ನಮ್ಮ ಪಕ್ಷದ ಶಕ್ತಿ ಕುಗ್ಗಿಸಲು ಕಾಂಗ್ರೆಸ್ ಪಕ್ಷ ಎರಡು ಬಾರಿ ಸಮಾವೇಶ ಮಾಡಿತ್ತು. ಪಕ್ಷ ಯಾವ ರೀತಿ ಸಂಘಟನೆ ಮಾಡಬೇಕು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡುವ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ, ಕಾರ್ಯಕರ್ತರ ತೀರ್ಮಾನವೇ ಅಂತಿಮ ತೀರ್ಮಾನ, ಬೇಲೂರಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಕೊಡುಗೆ ಏನು, ರಾಜ್ಯದ ಅಧಿಕಾರ ಹಿಡಿದು ಎರಡು ವರ್ಷ ಕಳೆದಿದ್ದು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಬೇಲೂರು ಜೆಡಿಎಸ್ ಪಕ್ಷವನ್ನು ನಿರ್ಮೂಲನೆ ಮಾಡಲು ಕಾಂಗ್ರೆಸ್ಸಿನವರು ಏನೇನೋ ತಂತ್ರಗಾರಿಕೆ ಮಾಡುತ್ತಿದ್ದು ಅದಕ್ಕೆಲ್ಲ ಹೆದರಿ ಕೂರುವ ಜಾಯಮಾನ ನಮ್ಮದಲ್ಲ ಎಂದು ಶಾಸಕ ಎಚ್ ಡಿ ರೇವಣ್ಣ ಗುಟುರು ಹಾಕಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇದೇ ತಿಂಗಳು 24ರಂದು ಹಾಸನದ ಹೊರ ವಲಯದಲ್ಲಿ ಬೃಹತ್ ಕಾರ್ಯಕರ್ತರ ಸಭೆ ಆಯೋಜಿಸಿದ್ದು ತಾಲೂಕಿನಿಂದ ಸುಮಾರು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಬೇಕು. ನಮ್ಮ ಪಕ್ಷದ ಶಕ್ತಿ ಕುಗ್ಗಿಸಲು ಕಾಂಗ್ರೆಸ್ ಪಕ್ಷ ಎರಡು ಬಾರಿ ಸಮಾವೇಶ ಮಾಡಿತ್ತು. ಪಕ್ಷ ಯಾವ ರೀತಿ ಸಂಘಟನೆ ಮಾಡಬೇಕು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡುವ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ, ಕಾರ್ಯಕರ್ತರ ತೀರ್ಮಾನವೇ ಅಂತಿಮ ತೀರ್ಮಾನ, ಬೇಲೂರಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಕೊಡುಗೆ ಏನು, ರಾಜ್ಯದ ಅಧಿಕಾರ ಹಿಡಿದು ಎರಡು ವರ್ಷ ಕಳೆದಿದ್ದು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಇಪ್ಪತ್ತು ವರ್ಷಗಳ ದೇವೇಗೌಡರ ಶ್ರಮದಿಂದ ರೈಲು ಮಾರ್ಗ ನೀಲ ನಕ್ಷೆ ಸಿದ್ಧವಾಗಿತ್ತು. ಆದರೆ ಕೆಲವರ ಪಿತೂರಿಯಿಂದ ಇನ್ನು ಕೆಲವರಿಗೆ ಭೂ ಸ್ವಾಧೀನ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಎಚ್‌ಡಿಡಿ, ಎಚ್‌ಡಿಕೆ ಅವರ ಪರಿಶ್ರಮವಾಗಿದಿಂದ ಬೇಲೂರು ಹಾಸನ ನಾಲ್ಕು ಪಥದ ಮುಖ್ಯ ರಸ್ತೆಗೆ ಸುಮಾರು 661 ಕೋಟಿ ರುಪಾಯಿ ಅನುದಾನ ಬಂದಿತ್ತು. ಆದರೆ ಇಂದಿನ ಸರ್ಕಾರ ನಮ್ಮ ಕೊಡುಗೆ ಎಂದು ಬೊಗಳೆ ಬಿಡುತ್ತಿದೆ, ನಮ್ಮ ರಾಜಕೀಯ ಶಕ್ತಿ ಕುಗ್ಗಿಸಲು ವಿರೋಧಿಗಳು ಹಲವು ತಂತ್ರಗಳನ್ನು ಬಳಸಿದರು ನಾವೆಲ್ಲ ಅದಕ್ಕೆಲ್ಲ ಹೆದರುವುದಿಲ್ಲ. ನಮ್ಮ ಶಕ್ತಿ ಏನು ಅನ್ನುವುದನ್ನು 2028ರ ಸಾರ್ವತ್ರಿಕ ಚುನಾವಣೆಯಲ್ಲಿ ತೋರಿಸುತ್ತೇವೆ. ಎನ್‌ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬರುವುದು ಖಂಡಿತ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ಶತಸಿದ್ಧ, ಬೇರೆ ಪಕ್ಷದವರಂತೆ ಪುರಸಭೆ ನೌಕರರು, ಸಿಬ್ಬಂದಿ, ಆಶಾ ಕಾರ್ಯಕರ್ತರು, ಇನ್ನು ಮುಂತಾದವನ್ನು ಸಮಾವೇಶಕ್ಕೆ ಕರೆ ತರುವುದಿಲ್ಲ, ನಮಗೆ ನಮ್ಮ ಪ್ರಾಮಾಣಿಕ ಕಾರ್ಯಕರ್ತರೆ ಸಾಕು ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲಿಂದ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದಾರೆ, ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಸಲಿ, ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡು ಕಾಲ ಹರಣ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ವೈರಿಗಳಿಗೆ ನಮ್ಮ ಶಕ್ತಿ ತೋರಿಸಲು ಕಾರ್ಯಕರ್ತರು ಕೈಜೋಡಿಸಬೇಕೆಂದರು. ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಮಾತನಾಡಿ ಹಾಸನದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನರ ಸಭೆ ನಡೆಸಲು ತೀರ್ಮಾನಿಸಿದ್ದು, ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಮೈತ್ರಿ ಕೂಟದ ಅಭ್ಯರ್ಥಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಬೇಲೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಅವರ ಗೆಲುವು ಶತಸಿದ್ಧ, ಆದ್ದರಿಂದ ಇಂದಿನಿಂದಲೇ ಎಲ್ಲರೂ ಪಕ್ಷದ ಸಂಘಟನೆಗೆ ತೊಡಗಬೇಕು, ನನ್ನ ಅಧಿಕಾರಾವಧಿಯಲ್ಲಿ 1800 ಕೋಟಿ ಹಣವನ್ನು ಬೇಲೂರಿಗೆ ಬಿಡುಗಡೆ ಮಾಡಿದ್ದು ಕುಮಾರಸ್ವಾಮಿ, ದೇವೇಗೌಡರು ಇದಕ್ಕೆ ಶ್ರಮಿಸಿದ್ದು ರೇವಣ್ಣನವರು, ಅವರ ಶ್ರಮವಿಲ್ಲದೆ ಬೇಲೂರು ಅಭಿವೃದ್ಧಿ ಸಾಧ್ಯವಿಲ್ಲ, ಅವರ ಶಕ್ತಿ ಹೆಚ್ಚಿಸಲು ನಾವೆಲ್ಲರೂ ಹೋರಾಡಬೇಕು ನಮ್ಮ ಶಕ್ತಿ ವೃದ್ಧಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ತೊ ಚ ಅನಂತ ಸುಬ್ಬರಾವ್ ಮಾತನಾಡಿ ಸಭೆ ನಡೆಸಲು ಯಾರಿಗೂ ಕರೆ ಮಾಡಿರಲಿಲ್ಲ, ಕೇವಲ ನಮ್ಮ ಪಕ್ಷದ ಗುಂಪಿನಲ್ಲಿ ಚರ್ಚೆ ಮಾಡಿ ತಿಳಿಸಿದ್ದೆವು. ಸುಮಾರು 500ಕ್ಕೂ ಅಧಿಕ ಕಾರ್ಯಕರ್ತರು, ಮುಖಂಡರು ಬಂದಿರುವುದು ಪಕ್ಷದ ಶಕ್ತಿ ಯನ್ನು ತೋರಿಸುತ್ತದೆ. ಹೋಬಳಿ ಮಟ್ಟದ ಸಭೆ ನಡೆಸಬೇಕಿದೆ, ಕಮಿಟಿ ರಚಿಸಲು ಹೊಸ ಮುಖಗಳಿಗೆ ಅವಕಾಶ ನೀಡಬೇಕು, ಎನ್‌ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತದೆ. ಆನೆ ಸಮಸ್ಯೆ ಬಗ್ಗೆ ಹೆಚ್ಚಿನ ಕಾಳಜಿ ನಮ್ಮ ಪಕ್ಷ ವಹಿಸುತ್ತಿದೆ. ಮಲೆನಾಡು ಅಭಿವೃದ್ಧಿಗಾಗಿ, ಅವರ ಹಿತ ಕಾಪಾಡಲು ನಮ್ಮ ನಾಯಕರು ಹೋರಾಡುತ್ತಿದ್ದಾರೆ ಎಂದರು.ಸಭೆಯಲ್ಲಿ ಹಾಸನ ಸಹಕಾರ ಸಂಘದ ನಿರ್ದೇಶಕ ಎಂ ಎ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ಡಿ ಚಂದ್ರೆಗೌಡ, ಜಿ ಟಿ ಇಂದಿರಾ, ಉಪಾಧ್ಯಕ್ಷ ರಾಜಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲತಾ ಮಂಜೇಶ್ವರಿ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ರಂಗೇಗೌಡ, ಶುಭಾನ್, ಅಶ್ವಥ್ ಭಾನಸವಳ್ಳಿ, ಸದಸ್ಯರಾದ ಮರಿಯಪ್ಪ, ರವಿ ಬಲ್ಲೇನಹಳ್ಳಿ, ಮುಖಂಡರಾದ ನಟರಾಜ್, ರಾಮಚಂದ್ರ, ಭಾರತೀ ಅರುಣಕುಮಾರ್, ಮೊಗಪ್ಪ ಗೌಡ, ದಿನೇಶ್, ನಾಗೇಶ್, ಸತೀಶ್, ದಿಲೀಪ್, ನಾಗೇಶ್ ಯಾದವ, ಖಾದರ್, ಇನ್ನೂ ಮುಂತಾದವರಿದ್ದರು.