ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ನೋಂದಣಿ ಮಾಡಿಸಿ-ಮಾಜಿ ಶಾಸಕ ಸಜ್ಜನರ

| Published : Nov 17 2025, 01:45 AM IST

ಸಾರಾಂಶ

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅರ್ಹ ಮತದಾರರನ್ನು ನೋಂದಣಿ ಮಾಡಿಸಲು ಚುನಾವಣೆ ಆಯೋಗವು ನ. 25ರಿಂದ ಡಿ.10ರ ವರೆಗೆ ಅವಧಿಯನ್ನು ವಿಸ್ತರಣೆಗೊಳಿಸಿದ್ದು, ಹೀಗಾಗಿ ಈ ಅವಧಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ನೋಂದಣಿ ಮಾಡಿಸಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.

ಹಾವೇರಿ:ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅರ್ಹ ಮತದಾರರನ್ನು ನೋಂದಣಿ ಮಾಡಿಸಲು ಚುನಾವಣೆ ಆಯೋಗವು ನ. 25ರಿಂದ ಡಿ.10ರ ವರೆಗೆ ಅವಧಿಯನ್ನು ವಿಸ್ತರಣೆಗೊಳಿಸಿದ್ದು, ಹೀಗಾಗಿ ಈ ಅವಧಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ನೋಂದಣಿ ಮಾಡಿಸಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರ ನೋಂದಣಿ ಅವಧಿ ವಿಸ್ತರಣೆ ಕುರಿತ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸದರ ಸಭೆಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ವಾರ್ಡ್‌ನಲ್ಲಿ ಪ್ರಮುಖರು, ಬೂತ್‌ ಅಧ್ಯಕ್ಷರು, ಅರ್ಹ ಪದವೀಧರ ಮತದಾರರು ಮನೆ ಮನೆಗೆ ತೆರಳಿ ಮತದಾರ ನೋಂದಣಿಯ ಅರ್ಜಿ ನಮೂನೆ-18 ಫಾರ್ಮ್ ಭರ್ತಿ ಮಾಡಿಕೊಟ್ಟು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿಸಿ ತಹಸೀಲ್ದಾರ್‌ ಕಚೇರಿಗೆ ಮುಟ್ಟಿಸಬೇಕು. ಪದವೀಧರರ ಚುನಾವಣೆ ಅರ್ಹ ಮತದಾರರನ್ನು ನೋಂದಣಿ ಮಾಡಿಸಲು ಚುನಾವಣೆ ಆಯೋಗವು 2ನೇ ಹಂತದ ಅಂದರೆ ನ.25ರಿಂದ ಡಿ.10ರ ವರೆಗೆ ಅವಧಿಯನ್ನು ವಿಸ್ತರಣೆಗೊಳಿಸಿದೆ. ಹೀಗಾಗಿ ಈ ಅವಧಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಸದುಪಯೋಗ ಪಡಿಸಿಕೊಂಡು ಮತ್ತೊಮ್ಮೆ ನಿಮ್ಮ ವಾರ್ಡಿನಲ್ಲಿ ಈಗಾಗಲೇ ನೋಂದಣಿ ಆಗದೇ ಇರುವ ಪದವೀಧರರನ್ನು ಗುರುತಿಸಿ ಅವರ ಮನೆ ಮನೆಗೆ ಹೋಗಿ ಮತ್ತೊಮ್ಮೆ ಅವರಿಗೆ ನೋಂದಣಿ ಫಾರ್ಮ-18ರನ್ನು ಕೊಟ್ಟು ಕ್ರಮಬದ್ಧವಾಗಿ ಅಗತ್ಯ ದಾಖಲೆಗಳೊಂದಿಗೆ ಫಾರ್ಮಗಳನ್ನು ತುಂಬಿಸಿ ತಹಸೀಲ್ದಾರ್‌ ಕಚೇರಿಯಲ್ಲಿ ಕೊಟ್ಟು ಮತದಾರನ್ನಾಗಿ ದೃಢಪಡಿಸಿಕೊಳ್ಳಬೇಕು. ಅಲ್ಲದೇ ಅವರ ಹೆಸರುಗಳನ್ನು ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದುಕೊಂಡು ಪಕ್ಷದ ಕಾರ್ಯಾಲಯಕ್ಕೆ ತಲುಪಿಸಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಕ್ಷದ ಚುನಾವಣೆ ನಗರ ಸಂಚಾಲಕ ಸುರೇಶ ಹೊಸಮನಿ ಮತ್ತು ಸಹ ಸಂಚಾಲಕ ವಿಜಯಕುಮಾರ ಚಿನ್ನಿಕಟ್ಟಿ ವಾರ್ಡ್ ಪ್ರಮುಖರಿಗೆ ಮತ್ತು ಬೂತ ಅಧ್ಯಕ್ಷರುಗಳಿಗೆ ನೋಂದಣಿ ಫಾರ್ಮ್ ನಮೂನೆ -18 ಅರ್ಜಿಗಳನ್ನು ನೀಡಲಾಯಿತು.ನಗರ ಘಟಕದ ಅಧ್ಯಕ್ಷ ಗಿರೀಶ ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಮಹಿಳಾ ಮುಖಂಡರಾದ ರೋಹಿಣಿ ಪಾಟೀಲ, ಬೂತ್ ಅಧ್ಯಕ್ಷರು ಇದ್ದರು.