ಕಿಕ್ಕೇರಿ: ಮಕ್ಕಳಿಗೆ ಪರಿಸರ ಪಾಠ ಮಾಡಲು ಶಿಕ್ಷಕರು ಮುಂದಾದರೆ ಪರಿಸರ ಸಮತೋಲನದಿಂದ ನಾಡು ಸಮೃದ್ಧವಾಗಿರಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಕೆಪಿಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಜಗದೀಶ ಚಂದ್ರಬೋಸ್ ಇಕೋ ಕ್ಲಬ್, ಸ್ಪಂದನಾ ಪೌಂಢೇಷನ್, ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ ಜಾಥಾದಲ್ಲಿ ಮಾತನಾಡಿ, ಕೇವಲ ಪರಿಸರ ದಿನದಲ್ಲಿ ಒಂದೆರಡು ಗಿಡ ನೆಟ್ಟು ಸಾಲುಮರದ ತಿಮ್ಮಕ್ಕನ ನೆನೆಸಿಕೊಳ್ಳದೆ ಮರ- ಗಿಡ, ಕಾಡಿನ ನಾಶದಿಂದ ಆಗುತ್ತಿರುವ ದುಷ್ಪರಿಣಾಮ ಕುರಿತು ಮಕ್ಕಳಿಗೆ ತಿಳಿಸಲು ಶಿಕ್ಷಕರು ಮುಂದಾಗಬೇಕು ಎಂದರು.

ನಗರೀಕರಣ, ಕೈಗಾರಿಕೆ, ವಾಹನಗಳಿಂದ ಸೂಸುವ ಮಾಲಿನ್ಯಕಾರಕ ಹೊಗೆಯಿಂದ ಉಸಿರಾಟದ ತೊಂದರೆ, ಶ್ವಾಸಕೋಶ, ಹೃದಯ ಸಂಬಂಧಿ ಸಮಸ್ಯೆ, ಶುದ್ಧಗಾಳಿಗೆ ಹಾಹಾಕಾರ ಉಂಟಾಗುತ್ತಿದೆ. ಪ್ಲಾಸ್ಟಿಕ್ ವಸ್ತುವಿನಿಂದ ಅಂರ್ತಜಲ, ಆಹಾರ, ನೀರು, ಗಾಳಿ ಕಲುಷಿತವಾಗುತ್ತಿದೆ ಎಂದು ತಿಳಿಸಿದರು.

ಮರ- ಗಿಡ ಬೆಳಸಿ ಉಳಿಸಿದರೆ ಮಾತ್ರ ಪರಿಸರ ರಕ್ಷಣೆ ಸಾಧ್ಯ, ಮಕ್ಕಳಲ್ಲಿ ಪರಿಸರ ಪಾಠ ನಿತ್ಯಮಂತ್ರವಾಗಿಸಬೇಕು. ಮಕ್ಕಳು ಗಿಡ ನೆಟ್ಟು ಪೋಷಿಸಲು ಹುರಿದುಂಬಿಸಿ, ರಸಪ್ರಶ್ನೆ ನಡೆಸಿ ಬಹುಮಾನ ನೀಡಿ ಖುಷಿಯಿಂದ ಮಕ್ಕಳು ಪರಿಸರ ಉಳಿಸಲಿದ್ದಾರೆ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿದರು.


ಮುಖ್ಯಶಿಕ್ಷಕಿ ಮಮತಾ, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕೆ.ವಿ. ಬಲರಾಮು ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಮಕ್ಕಳು ಪರಿಸರ ಜಾಗೃತಿ ಕುರಿತು ಭಿತ್ತಿಫಲಕ ಹಿಡಿದು ಘೋಷಣೆ ಕೂಗಿ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದರು.

ಮುಖ್ಯಶಿಕ್ಷಕಿ ಮಮತಾ, ಡಯಟ್ ಹಿರಿಯ ಉಪನ್ಯಾಸಕ ಮಹದೇವಯ್ಯ, ಶಿಕ್ಷಕರಾದ ಸುರೇಶ್, ಚೈತ್ರಾ, ವಿಷಕಂಠ, ಪುಷ್ಪಾ ಹಾಜರಿದ್ದರು.ಡಿ ಗ್ರೂಪ್ ಮಹಿಳಾ ನೌಕರರಿಂದ ಗಿಡ ನೆಟ್ಟು ವಿಶ್ವ ಪರಿಸರ ದಿನ ವಿಭಿನ್ನ ಆಚರಣೆ

ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್‌.ಕೆ.ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಡಿ ಗ್ರೂಪ್ ಮಹಿಳಾ ನೌಕರರಿಂದ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ವಿಭಿನ್ನ ಆಚರಿಸಲಾಯಿತು.

ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ, ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ, ಆಡಳಿತ ಅಧಿಕಾರಿ ಎಂ.ಎಸ್.ಮರಿಸ್ವಾಮಿಗೌಡ, ಶೈಕ್ಷಣಿಕ ಸಲಹೆಗಾರ ಡಾ.ಎಸ್.ತುಕಾರಾಮ್, ವ್ಯವಸ್ಥಾಪಕ ನಿರ್ದೇಶಕ ವಿನಯ ರಾಮಕೃಷ್ಣ, ನಿರ್ದೇಶಕರಾದ ಶಿವಣ್ಣಗೌಡ, ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜಿ.ಪಿ.ಶಿವಶಂಕರ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಗ್ರೂಪ್ ನೌಕರೆ ಭಾಗ್ಯಮ್ಮ ಗಿಡ ನೆಟ್ಟು ನೀರೆರೆದರು.ಈ ವೇಳೆ ಮಾತನಾಡಿದ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ ಅವರು ದಿನನಿತ್ಯ ಇಡೀ ಶಾಲೆ ಸ್ವಚ್ಛತೆ ಮತ್ತಿತರ ಕೆಲಸ ಕಾರ್ಯಗಳಲ್ಲಿ ಡಿ.ಗ್ರೂಪ್ ನೌಕರರು ಜವಾಬ್ದಾರಿ ವಹಿಸುತ್ತಾರೆ ಎಂದರು.

ಸ್ವಚ್ಛತೆಯೊಂದಿಗೆ ಪರಿಸರ ವಿಚಾರದಲ್ಲೂ ಅವರುಗಳಿಗಿರುವ ಕಾಳಜಿ ಬೇರೆಯವರಿಗೆ ಇರುವುದಿಲ್ಲ. ಹೀಗಾಗಿ ಸಸ್ಯಗಳ ಪೋಷಣೆ ದೃಷ್ಟಿಯಿಂದ ಡಿ.ಗ್ರೂಪ್ ಮಹಿಳಾ ನೌಕರರಿಂದ ಕೈಯಿಂದಲೇ ಗಿಡ ನಡೆಸಿ ವಿಭಿನ್ನವಾಗಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.ಈ ವೇಳೆ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಪ್ರಾಂಶುಪಾಲ ಸತೀಶ್ ಬಾಬು, ಮುಖ್ಯ ಶಿಕ್ಷಕ ರಮೇಶ್, ಕಲ್ಯಾಣಿ, ಶೈಕ್ಷಣಿಕ ಪಾಲುದಾರರಾದ ಗೌತಮ್, ಅಜಯ್, ಚಂದ್ರಶೇಖರ್, ಆರ್.ಕೆ.ಬಳಗದ ಭಾಗ್ಯಮ್ಮ, ಮಂಜುಳಾ, ಮತ್ತಿತರರು ಇದ್ದರು.