ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಪ್ರಕೃತಿಯು ಮಾನವನಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದು, ಭೂಮಿಯ ಪ್ರತಿಯೊಂದು ಜೀವ ಸಂಕುಲಕ್ಕೆ ಪರಿಸರ ಅಗತ್ಯ, ಅನಿವಾರ್ಯವಾಗಿದೆ ಎಂದು ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ, ಸರಸ್ವತಿ ಆಂಗ್ಲ ಮಾಧ್ಯಮ ಹಾಗೂ ಪ್ರೌಢಶಾಲೆ, ಎಸ್.ಕುಮಾರ ಪಿಯು ಸೈನ್ಸ್ ಕಾಲೇಜಿನ ಸಂಸ್ಥಾಪಕ ಎಸ್.ಕುಮಾರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಕೃತಿಯು ಮಾನವನಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದು, ಭೂಮಿಯ ಪ್ರತಿಯೊಂದು ಜೀವ ಸಂಕುಲಕ್ಕೆ ಪರಿಸರ ಅಗತ್ಯ, ಅನಿವಾರ್ಯವಾಗಿದೆ ಎಂದು ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ, ಸರಸ್ವತಿ ಆಂಗ್ಲ ಮಾಧ್ಯಮ ಹಾಗೂ ಪ್ರೌಢಶಾಲೆ, ಎಸ್.ಕುಮಾರ ಪಿಯು ಸೈನ್ಸ್ ಕಾಲೇಜಿನ ಸಂಸ್ಥಾಪಕ ಎಸ್.ಕುಮಾರ ಹೇಳಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬರಟಗಿ ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪರಿಸರವು ಹಣ್ಣು, ಹೂ, ತರಕಾರಿ, ಧವಸ, ಧಾನ್ಯಗಳನ್ನು ಕೊಟ್ಟಿದೆ. ಆದರೆ ನಾವು ಪರಿಸರಕ್ಕಾಗಿ ಏನನ್ನು ಕೊಟ್ಟಿದ್ದೇವೆ ಎಂಬುದನ್ನು ಅರಿಯಬೇಕು. ಭೂಮಿಯ ಮೇಲೆ ಮನುಷ್ಯ ಸಂಕುಲ ಹಾಗೂ ಪ್ರಾಣಿ, ಪಕ್ಷಿಗಳು ಉಳಿಯಲು ಮನೆಗೊಂದು ಮರ ಊರಿಗೊಂದು ವನ ಸಂದೇಶ ಸಾರಿ, ಸಸಿಗಳನ್ನು ಬೆಲೆಸುವ ಮೂಲಕ ಪರಿಸರ ಕಾಪಾಡಿಕೊಳ್ಳೊಣ ಎಂದರು.
ಸಂಸ್ಥೆಯ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ ಮಾತನಾಡಿ, ಗಾಳಿಯು ಮಾನವನ ಜೀವಾಳವಾಗಿದ್ದು, ವಾಹನಗಳು ಹೊರ ಸೂಸುವ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್, ಮತ್ತು ಕಾರ್ಖಾನೆಗಳು ಸೂಸುವ ತ್ಯಾಜ್ಯದಿಂದ ವಾತಾವರಣ ಕಲುಷಿತವಾಗುತ್ತಿದೆ. ಗ್ಯಾಸ್, ಸೌದೆ, ಸೀಮೆ ಎಣ್ಣೆ ಇತ್ಯಾದಿ ಇಂಧನಗಳ ಬದಲು ಸೌರಶಕ್ತಿ ಬಳಸುವುದು ಉಪಯುಕ್ತವಾಗಿದೆ. ಕೈಗಾರಿಕಾ ಕಾರ್ಖಾನೆ ತಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.ಆಡಳಿತಾಧಿಕಾರಿ ಎಸ್.ಜೆ.ಗೌಡರ, ಮುಖ್ಯೋಪಾಧ್ಯಾಯ ಸಿ.ಎನ್.ಕಾಂಬಳೆ, ಪ್ರಾಚಾರ್ಯ ಸದಾಶಿವ ವಾಲಿಕಾರ ಹಾಗೂ ಶಾಲಾ, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.