ಮತದಾನಕ್ಕೆ 8 ವಿಶೇಷ ಮತಗಟ್ಟೆಗಳ ಸ್ಥಾಪನೆ

| Published : Nov 13 2024, 12:02 AM IST

ಸಾರಾಂಶ

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ನ.13ರ ಮತದಾನದಂದು ಮಹಿಳೆಯರು, ವಿಶೇಷ ಚೇತನರು, ಯುವಜನರನ್ನು ಆಕರ್ಷಿಸಲು ಸಖಿ, ವಿಶೇಷ ಚೇತನರು, ಯುವಜನರೇ ನಿರ್ವಹಿಸುವ ಹಾಗೂ ಸಾಂಪ್ರಾದಾಯಿಕ ಮತಗಟ್ಟೆಗಳನ್ನು ರಚಿಸಲಾಗಿದೆ.

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ನ.13ರ ಮತದಾನದಂದು ಮಹಿಳೆಯರು, ವಿಶೇಷ ಚೇತನರು, ಯುವಜನರನ್ನು ಆಕರ್ಷಿಸಲು ಸಖಿ, ವಿಶೇಷ ಚೇತನರು, ಯುವಜನರೇ ನಿರ್ವಹಿಸುವ ಹಾಗೂ ಸಾಂಪ್ರಾದಾಯಿಕ ಮತಗಟ್ಟೆಗಳನ್ನು ರಚಿಸಲಾಗಿದೆ.

5 ಸಖೀ ಮತಗಟ್ಟೆಗಳು, 1 ವಿಶೇಷ ಚೇತನರ ನಿರ್ವಹಣೆಯ ಮತಗಟ್ಟೆ, 1 ಯುವ ಜನ ನಿರ್ವಹಣೆಯ ಮತಗಟ್ಟೆ, 1 ಸಾಂಪ್ರದಾಯಿಕ ಮತಗಟ್ಟೆಯನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳಂತೆ ರಚಿಸಲಾಗಿದೆ.

ವಿಶೇಷ ಮತಗಟ್ಟೆಗಳ ವಿವರ ಇಂತಿದೆ:

5 ಸಖೀ ಮತಗಟ್ಟೆಗಳನ್ನು ರಚಿಸಲಾಗಿದ್ದು, ಚನ್ನಪಟ್ಟಣದ ರಾಘವೇಂದ್ರ ಎಕ್ಸ್ಟೆನ್ಷನ್‌ನಲ್ಲಿರುವ ಸೆಂಟ್ ಆನ್ಸ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಸೆಂಟ್ರಲ್ ಪ್ರಾಥಮಿಕ ಶಾಲೆ, ಬಾಚಹಳ್ಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನೀಲಕಂಠಹಳ್ಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬೆಳಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಚಿಸಲಾಗಿದೆ.

ವಿಶೇಷ ಚೇತನರ ನಿರ್ವಹಣೆಯ ಮತಗಟ್ಟೆಯನ್ನು (ಮತಗಟ್ಟೆ ಸಂಖ್ಯೆ-100) ಚನ್ನಟಪ್ಟಣದ ಹಳೆಯ ನಗರಸಭೆ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

ಯುವಜನರು ನಿರ್ವಹಣೆ ಮಾಡುವ ಮತಗಟ್ಟೆಯನ್ನು (ಮತಗಟ್ಟೆ ಸಂಖ್ಯೆ-44) ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಸಾಂಪ್ರದಾಯಿಕ ಮತಗಟ್ಟೆಯನ್ನು ಚನ್ನಪಟ್ಟಣದ ಕೋಟೆ ಶ್ರೀ ವರದರಾಜಸ್ವಾಮಿ ದೇವಸ್ಥಾನ ರಸ್ತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 1 ರಲ್ಲಿ (ಮತಗಟ್ಟೆ ಸಂಖ್ಯೆ-87) ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

--------------------------------

12ಕೆಆರ್ ಎಂಎನ್ 5.ಜೆಪಿಜಿ

ಸಖೀ ಮತಗಟ್ಟೆ

---------------------------------