ಸಮಾನತೆ ಹಾಗೂ ಎಲ್ಲರ ಧ್ವನಿಗೆ ಶಕ್ತಿಯಾಗಿ ಅಂಬೇಡ್ಕರ್ ಮಾರ್ಗದರ್ಶಿಯಾಗಿದ್ದಾರೆ. ಮಹಿಳೆಯರಿಗೆ ವಿಶೇಷ ಹಕ್ಕು ಕಲ್ಪಿಸಿ, ಸಮಾನತೆಯ ಸಮಾಜ ನಿರ್ಮಾಣದ ಕನಸ್ಸಿಗಾಗಿ ಅವರು ಅವಿರತವಾಗಿ ಶ್ರಮಿಸಿದ್ದರು. ಇಂದಿನ ಯುವ ಪೀಳಿಗೆಗೆ ಅವರ ಜೀವನ ಮತ್ತು ಸಾಧನೆಗಳನ್ನು ತಿಳಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಡಾ.ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಎಲ್ಲಾ ಜಾತಿ, ಧರ್ಮ ಹಾಗೂ ವರ್ಗಗಳಿಗೂ ಸಮಾನತೆ ದೊರಕಿಸಿಕೊಟ್ಟಿದೆ ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಸಮಾನತೆ ಹಾಗೂ ಎಲ್ಲರ ಧ್ವನಿಗೆ ಶಕ್ತಿಯಾಗಿ ಅಂಬೇಡ್ಕರ್ ಮಾರ್ಗದರ್ಶಿಯಾಗಿದ್ದಾರೆ ಎಂದರು. ಮಹಿಳೆಯರಿಗೆ ವಿಶೇಷ ಹಕ್ಕು ಕಲ್ಪಿಸಿ, ಸಮಾನತೆಯ ಸಮಾಜ ನಿರ್ಮಾಣದ ಕನಸ್ಸಿಗಾಗಿ ಅವರು ಅವಿರತವಾಗಿ ಶ್ರಮಿಸಿದ್ದರು. ಇಂದಿನ ಯುವ ಪೀಳಿಗೆಗೆ ಅವರ ಜೀವನ ಮತ್ತು ಸಾಧನೆಗಳನ್ನು ತಿಳಿಸಬೇಕು ಎಂದರು.

ಈ ವೇಳೆ ಪುರಸಭೆ ಮಾಜಿ ಸದಸ್ಯರಾದ ಎಸ್.ಪ್ರಕಾಶ್, ಎಂ.ಶ್ರೀನಿವಾಸ್, ಎಚ್.ಎಸ್.ಪುಟ್ಟರಾಮು, ಬಿಜೆಪಿ ಮುಖಂಡರಾದ ಮಹದೇವಸ್ವಾಮಿ, ಯತಿರಾಜ್, ಕೃಷ್ಣರಾಜೇಂದ್ರ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ರಘು, ನಿರ್ದೇಶಕ ಉಮೇಶಕುಮಾರ್, ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಲ್.ಮಂಜುನಾಥ್, ಎಂ.ಜೆ.ಪುಟ್ಟರಾಜು, ಪ್ರಭಾಕರ್ ಇತರರು ಇದ್ದರು.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ

ಶ್ರೀರಂಗಪಟ್ಟಣ: ಡಾ. ಬಿ.ಆರ್ ಅಂಬೇಡ್ಕರ್ ರವರ 135ನೇ ಜಯಂತಿ ಅಂಗವಾಗಿ ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ ಕುಬೇರ್‌ಸಿಂಗ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಿದರು.

ಈ ವೇಳೆ ಉಪಾಧ್ಯಕ್ಷ ಸಿ.ಪ್ರಕಾಶ್, ನಿರ್ದೇಶಕರಾದ ಉಮೇಶ್ ಕುಮಾರ್, ಸಿ. ವಸಂತ್ ಕುಮಾರ್, ಎಸ್.ಟಿ ರಾಜು, ಎಸ್. ರಘು, ವಿ. ನಾರಾಯಣ್, ಸಹಿಲೀಲಾ, ಭಾನುಮತಿ ಚಂದ್ರಶೇಖರ್, ನಾರಾಯಣಸ್ವಾಮಿ, ಎಸ್.ಕೆ ಲಕ್ಷ್ಮಿಣ್‌ಸಿಂಗ್, ಮಹಾದೇವ, ಸದಸ್ಯರಾದ ಎಂ. ರಾಮಕೃಷ್ಣ, ಸಂಘದ ಸಿಇಒ ಎಂ. ವಸಂತ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸಮಾಜದಲ್ಲಿ ಗೌರವದಿಂದ ಬದುಕಲು ಅಂಬೇಡ್ಕರ್ ಕಾರಣ: ರವೀಂದ್ರ ಶ್ರೀಕಂಠಯ್ಯ

ಶ್ರೀರಂಗಪಟ್ಟಣ:ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರು ಸಾಮಾಜಿಕ ನ್ಯಾಯ ಪಡೆದು, ಗೌರವದಿಂದ ಬದುಕಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಕಾರಣ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಬಳಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವ ಹಂತಕ್ಕೆ ತೆಗೆದುಕೊಂಡು ಹೋದ ಕೀರ್ತಿ ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.ಬಾಬಾ ಸಾಹೇಬರ ಜನ್ಮದಿನವನ್ನು ಬಹಳ ಸಂಭ್ರಮದಿಂದ ಶ್ರೀರಂಗಪಟ್ಟಣ ಸೇರಿದಂತೆ ದೇಶದಾದ್ಯಂತ ಆಚರಿಸುತ್ತಿದ್ದೇವೆ. ಅವರ ಆಶಯದಂತೆ ಎಲ್ಲರೂ ಸಮನಾಗಿ ಬದುಕೋಣ ಎಂದರು.

ಈ ವೇಳೆ ದಲಿತ ಮುಖಂಡರಾದ ಮಹದೇವಸ್ವಾಮಿ, ಪುಟ್ಟಸ್ವಾಮಿ, ಸುರೇಶ್ ಕೆ.ಶೆಟ್ಟಹಳ್ಳಿ, ಮುಂಡುಗದೊರೆ ಗೋಪಿ, ಕೇಶವ, ಚನ್ನನಕೆರೆ ಶಿವು, ಅರಕೆರೆ ಸುರೇಶ್, ಮುಸ್ಲಿಂ ಮುಖಂಡ ಎಜಾಜ್ ಪಾಷ ಸೇರಿದಂತೆ ಇತರರು ಇದ್ದರು.