆಗಳ ಒಕ್ಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನಾಡು ನುಡಿ ಸಂಸ್ಕೃತಿ ವಿಶ್ವದಲ್ಲಿಯೇ ವಿಶೇಷ ಹಾಗೂ ವಿಶಿಷ್ಟವಾದುದು. ಜೇನಿನ ಸಿಹಿಯಂತಿರುವ ಕನ್ನಡ ಭಾಷೆ ಕಲಿಯುವುದು ಬಹು ಸುಲಭ. ಮಾತನಾಡಲು ಇನ್ನೂ ಸುಲಭ. ಹೊರ ರಾಜ್ಯದವರು ಕೆಲಸ ಅರಸಿ ಬರುವ ಪ್ರತಿಯೊಬ್ಬರೂ ಕನ್ನಡ ಕಲಿಯುವುದು ಅವಶ್ಯವಿದೆ. ಇತ್ತೀಚಿಗೆ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದು ಸಾಮಾನ್ಯವಾಗಿದೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಭಾಷೆ ಪಾಠ ಹೇಳಲಾಗುತ್ತಿದೆ. ಆದರೂ ಪೋಷಕರು ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂದು ಹೇಳಿದುರ.ಒಕ್ಕೂಟದ ಗೌರವ ಅಧ್ಯಕ್ಷ, ಗುರುದೇವ ವಿದ್ಯಾ ಪ್ರಸಾರ ಪರಿಷತ್ ಕಾರ್ಯದರ್ಶಿ ಪಿ. ಶ್ರೀಧರ ಶೆಟ್ಟಿ ಮಾತನಾಡಿ, ಕನ್ನಡ ಭಾಷೆಯ ಹಳೆ, ನಡು ಮತ್ತು ಹೊಸ ಕನ್ನಡದಲ್ಲಿ ಅನೇಕರು ರಚಿಸಿರುವ ಸಾಹಿತ್ಯ ಸಾರಸತ್ವ ಲೋಕದಲ್ಲಿ ವಿಶಿಷ್ಟವಾಗಿದೆ. ದೇಶದಲ್ಲಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಕನ್ನಡದ ಸಾಹಿತಿಗಳು ಎಂಬ ಹೆಮ್ಮೆ ನಮ್ಮದು. ಕನ್ನಡ ಎಂದಿಗೂ ಅಳಿಯದ ಭಾಷೆ. ಆದರೆ ಅದರ ಬಳಕೆಯನ್ನು ಕಡಿಮೆ ಮಾಡದೇ ಮುಂದಿನ ಪೀಳಿಗೆಗೂ ಮುಂದುವರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಒಕ್ಕೂಟದ ಕಾರ್ಯದರ್ಶಿ, ಇಂದು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್. ವೀರಭದ್ರಪ್ಪ ಮಾತನಾಡಿ, ಕನ್ನಡ ನಾಡು ನುಡಿಯ ಕುರಿತು ಇಂದಿನ ಮಕ್ಕಳಿಗೆ ಪಠ್ಯದಲ್ಲಿರುವುದನ್ನು ಮಾತ್ರವಲ್ಲದೇ ಎಲ್ಲ ಇತಿಹಾಸ ಪರಂಪರೆಯನ್ನು ಹೇಳಿಕೊಡಬೇಕು. ಕನ್ನಡ ನಾಡಿನಲ್ಲಿ ಇರುವ ಅನೇಕ ಸಾಹಿತಿಗಳ ಸಾಹಿತ್ಯದಿಂದ, ಸಿನಿಮಾ, ರಂಗಭೂಮಿ ಮೂಲಕ ಕನ್ನಡದ ಘಮಲನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾರೆ ಎಂದರು.ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಂಬೂರು ಕುಮಾರಸ್ವಾಮಿ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಬಿ. ಪಂಪಾಪತಿ ಪ್ರಾಸ್ತಾವಿಕ ಮಾತನಾಡಿದರು. ಒಕ್ಕೂಟದ ಖಜಾಂಚಿ ಎಂಎಂಜೆ ಶೋಭಿತ್, ಶಿಕ್ಷಣ ಸಂಸ್ಥೆಗಳ ಜೆ.ಹರ್ಷ, ಹಸನ್, ಖಾಜಾಭಾಷ, ವಿಜಯಲಕ್ಮೀ ಇತರರು ಇದ್ದರು. ನಂತರ ವಿವಿಧ ಶಾಲೆ ಮಕ್ಕಳಿಂದ ಕನ್ನಡ ಪರ ಹಾಡು, ನೃತ್ಯ ಕಾರ್ಯಕ್ರಮ ನಡೆಯಿತು.
;Resize=(128,128))
;Resize=(128,128))
;Resize=(128,128))