ಸಾರಾಂಶ
ಪರಿಸರ ಸಂರಕ್ಷಣೆ ಬರೀ ಇಲಾಖೆಯ ಜವಾಬ್ದಾರಿಯಲ್ಲ. ಪರಿಸರ ಸಂರಕ್ಷಣೆ ನಾಗರಿಕ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜಾಗತೀಕರಣದ ಪರಿಣಾಮವಾಗಿ ಅರಣ್ಯ ನಾಶ ಹೊಂದುತ್ತಿದೆ. ಮನುಷ್ಯನ ಶುದ್ಧ ಆರೋಗ್ಯಕ್ಕೆ ಗಿಡ, ಮರಗಳು ಅಗತ್ಯವಿದೆ.
ಕೊಪ್ಪಳ(ಯಲಬುರ್ಗಾ):
ಪರಿಸರ ಸಂರಕ್ಷಣೆ ನಾಗರಿಕ ಸಮಾಜದ ಕರ್ತವ್ಯ ಎಂದು ಜಿಲ್ಲಾ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾಯಿತ್ರಿ ಲೋಕಣ್ಣನವರ ಹೇಳಿದರು.ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಹಿರೇಮ್ಯಾಗೇರಿಯಿಂದ ಕಗ್ಲಿಬಸವಣ್ಣನ ಗುಡಿವರೆಗೆ ಮಾನ್ಸೂನ್ ನೆಡುತೋಪು ಕಾಮಗಾರಿ ಸ್ಥಳದಲ್ಲಿ ತಾಯಿ ಹೆಸರಿನಲ್ಲಿ ಒಂದು ಗಿಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಬರೀ ಇಲಾಖೆಯ ಜವಾಬ್ದಾರಿಯಲ್ಲ. ಪರಿಸರ ಸಂರಕ್ಷಣೆ ನಾಗರಿಕ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜಾಗತೀಕರಣದ ಪರಿಣಾಮವಾಗಿ ಅರಣ್ಯ ನಾಶ ಹೊಂದುತ್ತಿದೆ. ಮನುಷ್ಯನ ಶುದ್ಧ ಆರೋಗ್ಯಕ್ಕೆ ಗಿಡ, ಮರಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಕಾಳಜಿ ಹೊಂದಬೇಕು ಎಂದರು.ಮರಗಳ ಸಂರಕ್ಷಣೆ ಮಹಿಳೆಯರ ಪಾಲ್ಗೊಳ್ಳುವಿಕೆಯ ಮೂಲಕ ಸಮುದಾಯದ ಸಹಭಾಗಿತ್ವ ಸಾಧಿಸಲು ತಾಯಿ ಹೆಸರಿನಲ್ಲಿ ಒಂದು ಗಿಡ ಎನ್ನುವ ಉದ್ದೇಶದೊಂದಿಗೆ ಸರ್ಕಾರ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಮುಂದಾಗಿದೆ. ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಗರೀಕರಣ, ಕೈಗಾರೀಕರಣ, ಹೆದ್ದಾರಿಗಳು ಸೇರಿದಂತೆ ಮತ್ತಿತರ ಯೋಜನೆಗಳಿಂದಾಗಿ ಕೊಟ್ಯಂತರ ಮರ-ಗಿಡಗಳು ತಮಗರಿವಿಲ್ಲದೆಯೇ ನಾಶವಾಗುತ್ತಿವೆ. ಅದಲ್ಲದೇ ಮನುಷ್ಯನ ದುರಾಸೆಯಿಂದಾಗಿ ಮರ-ಗಿಡಗಳನ್ನು ನಾಶ ಮಾಡುತ್ತಲೇ ಬರುತ್ತಿದ್ದೇವೆ. ಹೀಗಾಗಿ ಪರಿಸರ ಮರುಸೃಷ್ಟಿ ಅವಶ್ಯಕವಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಕಳಕಪ್ಪ ವೀರಾಪೂರ, ಕಾರ್ಯದರ್ಶಿ ಮಹಾಂತೇಶ ಬಾಳಿಕಾಯಿ, ವಲಯ ಅರಣ್ಯ ಅಧಿಕಾರಿಗಳಾದ ಬಸವರಾಜ ಗೋಗೇರಿ, ಬಾಬುರಾವ್, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))