ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ರಂಗನಾಥ ಪಲ್ಲೇದ

| Published : Jun 09 2024, 01:37 AM IST

ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ರಂಗನಾಥ ಪಲ್ಲೇದ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಸರಕಾರಿ ಪ್ರೌಢ ಶಾಲೆ ಸ್ಟೇಷನ್ ಬಜಾರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿಗಳನ್ನು ನೆಡಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಆರೋಗ್ಯವಂತ ವ್ಯಕ್ತಿಗಳಾಗಿ ಸಮಾಜದ ಉತ್ತಮ ನಾಗರಿಕರನ್ನು ಕಂಡುಕೊಳ್ಳಲು ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಅಕ್ಷರ ಫೌಂಡೇಶನ ವಿಭಾಗಿಯ ವ್ಯವಸ್ಥಾಪಕ ರಂಗನಾಥ ಪಲ್ಲೇದ ಹೇಳಿದರು.

ನಗರದ ಸರಕಾರಿ ಸ್ಟೇಷನ್ ಪ್ರೌಢ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಘಟಕ, ಸಾಕ್ಷರತೆ ಇಲಾಖೆ ಬೆಂಗಳೂರು ಹಾಗೂ ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.

ಸರ್ಕಾರದ ಆದೇಶದಂತೆ ಐದು ಸಾವಿರ ಕೋಟಿ ಸಸಿಗಳನ್ನು ನೆಡುವ ಉದ್ದೇಶದೊಂದಿಗೆ ಸರ್ಕಾರಿ ಪ್ರೌಢಶಾಲೆ ಸ್ಟೇಷನ್ ಬಜಾರದಲ್ಲಿ ಮಕ್ಕಳಿಂದ ಸಸಿಗಳನ್ನು ನೆಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಸಂರಕ್ಷಣೆ ಮಾಡಬೇಕು. ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಗ್ರಾಮಗಳಲ್ಲಿ ಸಸಿಗಳನ್ನು ನೆಡುವುದರಿಂದ ಉತ್ತಮ ಪರಿಸರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಭಾರಿ ಶಾಲಾ ಮುಖ್ಯಗುರು ಗೌರಮ್ಮ ಬಸವಂತರಾಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳದ ರಾಜ್ಯ ಉಪಾಧ್ಯಕ್ಷ ಚೆನ್ನಾರೆಡ್ಡಿ ಬಿಳ್ಹಾರ, ತಾಲೂಕು ಅಧ್ಯಕ್ಷ ಸಿದ್ರಾಮರೆಡ್ಡಿ, ಖಜಾಂಚಿ ರಾಜು ಬೇಲ್‌ಬಿಂಚಿ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ರಕ್ಷೀತಾ ಸೇರಿದಂತೆ ಇತರರಿದ್ದರು. ವಿರುಪಾಕ್ಷಯ್ಯ ದಂಡಿಗಿಮಠ ಸ್ವಾಗತಿಸಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಸೈಯದ್ ಕಮರುದ್ದೀನ ನಿರೂಪಿಸಿದರು. ದೈಹಿಕ ಶಿಕ್ಷಕ ಅಮೃತ ವಂದಿಸಿದರು.