ಕುವೆಂಪು ಕಾದಂಬರಿಗಳಲ್ಲಿ ಪರಿಸರದ ಕಾಳಜಿ: ಡಾ.ಪೂರ್ಣಿಮಾ ಧಾಮಣ್ಣವರ

| Published : Dec 30 2023, 01:30 AM IST

ಕುವೆಂಪು ಕಾದಂಬರಿಗಳಲ್ಲಿ ಪರಿಸರದ ಕಾಳಜಿ: ಡಾ.ಪೂರ್ಣಿಮಾ ಧಾಮಣ್ಣವರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ ಡಾ.ಪೂರ್ಣಿಮಾ ಧಾಮಣ್ಣವರ ಮಾತನಾಡಿ, ಕುವೆಂಪು ಕಾದಂಬರಿಗಳಲ್ಲಿ ಪರಿಸರದ ಕಾಳಜಿ ಇದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ಕುವೆಂಪು ಅವರ ಕಾದಂಬರಿಗಳಲ್ಲಿ ಪರಿಸರ ವಿಶೇಷತೆ ಹಾಗೂ ಕಾಳಜಿ ಕಾಣಬಹುದು. ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳ ವೈವಿಧ್ಯ ವಿಶೇಷತೆ ಕಾಣಬಹುದು ಎಂದು ಕನ್ನಡ ಉಪನ್ಯಾಸಕಿ ಡಾ.ಪೂರ್ಣಿಮಾ ಧಾಮಣ್ಣವರ ಹೇಳಿದರು.

ಪಟಣ್ಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿ ಘಟಕದ ಸಹಯೋಗದಲ್ಲಿ ಶುಕ್ರವಾರ ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆದ ಕುವೆಂಪು 120ನೇ ಜನ್ಮ ದಿನಾಚರಣೆ ನಿಮಿತ್ತ ಕುವೆಂಪು ಅವರ ಸಾಹಿತ್ಯ ಮತ್ತು ಸಮಕಾಲೀನತೆ ಕುರಿತು ವಿಶೆಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯ ಮೌಲ್ಯ ಸಾರುವ ಕುವೆಂಪು ಕೃತಿಗಳು ಇಂದಿಗೂ ಜೀವಂತ. ಸಾಹಿತ್ಯ ಲೋಕಕ್ಕೆ ನೀಡಿದ ಅವರ ಕೊಡುಗೆ ಅಪಾರ. ಕುವೆಂಪು ಅವರ ರಾಮಾಯಣ ದರ್ಶನಂ ಕನ್ನಡ ಸಾಹಿತ್ಯವನ್ನು ಮೇಲ್ಪಂಕಿಗೆ ಕೊಂಡೊಯ್ದ ಮಹಾನ್ ಕವಿ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಸಾಲವಾಡಗಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಕುವೆಂಪು ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ. ಆ ನಂತರ ಆ ಮಗುವನ್ನು ಜತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮನವ ಸಂದೇಶವಾಗಿದೆ.

ಮಹಾವಿದ್ಯಾಲಯದ ಪ್ರಾಚಾರ್ಯ ಆರ್‌.ಬಿ.ಸಿರಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಜಾನಪದ ಗೀತೆ, ಭಾವಗೀತೆ ಹಾಗೂ ಭಷಣ ಸ್ಪರ್ಧೇಯಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ನೀಡಲಾಯಿತು. ಡಾ.ಪೂರ್ಣಿಮಾ ಧಮಣ್ಣವರ ಅವರನ್ನು ಸನ್ಮಾನಿಸಲಯಿತು. ವೇದಿಕೆ ಮೇಲೆ ಐ.ಕ್ಯೂ.ಎ.ಸಿ ಸಂಯೋಜಕ ಡಾ.ರವಿಚಂದ್ರ ವಾಲಿಕಾರ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ರಾಹುಲ್ ನಾಗಣ್ಣವರ ಇದ್ದರು. ಮಹಾವಿದ್ಯಾಲಯದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಶ್ರುತಿ ಪೂಜರಿ ಸ್ವಾಗತಿಸಿದರು. ಅಸ್ಲಂ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಸಿಲ್ಪಾ ಅಂಗಡಿ ವಂದಿಸಿದರು.