ಕನಕಪುರ: ಪರಿಸರ ಪ್ರೇಮಿಗಳ ಸಂಘದ ನೂತನ ಅಧ್ಯಕ್ಷರಾಗಿ ಪರಿಸರ ಪ್ರೇಮಿ ಮರಸಪ್ಪ ರವಿ, ಕಾರ್ಯದರ್ಶಿ ಮಹದೇವ್, ಖಜಾಂಚಿ ಎಂ ವೆಂಕಟೇಶ್ ಹಾಗೂ ಗೌರವಾಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆಯಾದರು.

ಕನಕಪುರ: ಪರಿಸರ ಪ್ರೇಮಿಗಳ ಸಂಘದ ನೂತನ ಅಧ್ಯಕ್ಷರಾಗಿ ಪರಿಸರ ಪ್ರೇಮಿ ಮರಸಪ್ಪ ರವಿ, ಕಾರ್ಯದರ್ಶಿ ಮಹದೇವ್, ಖಜಾಂಚಿ ಎಂ ವೆಂಕಟೇಶ್ ಹಾಗೂ ಗೌರವಾಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆಯಾದರು.

ನೂತನ ಅಧ್ಯಕ್ಷ ಮರಸಪ್ಪ ರವಿ ಮಾತನಾಡಿ, ಪರಿಸರ, ಪ್ರಾಣಿ, ಪಕ್ಷಿ ಸಂಕುಲ, ಮರ ಗಿಡ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಬೇಕು. ನನ್ನ ದುಡಿಮೆಯಲ್ಲಿ ವರ್ಷಕ್ಕೆ 5000 ಗಿಡಗಳನ್ನು ಖರೀದಿಸಿ ರೈತರಿಗೆ ಉಚಿತವಾಗಿ ಕೊಡುವುದು, ರಸ್ತೆ ಬದಿಯಲ್ಲಿ ಗಿಡ ನೆಡುವುದು ಹಾಗೂ ಶಾಲಾ ಕಾಲೇಜು, ದೇವಾಲಯ, ಮಸೀದಿ, ಚರ್ಚ್ ಆವರಣಗಳಲ್ಲಿ ಗಿಡ ನೆಡುತ್ತಿದ್ದು, ನನ್ನ ಮನೆಯಲ್ಲಿ ನೂರಾರು ಪಕ್ಷಿಗಳಿಗೆ ಆಶ್ರಯ ನೀಡಿದ್ದೇನೆ. ನನ್ನ ಕಡೆಯ ಉಸಿರಿರುವ ತನಕ ಪ್ರಾಣಿ, ಪಕ್ಷಿ, ಗಿಡ, ಮರ ಉಳಿಸುವುದಾಗಿ ತಿಳಿಸಿದರು.

ನಿವೃತ್ತ ಡಿವೈಎಸ್‌ಪಿ ಶ್ರೀನಿವಾಸ್ ಮಾತನಾಡಿ, ನಮ್ಮ ಪರಿಸರ ಸಂಘ ಎರಡೂವರೆ ವರ್ಷಗಳಿಂದ ಸತತವಾಗಿ ಗಿಡಗಳು ನೆಡುತ್ತಿದ್ದು ಇನ್ನು ಮುಂದೆಯೂ ನಮ್ಮ ಸಂಘದ ಚಟುವಟಿಕೆಗಳನ್ನು ನಡೆಸಿಕೊಂಡು ಬರುವುದಾಗಿ ತಿಳಿಸಿದರು.

ಈ ವೇಳೆ ಕಾರ್ಯದರ್ಶಿ ಮಹದೇವ್, ಖಜಾಂಚಿ ವೆಂಕಟೇಶ್ ನಿರ್ದೇಶಕರಾದ ಜೈರಾಂ ಅಕ್ಕಿ, ವೆಂಕಟೇಶ್, ದಾಸಪ್ಪ, ನಾಗರಾಜ್, ವೆಂಕಟರಮಣ ಸ್ವಾಮಿ, ಮಾಸ್ಟರ್ ಶ್ರೀಧರ್, ರಾಜೇಶ್. ರಂಗಸ್ವಾಮಿ, ಲಕ್ಷ್ಮಿಕಾಂತ, ಎಂ.ರಾಜು, ಸವಿತಾ ಮಾದೇವ, ಶಾರದ ಜಯರಾಂ, ಸಾವಿತ್ರಿ ವೆಂಕಟರಮಣಸ್ವಾಮಿ ಹಾಗೂ ರತ್ನ ಮರಸಪ್ಪ ರವಿ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಪರಿಸರ ಪ್ರೇಮಿಗಳ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪರಿಸರ ಪ್ರೇಮಿ ಮರಸಪ್ಪ ರವಿ ದಂಪತಿಯನ್ನು ನಿವೃತ್ತ ಡಿವೈಎಸ್‌ಪಿ ಶ್ರೀನಿವಾಸ್ ಅಭಿನಂದಿಸಿದರು.