ಸಾರಾಂಶ
Establish a separate university in the district: Siddhan Gowda
-ಗಂಗೂಬಾಯಿ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ
------ಕನ್ನಡಪ್ರಭ ವಾರ್ತ ಸುರಪುರ
ಯಾದಗಿರಿ ಜಿಲ್ಲೆಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು. ಈ ಕುರಿತು ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್ ಹೇಳಿದರು.ತಾಲೂಕಿನ ಕೆಂಭಾವಿ ಪಟ್ಟಣದ ಗಂಗೂಬಾಯಿ ಶಾಂತಗೌಡ ಪೊಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಸಮಿತಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲೇಜಿಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಲು ಸಚಿವರು ಬದ್ಧರಾಗಿದ್ದು, ಕಾಲೇಜು ಮಂಡಳಿ ಇದನ್ನು ಸದುಪಯೋಗಪಡಿಸಿಕೊಂಡು ನ್ಯಾಕ್ (ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ) ಗ್ರೇಡ್ ಪಡೆದುಕೊಳ್ಳುವ ಕೆಲಸ ಮಾಡಬೇಕು. ಕ್ಯಾಂಟೀನ್ ವ್ಯವಸ್ಥೆ ಅವಶ್ಯಕತೆಯಿದ್ದಲ್ಲಿ ಕಾಲೇಜು ಪಕ್ಕದಲ್ಲಿರುವ ತಮ್ಮ ಸ್ವಂತ ಜಾಗದಲ್ಲಿ ತಾತ್ಕಾಲಿಕ ಶೆಡ್ ಒಡೆದು ಆರಂಭಿಸಬಹುದು ಎಂದರು.ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಪ್ರಾಂಶುಪಾಲ ನಾಗಪ್ಪ ಚವಲ್ಕರ್ ಮಾತನಾಡಿ, ಕಾಲೇಜಿನ ಬೆಳವಣಿಗೆ ಕುರಿತು ಹಾಗೂ ನ್ಯಾಕ್ ಅನುಷ್ಟಾನಕ್ಕೆ ಬೇಕಾದ ಸಕಲ ಸವಲತ್ತು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದರು. ಡಾ.ಯಂಕನಗೌಡ ಪಾಟೀಲ್ ನಿರೂಪಿಸಿದರು. ಮಲ್ಲಪ್ಪ ಬಿಳೆಬಾವಿ ಸ್ವಾಗತಿಸಿದರು. ಡಾ. ಬಸಮ್ಮ ವಂದಿಸಿದರು.ಪಿಯು ಕಾಲೇಜು ಪ್ರಾಂಶುಪಾಲ ವೀರೇಂದ್ರ ಧರಿ, ವರ್ತಕರಾದ ಶರಣಬಸವ (ಕಾಕಾ) ದಿಗ್ಗಾವಿ, ಸಾಹೇಬಲಾಲ್ ಆಂದೇಲಿ, ಪ್ರಾಧ್ಯಾಪಕ ನಸರೀನ್ ತಾಜ್, ಸಿದ್ದಲಿಂಗ ರಾಥೋಡ್, ಮಲ್ಲಿಕಾರ್ಜುನ ಮರಡ್ಡಿ, ಹಳೆಯ ವಿದ್ಯಾರ್ಥಿಗಳ ಪ್ರತಿನಿಧಿ ವೀರೇಶ ಬಜಂತ್ರಿ ಇದ್ದರು.
------ಫೋಟೊ: ಸುರಪುರ ತಾಲೂಕಿನ ಕೆಂಭಾವಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್ ಉದ್ಘಾಟಿಸಿದರು.
11ವೈಡಿಆರ್11