ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿ ಹಲವು ವರ್ಷಗಳಿಂದ ಹೋಮಿಯೋಪಥಿ ಕಾಲೇಜುಗಳು ಸ್ಥಾಪನೆಯಾಗಿಲ್ಲ. ಬೆಳಗಾವಿ, ಹುಬ್ಭಳ್ಳಿ-ಧಾರವಾಡ, ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಪ್ರದೇಶದಲ್ಲಿ ತಲಾ ಒಂದೊಂದು ಸರ್ಕಾರಿ ಹೋಮಿಯೋಪಥಿ ಕಾಲೇಜ್ ಆರಂಭಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೋಮಿಯೋಪಥಿ ವೈದ್ಯರು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಡಾ.ವೀರಬ್ರಹ್ಮಾಚಾರಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಬೆಳಗಾವಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವೈಜ್ಞಾನಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಡಾ.ಎ.ರಾಜೇಶ, ಕರ್ನಾಟಕ ಹೋಮಿಯೋಪಥಿಕ್ ಸಿಸ್ಟಮ್ ಆಫ್ ಮೆಡಿಸಿನ್ ಮಂಡಳಿ ಸದಸ್ಯ ಡಾ.ಜ್ಯೋತಿಷ ಖೋತ ವಿಶೇಷ ಅತಿಥಿಗಳಾಗಿದ್ದರು. ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಬೆಳಗಾವಿ ಘಟಕಕ್ಕೆ ಅಧ್ಯಕ್ಷರಾಗಿ ಡಾ.ವಿವೇಕಾನಂದ ವೆರ್ಣೇಕರ, ಕಾರ್ಯಾಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್‌, ಕಾರ್ಯದರ್ಶಿಯಾಗಿ ಡಾ.ಶ್ರೇಯಸ ಜಿನರಾಳ್ಕರ್ ಹಾಗೂ ಡಾ.ಸಂತೋಷ ಮಗದುಮ್ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.

ಈ ವೇಳೆ ಹೋಮಿಯೋಪಥಿ ಜನಕ ಡಾ.ಸ್ಯಾಮುಯೆಲ್ ಹ್ಯಾನಿಮನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೆಎಚ್‌ಎಂಎ ಉಪಾಧ್ಯಕ್ಷ ಡಾ.ಜಯಂತ ಎ.ಬಿ.ಹ್ಯಾನಿಮನ್‌ರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು. ಡಾ.ಎ.ರಾಜೇಶ ಅವರು ರಾಜ್ಯ ಮಟ್ಟದಲ್ಲಿ ಕೆಎಚ್‌ಎಂಎ ಕೈಗೊಂಡಿರುವ ಚಟುವಟಿಕೆಗಳನ್ನು ವಿವರಿಸಿದರು.

ಪ್ರೊ.ಡಾ.ಸಂತೋಷ ರಾಣಡೆ ಶಾಸ್ತ್ರೀಯ ಹೋಮಿಯೋಪಥಿ ಚಿಕಿತ್ಸೆಯಲ್ಲಿ ಆಧುನಿಕ ರೋಗ ನಿರ್ಣಯ ಸಾಧನಗಳ ಬಳಕೆ, ಡಾ.ನರೇಂದ್ರ ಪಾಟೀಲ ಹೋಮಿಯೋಪಥಿಯಲ್ಲಿ ಸಂಕೀರ್ಣ ಪ್ರಕರಣಗಳ ನಿರ್ವಹಣೆ ಹಾಗೂ ಪ್ರೊ.ಡಾ.ಕಿರಣ್ ಪಾಟೀಲ, ಹೋಮಿಯೋಪಥಿ ವೈದ್ಯರ ವೃತ್ತಿ ನೈತಿಕತೆ ಕುರಿತು ಉಪನ್ಯಾಸ ನೀಡಿ ವೈದ್ಯರ ಸಾಮಾಜಿಕ ಜವಾಬ್ದಾರಿ, ಕಾನೂನು ಅರಿವು ಹಾಗೂ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸಿದರು.ಆಯುಷ್ ಫೆಡರೇಷನ್ ಕರ್ನಾಟಕ ಘಟಕದ ಉಪಾಧ್ಯಕ್ಷ ಡಾ.ಶ್ರೀಕಾಂತ ಕೊಂಕಣಿ, ಕೆಎಲ್‌ಇ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಆಡಳಿತ ವಿಭಾಗದ ನಿರ್ದೇಶಕ ಡಾ.ಎಂ.ಎ.ಉಡಚಣಕರ, ಬಾಗಲಕೋಟೆ ಬಿವಿವಿ ಹೋಮಿಯೋಪಥಿಕ್ ಕಾಲೇಜ್ ಪ್ರಾಚಾರ್ಯ ಡಾ.ಅರುಣ ಹೂಲಿ, ಎಸ್‌ಎಸ್‌ಬಿಜೆ ಕಾಲೇಜಿನ ಪ್ರಾಚಾರ್ಯ ಡಾ.ದಶರಥ ಬಾಮನೆ, ಭರತೇಶ ಹೋಮಿಯೋಪಥಿಕ್ ಕಾಲೇಜ್ ಪ್ರಾಚಾರ್ಯ ಡಾ.ಅರುಣಕುಮಾರ ಜಮದಾಡೆ, ಎ.ಎಂ.ಶೇಖ್ ಕಾಲೇಜಿನ ಪ್ರಾಚಾರ್ಯ ಡಾ.ಕಿರಣ ಪಾಟೀಲ, ಕೆಎಲ್‌ಇ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಪ್ರಾಚಾರ್ಯೆ ಡಾ.ರೂಪಾಲಿ ತೇಲಂಗ್ ವೇದಿಕೆಯಲ್ಲಿದ್ದರು. ಡಾ.ಸಂತೋಷ ಮಗದುಮ್ ವಂದಿಸಿದರು.