ಜ್ಞಾನ ಪೋಸ್ಟ್‌ ಎಂದೇ ನಮೂದಿಸಿ: ವೀರೇಂದ್ರಸ್ವಾಮಿ

| Published : May 22 2025, 01:08 AM IST

ಸಾರಾಂಶ

ಕೇಂದ್ರ ಸರ್ಕಾರವು ಅಂಚೆ ಕಚೇರಿಗಳಲ್ಲಿ ಬುಕ್‌ ಪೋಸ್ಟ್‌ ಬದಲು ಜ್ಞಾನ ಪೋಸ್ಟ್‌ ಎಂದು ನಮೂದಿಸಬೇಕೆಂಬ ನೀತಿ ಜಾರಿಗೆ ತಂದಿದೆ ಎಂದು ನ್ಯಾಮತಿ ಪೋಸ್ಟ್‌ ಮಾಸ್ತರ್‌ ಎಸ್‌.ವೀರೇಂದ್ರ ಸ್ವಾಮಿ ಹೇಳಿದ್ದಾರೆ.

ನ್ಯಾಮತಿ: ಕೇಂದ್ರ ಸರ್ಕಾರವು ಅಂಚೆ ಕಚೇರಿಗಳಲ್ಲಿ ಬುಕ್‌ ಪೋಸ್ಟ್‌ ಬದಲು ಜ್ಞಾನ ಪೋಸ್ಟ್‌ ಎಂದು ನಮೂದಿಸಬೇಕೆಂಬ ನೀತಿ ಜಾರಿಗೆ ತಂದಿದೆ ಎಂದು ನ್ಯಾಮತಿ ಪೋಸ್ಟ್‌ ಮಾಸ್ತರ್‌ ಎಸ್‌.ವೀರೇಂದ್ರ ಸ್ವಾಮಿ ಹೇಳಿದರು.

ಪಟ್ಟಣದ ಅಂಚೆ ಕಚೇರಿಯಲ್ಲಿ ಪತ್ರಕರ್ತರಾದ ಎಚ್‌.ಎಂ. ಸದಾಶಿವಯ್ಯ ಎಂಬವರು ಸೋಮವಾರ ಪುಸ್ತಕವೊಂದನ್ನು ಬುಕ್‌ ಪೋಸ್ಟ್‌ ಮಾಡಲು ಹೋಗಿದ್ದರು. ಆಗ 2025 ಮೇ 1ರಿಂದ ಬುಕ್‌ ಪೋಸ್ಟ್‌ ಬದಲು ಜ್ಞಾನ ಪೋಸ್ಟ್‌ ಎಂದು ಕೇಂದ್ರ ಸರ್ಕಾರ ಬದಲಿಸಿ, ಹೊಸ ನೀತಿ ಜಾರಿಗೆ ತಂದಿದೆ. ಇದು ಸಾಹಿತಿಗಳು, ಲೇಖಕರು, ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗುತ್ತದೆ. ಸದುಪಯೋಗ ಪಡೆಯುವಂತೆ ತಿಳಿಸಿದರು.

ಮೊದಲ ಬಾರಿಗೆ ನಮ್ಮ ಅಂಚೆ ಕಚೇರಿಯಲ್ಲಿ ನ್ಯಾಮತಿ ಪತ್ರಕರ್ತ ಎಚ್‌.ಎಂ. ಸದಾಶಿವಯ್ಯ ಅವರು ಒಂದು ಪುಸ್ತಕವನ್ನು ಈ ವಿಳಾಸಕ್ಕೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಅಂಚೆ, ಮಠ ದೇವಳ ಶಿರಸಿ (ಉ.ಕ.) ಎಂಬ ವಿಳಾಸಕ್ಕೆ ಜ್ಞಾನ ಪೋಸ್ಟ್‌ ಮೂಲಕ ಕಳುಹಿಸಿದ್ದಾರೆಂದು ಎಸ್‌.ವೀರೇಂದ್ರಸ್ವಾಮಿ ಹೇಳಿದರು.

ನ್ಯಾಮತಿ ಪೋಸ್ಟ್‌ ಆಫೀಸ್‌ ಅಂಚೆ ಸಹಾಯಕ ಶ್ರೀ ಸಂತೋಷ್‌ ತಳವಾರ್‌ ಮಾತನಾಡಿ, ಜ್ಞಾನ ಪೋಸ್ಟ್‌ ಮೂಲಕ ಪೋಸ್ಟ್‌ ಕಳುಹಿಸಲು 300 ಗ್ರಾಂ ಒಳಗೆ ₹20 ನಂತರ ಅಡಿಷನಲ್‌ ಗ್ರಾಂ. ಹೆಚ್ಚಾದಂತೆ ₹5 ಜಾಸ್ತಿ ಆಗುತ್ತಾ ಹೋಗುತ್ತದೆ ಎಂದರು.

- - - ಶನೇಶ್ವರ ಜಯಂತ್ಯುತ್ಸವ ನ್ಯಾಮತಿ: ಪಟ್ಟಣದಲ್ಲಿ ಪ್ರಥಮ ಬಾರಿಗೆ ಶ್ರೀ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಮೇ 27ರಂದು ಶ್ರೀ ಶನೇಶ್ವರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ 7 ಗಂಟೆಯಿಂದ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ನವಗ್ರಹ ಪೂಜೆ, ಶ್ರೀ ಶನೇಶ್ವರಸ್ವಾಮಿ ಮೂರ್ತಿಗೆ ಅಭಿಷೇಕ, ಶನೇಶ್ವರ ಜಪ, ಶನಿಶಾಂತಿ, ತಿಲಹೋಮ, ಶನೇಶ್ವರಸ್ವಾಮಿ ಅಷ್ಟೋತ್ತರ, ಮಹಾಮಂಗಳಾರತಿ ಪೂಜೆ ಕಾರ್ಯಗಳು ನೆರವೇರಲಿವೆ. ಅನ್ನಸಂತರ್ಪಣೆ ಇರುತ್ತದೆ.