ಸಾರಾಂಶ
ಉತ್ಪಾದಕತೆಯ ಹೆಚ್ಚಳವು ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲಾರದು ಎಂಬುದನ್ನು ಗುರುತಿಸಲು ಪರಿಸರದ ಮಾತುಕತೆಗಳು ವಿಫಲವಾಗಿವೆ. ಹಾಗಾಗಿ ಇದರ ಹಿಂದೆ ಒಳ್ಳೆಯ ಉದ್ದೇಶಗಳಿದ್ದರೂ ಅವು ವಿಫಲರಾಗುತ್ತವೆ ಎಂದು ಡಾ.ಶ್ರೀಕುಮಾರ್ ಪ್ರತಿಪಾದಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ ಅಂತಾರಾಷ್ಟ್ರೀಯ ಪರಿಸರದ ಮಾತುಕತೆಗಳು ವಿಫಲವಾಗಲು ನಮ್ಮ ಅಭಿವೃದ್ಧಿಯ ಕುರಿತ ತಪ್ಪು ಆಲೋಚನೆಗಳೇ ಕಾರಣ ಎಂದು ಖ್ಯಾತ ಪರಿಸರತಜ್ಞ ಡಾ. ಶ್ರೀಕುಮಾರ್ ಹೇಳಿದರು.
ಅವರು ಇಲ್ಲಿನ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ಉಪನ್ಯಾಸದಲ್ಲಿ ‘ಪರಿಸರದ ಮಾತುಕತೆಗಳು ಏಕೆ ವಿಫಲಗೊಳ್ಳುತ್ತದೆ ?’ ಎಂಬ ಕುರಿತು ಮಾತನಾಡಿದರು. ಉತ್ಪಾದಕತೆಯ ಹೆಚ್ಚಳವು ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲಾರದು ಎಂಬುದನ್ನು ಗುರುತಿಸಲು ಪರಿಸರದ ಮಾತುಕತೆಗಳು ವಿಫಲವಾಗಿವೆ. ಹಾಗಾಗಿ ಇದರ ಹಿಂದೆ ಒಳ್ಳೆಯ ಉದ್ದೇಶಗಳಿದ್ದರೂ ಅವು ವಿಫಲರಾಗುತ್ತವೆ ಎಂದವರು ಪ್ರತಿಪಾದಿಸಿದರು.ನಾವು ಭೂಮಿಯ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರದ ಸುಸ್ಥಿರ ಮತ್ತು ಸಮಾನ ಪರ್ಯಾಯ ಮಾದರಿಯನ್ನು ಅನುಸರಿಸಿ ಬಡತನ ಮತ್ತು ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಈ ಸಂವಾದ ನಡೆಸಿಕೊಟ್ಟರು. ಡಾ. ರಾಜಾರಾಂ ತೋಳ್ಪಾಡಿ, ಡಾ. ವಾಣಿರಾಮ್ ಕುಮಾರ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ ಪಡೆದಿರುವ ಡಾ. ಶ್ರೀಕುಮಾರ್ ಅವರು ಕಾರ್ಕಳ ಸಮೀಪದ ನಕ್ರೆಯಲ್ಲಿ ಕಳೆದ 16 ವರ್ಷಗಳಿಂದ ಸಾವಯವ ಕೃಷಿಯ ಪ್ರಯೋಗವನ್ನು ನಡೆಸುತ್ತಿದ್ದಾರೆ.