ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಉದಯಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚಾರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 3ನೇ ಪರಿಸರ ಮಾಹಿತಿ ಹಾಗೂ ಗಿಡನಾಟಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಉದ್ಘಾಟನೆ ಮಾಡಿದರು.ಈ ವೇಳೆ ಮಾತಾನಡಿದ ಅವರು, ಮೊದಲನೇಯದಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಇದ್ದರೆ ನಾವು, ಪರಿಸರ ಇಲ್ಲದಿದ್ದರೆ ನಾವು ಇಲ್ಲ ಎಂದು ತಿಳಿಸಿದರು. ಗಿಡ ನೆಡುವ ಮುಖಾಂತರ ಕಾರ್ಯಕ್ರಮವನ್ನು ಚಾಲನೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ನಾವೆಲ್ಲರೂ ಈ ದಿನ ಮಾತ್ರವಲ್ಲದೆ ಪ್ರತಿದಿನ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಬೇಕು ಹಾಗೂ ಪ್ಲಾಸ್ಟಿಕ್ ಮುಕ್ತ ರಾಜ್ಯ ಮಾಡಬೇಕು ಎಂದು ತಿಳಿಸಿದರು.ಜನ ಜಾಗೃತಿ ವೇದಿಕೆಯ ಸದಸ್ಯ ಉಮೇಶ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರತಿಯೊಬ್ಬರು ಪರಿಸರದ ರಕ್ಷಣೆ ಮಾಡಬೇಕು. ಹಾಗೆಯೇ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಇಂದು ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನೀಡುತ್ತಿದೆ ಹಾಗೂ ಶಾಲೆಗಳಿಗೆ ಬೆಂಚು ಡೆಸ್ಕ್ ಇಂಥ ಹಲವರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ಪರಿಸರ ಕಾರ್ಯಕ್ರಮದ ಪ್ರಯುಕ್ತ ಶಾಲೆಯ ಮಕ್ಕಳಿಗೆ ಪರಿಸರದ ಬಗ್ಗೆ ಸ್ಪರ್ಧೆ ಮಾಡಿದ್ದು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಒಕ್ಕೂಟದ ಅಧ್ಯಕ್ಷೆ ಎಚ್ ಎಂ ಚಂದ್ರಿಕಾ, ಶಿಕ್ಷಕಿಯರಾದ ರೇಣುಕಮ್ಮ ಹಾಗೂ ಅನುಸೂಯ, ಮಕ್ಕಳು, ಕೃಷಿ ಮೇಲ್ವಿಚಾರಕರು, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.