ಸಾರಾಂಶ
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಯಕಯೋಗಿ ವಿಶ್ವಗುರು ಬಸವಣ್ಣನವರ 891ನೆ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಸುರಪುರ:
ಸಮಾಜಕ್ಕೆ ಸಮಾನತೆಯ ತತ್ವ ಬೋಧಿಸಿದ ವಿಶ್ವಗುರು ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಕೆಂಭಾವಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಹೇಳಿದರು.ತಾಲೂಕಿನ ಕೆಂಭಾವಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಯಕಯೋಗಿ ವಿಶ್ವಗುರು ಬಸವಣ್ಣನವರ 891ನೇ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿಯೆ ಜಾತಿ, ಬೇಧಗಳ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿ ಅವರು, ಅಂದಿನ ಸಮಯದಲ್ಲಿಯೆ ಮೊದಲ ಪಾರ್ಲಿಮೆಂಟ್ ರಚಿಸಿ ಸರ್ವರಿಗೂ ಮಾತನಾಡಲು ಅವಕಾಶ ನೀಡಿದ ಮೇರು ವ್ಯಕ್ತಿತ್ವದವರು. ತಮ್ಮ ವೈಯಕ್ತಿಕ ಬದುಕಿಗೆ ಬಡಿದಾಡದೆ ಸಮಾಜದ ಒಳಿತಿಗೆ ದುಡಿದ ಆಧ್ಯಾತ್ಮ ಜೀವಿಯಾಗಿದ್ದರು ಎಂದು ತಿಳಿಸಿದರು.ಪ್ರಮುಖರಾದ ಭೀಮನಗೌಡ ಕಾಚಾಪುರ ಹಾಗೂ ಸಂಗಣ್ಣ ತುಂಬಗಿ ಬಸವ ಧ್ವಜಾರೋಹಣ ಮಾಡಿದರು.
ಪ್ರಮುಖರಾದ ಮಲ್ಲೇಶಪ್ಪ ಕಾಚಾಪುರ, ಗೌಡಪ್ಪಗೌಡ ಅಸಂತಾಪುರ, ಶಂಕ್ರೆಪ್ಪ ದೇವೂರ, ಶ್ರೀಶೈಲ್ ಆಲ್ದಾಳ, ಬಸವರಾಜ ಸೊನ್ನದ, ಶಂಕರ ಕರಣಗಿ, ಭೀಮನಗೌಡ ಮುದನೂರ, ಭೀಮು ಮಲ್ಕಾಪುರ, ಭೋಗಣ್ಣ ಗುಬ್ಯಾಡ, ಸೋಮನಾಥ ಕೋರಳ್ಳಿ, ಮಹಾಂತೇಶ, ಪ್ರಕಾಶ ಬೈಚಬಾಳ, ಬಸವರಾಜ ಬಿದರಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಅನೇಕರಿದ್ದರು.