ಸಾರಾಂಶ
ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಪಂಚವಟಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಗದಗ
ಪ್ರತಿಯೊಬ್ಬರೂ ಮನೆಯ ಅಂಗಳದಲ್ಲಿ ಸಸಿ ನೆಟ್ಟು ಸಂರಕ್ಷಿಸಬೇಕು. ಈ ದಿಸೆಯಲ್ಲಿ ಗಿಡಮರ ಉಳಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಗಿಡಮರ, ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.ಅವರು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಪಂಚವಟಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯಪೂರ್ಣ ಜೀವನ ನಡೆಸಲು ಗಿಡ ಮರಗಳನ್ನು ಬೆಳೆಸೋಣ ಎಂದರು.ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ಗೌರವ ಅಧ್ಯಕ್ಷ ಡಾ. ಎಸ್.ಆರ್. ಹಿರೇಮಠ ಹಾಗೂ ಡಾ. ಶಿವಶಂಕರ ಪೂಜಾರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಾ. ವೆಂಕಟೇಶ ಪೂಜಾರ, ಡಾ. ಪಲ್ಲೇದ, ಡಾ. ದೊಡ್ಡಮನಿ, ಡಾ. ರವಿ ಮೂಲಿಮನಿ ಸೇರಿದಂತೆ ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೊಸಿಯೇಶನ್ ಸದಸ್ಯರು ಇದ್ದರು.ಮಹಿಳಾ ಅಧ್ಯಕ್ಷೆ ಡಾ. ರಾಜೇಶ್ವರ ಹಿರೇಮಠ ನಿರೂಪಿಸಿದರು.
ಪರಿಸರ ರಕ್ಷಣೆ ಅತ್ಯವಶ್ಯಕ: ವೀರೇಂದ್ರಸಿಂಗ್ಕನ್ನಡಪ್ರಭ ವಾರ್ತೆ ಗದಗ
ಪರಿಸರ ರಕ್ಷಣೆ ಅತ್ಯಂತ ಅವಶ್ಯಕವಾಗಿದ್ದು, ಪ್ರತಿವರ್ಷ ಬಿಸಿಲಿನ ತಾಪಮಾನ ಹೆಚ್ಚುತ್ತಾ ಹೋಗುತ್ತಿದ್ದು ಇದರಿಂದ ಮನುಷ್ಯ ಮತ್ತು ಪ್ರಾಣಿ ಸಂಕುಲಕ್ಕೆ ಅಪಾಯವಿದೆ. ಹೀಗೆ ಉಷ್ಣತೆ ಏರುತ್ತಾ ಹೋದರೆ ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳಾಗುವ ಸಂಭವವಿದೆ. ಕಾರಣ ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ. ರಸ್ತೆ ಬದಿ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಮತೋಲನ ಕಾಪಾಡುವುದು ಅವಶ್ಯಕವಾಗಿದೆ ಎಂದು ಪ್ರಧಾನ ಗುರುಗಳಾದ ವೀರೇಂದ್ರಸಿಂಗ್ ರಜಪೂತ ಹೇಳಿದರು.ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಂಕರಸಿಂಗ್ ಎಸ್. ರಜಪೂತ, ಶಿಕ್ಷಕರಾದ ವಿನಾಯಕ ಸಿಂಗ್ ರಜಪೂತ, ಎನ್.ಆರ್. ಸಿನ್ನೂರ, ಆರ್.ಆರ್. ಹಿರೇಮಠ, ಎಚ್.ಟಿ. ಕೊಪ್ಪದ, ಐ.ಸಿ. ಪಲ್ಲೇದ, ಎಂ.ಎಸ್. ಹೊಸೂರ, ಶಿಲ್ಪಾ, ಪ್ರಕಾಶ, ಶಿವಾನಂದ ಹರ್ತಿ ಇದ್ದರು.