ತಿಪಟೂರು ಮತ್ತು ಮಧುಗಿರಿ ಉಪವಿಭಾಗ ಕೇಂದ್ರಗಳಲ್ಲಿ ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹಾಸ್ಟಲ್ ನಿರ್ಮಿಸಲು ತುಮುಲ್ ಆಡಳಿತ ಮಂಡಳಿ ಮುಂದಾಗಬೇಕು ಎಂದು ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ತಿಪಟೂರು ಮತ್ತು ಮಧುಗಿರಿ ಉಪವಿಭಾಗ ಕೇಂದ್ರಗಳಲ್ಲಿ ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹಾಸ್ಟಲ್ ನಿರ್ಮಿಸಲು ತುಮುಲ್ ಆಡಳಿತ ಮಂಡಳಿ ಮುಂದಾಗಬೇಕು ಎಂದು ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.

ಇಲ್ಲಿನ ಎಂಎನ್‌ಕೆ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಫಲಾನುಭವಿಗಳಿಗೆ ಚೆಕ್‌ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ತುಮಕೂರಿನಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್ ಕಟ್ಟಿದ್ದು, ಪ್ರಸ್ತುತ ಮಧುಗಿರಿ , ತಿಪಟೂರಿನಲ್ಲಿ ಮಾಡುವುದರಿಂದ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣ ಕಲಿಕೆಗೆ ಪೂರಕವಾಗಲಿದೆ. ಪಶು ಪೀಡ್ಸ್ ತಯಾರಿಸುವ ಕೈಗಾರಿಕೆಗಳಲ್ಲಿ ವಿಷಪೂರಿತ ಅಂಶವಿದೆ ಏನ್ನಲಾದ ಕಳಪೆ ಗುಣ ಮಟ್ಟದ ಯೂರಿಯ ಬಳಸುತ್ತಿದ್ದು, ಇದರಿಂದ ರಾಸುಗಳ ಆರೋಗ್ಯದ ಮೇಲೆ ದುಷ್ಪರಿಣಾಮ. ಹಾಲಿನ ಬಳಕೆದಾರರಿಗೂ ಅನಾರೋಗ್ಯ ಕಾಡಲಿದೆ.ಆದ್ದರಿಂದ ತುಮುಲ್ ಅಧಿಕಾರಿಗಳು ಪರಿಶೀಲಿಸಿ ಎಂದರು.

ತುಮುಲ್ ಅಧ್ಯಕ್ಷ,ಪಾವಗಡ ಶಾಸಕ ವೆಂಕಟೇಶ್‌ ಮಾತನಾಡಿ,1ಲಕ್ಷ 20 ಸಾವಿರ ಲೀ ಮಧುಗಿರಿ ತಾಲೂಕಿನಲ್ಲಿ ಹಾಲು ಬರುತ್ತಿದ್ದು, ಪಾವಗಡ ತಾಲೂಕಿನಲ್ಲಿ ಕಡಿಮೆ ಹಾಲು ಬರುತ್ತಿದೆ. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದರು.

ತುಮುಲ್‌ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿದರು.ನಿರ್ದೇಶಕರಾದ ಮಂಜೇಗೌಡ, ಎಸ್.ಆರ್.ಗೌಡ, ಪ್ರಕಾಶ್, ಚಂದ್ರಶೇಖರೆಡ್ಡಿ, ಸಿ.ವಿ.ಮಹಾಲಿಂಗಯ್ಯ, ಕೃಷ್ಣಕುಮಾರ್, ಸಿದ್ದಲಿಂಗಯ್ಯ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌, ಲಾಲಪೇಟೆ ಮಂಜುನಾಥ್, ಎಂ.ಎಸ್‌.ಮಲ್ಲಿಕಾರ್ಜುನಯ್ಯ ಇತರರಿದ್ದರು.