ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆದು ರೈತರಿಗೆ ಮತ್ತು ಮಹಿಳೆಯರಿಗೆ ನ್ಯಾಯಕೊಡಿಸುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.ತಾಲೂಕಿನ ನತ್ತಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಹೈನುಗಾರಿಕೆಯಲ್ಲಿ ಆಸ್ತಕಿ ಇರುವವರಿಗೆ ಸಾಲ ನೀಡುವ ಮೂಲಕ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಹಾಲು ಹಾಕುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.ಪ್ರತಿ ಗ್ರಾಮದಲ್ಲಿ ಸಹಕಾರ ಸಂಘ
ಈ ಹಿಂದೆ ನಿರ್ದೇಶಕರಾಗಿದ್ದವರು ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಿಲ್ಲ, ಅವರನ್ನು ಕೇಳಿದರೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು, ಅವರು ಆಸಕ್ತಿ ವಹಿಸದ ಕಾರಣ ನಮ್ಮ ತಾಲ್ಲೂಕಿನಲ್ಲಿ ಕೇವಲ ೩೦ ರಿಂದ ೪೦ ಹಾಲು ಉತ್ಪಾದಕರ ಸಹಕಾರ ಸಂಘಗಳ ಇವೆ. ಆದರೆ ಮುಳುಬಾಗಿಲು, ಮಾಲೂರು, ಕೋಲಾರದಲ್ಲಿ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.ಎಸಿ ಮೈತ್ರಿ ಅವರು ಆಡಳಿತ ಅಧಿಕಾರಿಯಾಗಿ ನೇಮಕವಾಗಿದ್ದಂತಹ ಸಮಯದಲ್ಲಿ ಉಪಕರಣಗಳ ಖರಿದಿಸಿರುವ ಭ್ರಷ್ಟಾಚಾರ ಆಗಿರುವ ಕುರಿತು ಮೇಲ್ನೋಟಕ್ಕೆ ಗೋತ್ತಾಗುತ್ತಿದೆ, ಅದನ್ನು ತನಿಖೆ ಮಾಡಲು ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ತಾವೂ ಸದಸ್ಯರಾಗಿದ್ದು, ಮುಂದಿನ ದಿನಗಳಲ್ಲಿ ಸತ್ಯ ಹೊರ ಬರುತ್ತದೆ ಎಂದು ತಿಳಿಸಿದರು.ನಂದಿನ ಉತ್ಪನ್ನ ಮಾರಾಟ ಮಳಿಗೆಕೋಮಲ್‌ನಲ್ಲಿ ಸಂಗ್ರಹವಾಗುತ್ತಿರುವ ಹಾಲಿನಲ್ಲಿ ಹಾಲಿನ ಪೌಡರ್ ತಯಾರಿಸುತ್ತಿದ್ದಾರೆ. ಇದರಿಂದಾಗಿ ನಷ್ಟವಾಗಿದೆ, ಇದನ್ನು ತಡೆಯಲು ತಾಲೂಕಿನಾದ್ಯಂತ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುಲು ಇನ್ನೂರು ಮಳಿಗೆಗಳನ್ನು ಪ್ರಾರಂಭಿಸಲು ನಿರ್ಮಾನಿಸಿದ್ದು, ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಅವಕಾಶ ದೊರೆಯುತ್ತದೆ ಜೊತೆಗೆ ಹಾಲಿನ ಉತ್ಪನ್ನಗಳು ಮಾರಾಟ ಮಾಡುವುದರಿಂದ ಲಾಭಗಳಿಸಬಹುದು, ಈ ಲಾಭವನ್ನು ಹೆಣ್ಣು ಮಕ್ಕಳಿಗೆ ನೀಡೋಣ ಎಂದು ತಿಳಿಸಿದರು.ಪಟ್ಟಣದ ಪ್ರಾದೇಶಿಕ ಶಿಬಿರ ಕಚೇರಿಯಲ್ಲಿ ಪಿಠೋಪಕರಣಗಳನ್ನು ಮಾಡುತ್ತಿದ್ದು ಮುಗಿದ ನಂತರ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಸಭೆ ಪ್ರತಿ ತಿಂಗಳು ಕರೆದು ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು.ಸಿಸಿ ರಸ್ತೆ, ಚರಂಡಿ ನಿರ್ಮಾಣ
ಶಾಸಕರ ಪ್ರಗತಿ ಕಾಲೋನಿ ಯೋಜನೆಯ ಅನುದಾನದಡಿಯಲ್ಲಿ ಸಂಗನಹಳ್ಳಿಯಲ್ಲಿ ೪೦ ಲಕ್ಷ ರೂ.ಗಳ ಸಿಸಿ ರಸ್ತೆ ಮತ್ತು ಚರಂಡಿಯ ನಿರ್ಮಾಣ ಕಾಮಗಾರಿಗೆ ಮತ್ತು ಕೊಂಡೇನಹಳ್ಳಿಯಲ್ಲಿ ಐದು ಲಕ್ಷ ರೂ.ಗಳಲ್ಲಿ ನಿರ್ಮಾಣ ಮಾಡಿರುವ ಹೈಮಾಸ್ಟ್ ದೀಪ ಉದ್ಘಾಟನೆ ಹಾಗೂ ಸಂಗನಹಳ್ಳಿಯಿಂದ ಹುಕ್ಕುಂದವರೆಗೆ ಹಾಗೂ ಮಾರ್ಕೊಂಡಯ್ಯ ಜಲಾಶಯದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಹಾಗೂ ಆಲಂಬಾಡಿಯಲ್ಲಿ ೩೦ ಲಕ್ಷ ರೂ.ಗಳಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಗೋವಿಂದಪ್ಪ, ಬೂದಿಕೋಟೆ ಸಮಾಜಸೇವಕ ಎ.ಬಾಬು, ಆಲಂಬಾಡಿ ಜ್ಯೋತೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ನಾರಾಯಣಮ್ಮ, ಬೂದಿಕೋಟೆ ಗ್ರಾ.ಪಂ ಅಧ್ಯಕ್ಷ ಬಿ.ಆರ್.ಮಂಜುನಾಥ, ಕಾರಮಾನಹಳ್ಳಿ ಮುನಿಸ್ವಾಮಿ, ಜುಂಜನಹಳ್ಳಿ ನಾರಾಯಣಸ್ವಾಮಿ, ಚಂದ್ರಶೇಖರ್, ಮುನಿವೆಂಕಟಸ್ವಾಮಿ, ನರೇಶ್, ಕೊಂಡೇನಹಳ್ಳಿ ಸುರೇಶ್, ಆಲಂಬಾಡಿ ಗ್ರಾ.ಪಂ ಸದಸ್ಯರಾದ ಸುರೇಶ್, ಮುನಿಚಂದ್ರ, ನಾರಾಯಣಪ್ಪ, ಮಾಜಿ ಉಪಾಧ್ಯಕ್ಷ ಮುನಿಯಪ್ಪ, ಶ್ರೀಕಾಂತ್, ಅಮರೇಶ್, ಮುನಿರಾಜು, ಆನಂದ್, ಬನಹಳ್ಳಿ ಶ್ರೀನಿವಾಸ್, ಮುನಿಯಪ್ಪ, ಮುನಿಸ್ವಾಮಿಗೌಡ, ನಾಗಣ್ಣ, ವಿಜಯ್ ಕುಮಾರ್, ರಾಜಣ್ಣ, ರಮೇಶ್, ರಾಮಕೃಷ್ಣಪ್ಪ ಇದ್ದರು.