ಸಮಾಜಕ್ಕೆ ಕೊಡುಗೆ ನೀಡಲು ಸಂಸ್ಥೆ ಸ್ಥಾಪನೆ

| Published : Sep 23 2024, 01:27 AM IST

ಸಾರಾಂಶ

ಶಿಕ್ಷಣವು ಆಧುನಿಕ ಸರ್ವ ಸಮಸ್ಯೆಗಳಿಗೆ ಪರಮೋಚ್ಚ ಪರಿಹಾರ ಎಂಬ ಮಾತಿನಂತೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಉದ್ದೇಶದಿಂದ 2001ರಲ್ಲಿ ಸಿದ್ಧೇಶ್ವರ ಸ್ವಾಮಿಗಳ ಆಶೀರ್ವಾದೊಂದಿಗೆ ಶಾಂತಿನಿಕೇತನ ಶಾಲೆ ತೆರೆಲಾಯಿತು ಎಂದು ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುರೇಶ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಾಂತಿನಿಕೇತನ ಸಂಸ್ಥೆಯ 24ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ದೀಪ ಬೆಳಗಿಸಿ ಮಕ್ಕಳೊಂದಿಗೆ ಕೇಕ್‌ ಕತ್ತರಿಸಿ ಮಾತನಾಡಿದರು.ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ರಿಜೇಶ್.ಪಿ.ಎನ್ ಮಾತನಾಡಿ, ಈ ಸಂಸ್ಥೆಯಲ್ಲಿ ಕಲಿತ ಮಕ್ಕಳು ಇಂದು ಶಾಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಪಿ.ಚರಣಕುಮಾರ, ಸಿಬಿಎಸ್‌ಇ ವಿಭಾಗದ ಶಾಲಾ ಶೈಕ್ಷಣಿಕ ಕಾರ್ಯ ಸಂಯೋಜಿಕಿ ಕಮರ್ ಪಾರಾ ಖಾಜಿ, ಶಾಲೆಯ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.