ಚನ್ನಪಟ್ಟಣ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಾಲು ಪಬ್ಲಿಕ್ ಶಾಲೆ ಹಾಗೂ ಒನ್ ಭೂಮಿ ಫೌಂಡೇಶನ್ ಸಹಯೋಗದಲ್ಲಿ ಎರಡು ದಿನಗಳ ಬೃಹತ್ ಪರಿಸರ ಜಾಗೃತಿ ಮತ್ತು ಸಂರಕ್ಷಣಾ ಅಭಿಯಾನಕ್ಕೆ ಶಾಲಾ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಚೆಟ್ಟಿ ಚಾಲನೆ ನೀಡಿದೆ.
ಅಭಿಯಾನದ ಮೊದಲ ದಿನದ ಅಭಿಯಾನದ ಅಂಗವಾಗಿ ನಗರದಲ್ಲಿ ಬಾಲು ಶಾಲೆಯ ವಿದ್ಯಾರ್ಥಿಗಳು ಜಾಥಾ ನಡೆಸಿದರು.ಡೊಳ್ಳು ಕುಣಿತ ಹಾಗೂ ಶಾಲೆಯ ಬ್ಯಾಂಡ್ ಸೆಟ್‌ನೊಂದಿಗೆ ಪರಿಸರ ರಕ್ಷಣೆಯ ಫಲಕಗಳನ್ನು ಹಿಡಿದು ಬಾಲು ಶಾಲೆಯ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಈ ವೇಳೆ ಪರಿಸರ ಸಂರಕ್ಷಣೆ ಘೋಷಣೆಗಳನ್ನು ಕೂಗಿದರು.
ಶಾಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಜಾಗತಿಕವಾಗಿ ಅವಸಾನವಾದ, ಹಾನಿಗೊಳಗಾದ ಎಲ್ಲಾ ಗಿಡ-ಮರಗಳು, ಪಕ್ಷಿ-ಪ್ರಾಣಿಗಳು ಮತ್ತು ವನ್ಯಜೀವಿಗಳ ನೆನಪಿನಲ್ಲಿ ಒಂದು ನಿಮಿಷದ ಮೌನಾಚರಣೆ ನಡೆಸಲಾಯಿತು.ಈ ವೇಳೆ ಬಾಲು ಶಾಲೆಯ ಅಧ್ಯಕ್ಷೆ ಡಾ. ಶೈಲಜಾ, ಜಂಟಿ ಕಾರ್ಯದರ್ಶಿ ಬಾಲಸುಬ್ರಮಣ್ಯಂ, ಮುಖ್ಯ ಶಿಕ್ಷಕಿ ಕವಿತಾ, ಒನ್‌ಭೂಮಿ ಫೌಂಡೇಷನ್ ಸಂಸ್ಥಾಪಕ ನವನೀತ್, ಶಾಲೆಯ ಶಿಕ್ಷಕರು, ಸಿಬ್ಬಂದಿ ಇತರರಿದ್ದರು.
ಪೊಟೋ೫ಸಿಪಿಟಿ೨:
ಚನ್ನಪಟ್ಟಣದ ಬಾಲು ಪಬ್ಲಿಕ್ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು.