ಮಹಾತ್ಮರ ವಿಚಾರಧಾರೆಗಳಿಂದ ಜ್ಞಾನಾರ್ಜನೆ ವೃದ್ಧಿ

| Published : Dec 17 2024, 01:03 AM IST

ಮಹಾತ್ಮರ ವಿಚಾರಧಾರೆಗಳಿಂದ ಜ್ಞಾನಾರ್ಜನೆ ವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದತ್ತಿ ಉಪನ್ಯಾಸಗಳಿಂದ ಮಹಾತ್ಮರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದು ವಾಣಿಜ್ಯೋದ್ಯಮಿ ಸಂಗಮೇಶ ಗುಡ್ಡೋಡಗಿ ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ದತ್ತಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ದತ್ತಿ ಗೋಷ್ಠಿಗಳು ಜ್ಞಾನಾರ್ಜನೆಯ ಪ್ರತೀಕ ಎಂದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದತ್ತಿ ಉಪನ್ಯಾಸಗಳಿಂದ ಮಹಾತ್ಮರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದು ವಾಣಿಜ್ಯೋದ್ಯಮಿ ಸಂಗಮೇಶ ಗುಡ್ಡೋಡಗಿ ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ದತ್ತಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ದತ್ತಿ ಗೋಷ್ಠಿಗಳು ಜ್ಞಾನಾರ್ಜನೆಯ ಪ್ರತೀಕ ಎಂದರು. ಅಧ್ಯಕ್ಷತೆ ವಹಿಸಿದ್ದ ಬಸವನ ಬಾಗೇವಾಡಿಯ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಇಂದು ನಾವೆಲ್ಲರೂ ಪಚನ ಮಾಡಿಕೊಳ್ಳಬೇಕಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಶಿಕ್ಷಣ ಸಾವ೯ತ್ರಿಕರಣವಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಥಮಿಕ ಶಿಕ್ಷಣದ ಮಹತ್ವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ತಿಕೋಟಾ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠಮ, ರಾಷ್ಟ್ರದ ಭದ್ರಬುನಾದಿ ಎಂದರೆ ಅದು ಪ್ರಾಥಮಿಕ ಶಿಕ್ಷಣ. ಪ್ರಾಥಮಿಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರದ ಬೀಜ ಬಿತ್ತಬೇಕು ಎಂದು ಹೇಳಿದರು.

ಭಾಸ್ಕರಾಚಾರ್ಯರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ ವಿಜಯಪುರ ತಾಲೂಕಾ ಕಸಾಪ ಅಧ್ಯಕ್ಷ ಡಾ.ಆನಂದ ಕುಲಕರ್ಣಿ, ದಶಮಾನ ಪದ್ಧತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರ ಪದ್ಧತಿಯನ್ನು ಮೊಟ್ಟಮೊದಲ ಬಾರಿಗೆ ಬಳಕೆಗೆ ತಂದ ಕೀರ್ತಿ ಭಾಸ್ಕರಾಚಾರ್ಯರಿಗೆ ಸಲ್ಲುತ್ತದೆ. ಭಾರತದ ಖ್ಯಾತ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞರಾಗಿ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಇಡೀ ಜಗತ್ತು ಭಾರತದ ಕಡೆ ನೋಡುವಂತೆ ಮಾಡಿದ ಕೀರ್ತಿ ನಿಜಕ್ಕೂ ಭಾಸ್ಕರಾಚಾರ್ಯರಿಗೆ ಸಲ್ಲುತ್ತದೆ. ಅಷ್ಟೆ ಅಲ್ಲದೇ, ಇವರು ನಮ್ಮ ವಿಜಯಪುರದ ಹೆಮ್ಮೆ ಎಂಬುದು ನಮಗೆಲ್ಲ ಅಭಿಮಾನ ತರುವ ಸಂಗತಿ ಸ್ಮರಿಸಿದರು.ಬಸವಣ್ಣನವರ ಸಮಕಾಲಿನ ಶರಣರ ಚಿಂತನೆಗಳ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ, ಬಸವಾದಿ ಶಿವಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು. ವಚನಕಾರರ ವಚನಗಳ ಸಾರವನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬುದ್ಧ ದರ್ಶನ ಕೃತಿಕಾರರಾದ ವೈ.ಎಚ್ ಲಂಬು, ಇವಣಗಿಯ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧರಾಮ ಬಿರಾದಾರ ಹಾಗೂ ವಿಜಯಪುರದ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ತಾಲೂಕ ನಿರ್ದೇಶಕ ಅರ್ಜುನ ಶಿರೂರ ಹಾಗೂ ಬಸವನಬಾಗೇವಾಡಿಯ ಭರತನಾಟ್ಯ ಕಲಾವಿದೆ ಲಕ್ಷ್ಮಿ ಮನಗೂಳಿ ಅವರನ್ನು ಸನ್ಮಾನಿಸಲಾಯಿತು.

ನರೇಂದ್ರ ಬೆಳಂಬಗಿ, ಕಸಾಪ ಜಿಲ್ಲಾ ಪದಾಧಿಕಾರಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ.ಮಾಧವ ಗುಡಿ, ಅಭಿಷಕ ಚಕ್ರವರ್ತಿ, ರವಿ ಕಿತ್ತೂರ, ರಾಜೇಸಾಬ ಶಿವನಗುತ್ತಿ, ಶಿವಾನಂದ ಡೋಣುರ, ಸುಖದೇವಿ ಅಲಬಾಳಮಠ, ಮಲ್ಲಿಕಾರ್ಜುನ ಬಗಲಿ, ಜಿ.ಎಸ್ ಬಳ್ಳೂರ, ಉಮಾ ಕಪ್ಪನ್ಞವರ, ಶಿವಪುತ್ರ ಅಂಕದ, ಲಕ್ಷ್ಮೀ ಬಿರಾದಾರ, ಅಬ್ದುಲ್ ಕಯೂಮ್ ಅವಟಿ, ಬಸಲಿಂಗಯ್ಯ ಸಾರವಾಡ, ಶಿವಾಜಿ ಮೋರೆ, ವೈಷ್ಣವಿ ಮಾನೆ, ಶಾಂತಾ ವಿಭೂತಿ, ಅಹಮ್ಮದ್ ವಾಲೀಕಾರ, ಶರಣಗೌಡ ಗೌಡರ ಮುಂತಾದವರು ಉಪಸ್ಥಿತರಿದ್ದರು. ಕೆ.ಎಸ್.ಹಣಮಾಣಿ ನಿರೂಪಿಸಿದರು. ಪರವೀನ ಶೇಖ್‌ ಸ್ವಾಗತಿಸಿ ಗೌರವಿಸಿದರು. ಜಯಶ್ರೀ ಹಿರೇಮಠ ವಂದಿಸಿದರು.---------ಕೋಟ್‌

ಭಾರತದ ಖ್ಯಾತ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞರಾಗಿ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಇಡೀ ಜಗತ್ತು ಭಾರತದ ಕಡೆ ನೋಡುವಂತೆ ಮಾಡಿದ ಕೀರ್ತಿ ನಿಜಕ್ಕೂ ಭಾಸ್ಕರಾಚಾರ್ಯರಿಗೆ ಸಲ್ಲುತ್ತದೆ. ಅಷ್ಟೆ ಅಲ್ಲದೇ, ಅವರು ನಮ್ಮ ವಿಜಯಪುರದ ಹೆಮ್ಮೆ ಎಂಬುದು ನಮಗೆಲ್ಲ ಅಭಿಮಾನ ತರುವ ಸಂಗತಿ.

- ಡಾ.ಆನಂದ ಕುಲಕರ್ಣಿ, ಕಸಾಪ ತಾಲೂಕು ಅಧ್ಯಕ್ಷ