ಸಾರಾಂಶ
ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಎಲ್ಲರೂ ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕು
ಹರಪನಹಳ್ಳಿ: ನನ್ನನ್ನು ಗೆಲ್ಲಿಸಿದರೆ ನೀವು ನನಗೆ ಹುಡುಕಿಕೊಂಡು ಬರುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಸಮಸ್ಯೆ ಆಲಿಸಲು ಹರಪನಹಳ್ಳಿ ಪಟ್ಟಣದಲ್ಲಿ ಜನಸಂಪರ್ಕ ಕಚೇರಿ ಆರಂಭಿಸುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ತಾಲೂಕಿನ ಕೆ.ಕಲ್ಲಹಳ್ಳಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕರುಣಾಕರರೆಡ್ಡಿ ಬಳಿ ಚರ್ಚೆ ಮಾಡಿ ನಿಮ್ಮ ಕೈಗೆ ಸುಲಭವಾಗಿ ಸಿಗಲು, ನಿಮ್ಮ ಕೆಲಸ, ಕಾರ್ಯ ಮಾಡಿಕೊಡಲು ನಿಮ್ಮಲ್ಲಿಯೇ ಜನಸಂಪರ್ಕ ಕಚೇರಿ ಆರಂಭಿಸುವುದಾಗಿ ಅವರು ಭರವಸೆ ನೀಡಿದರು.ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಎಲ್ಲರೂ ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದು ಎಂದು ಹೇಳಿದರು.
ನಾನು ಕಳೆದ 21 ವರ್ಷದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಶಾಸಕನಾಗಿ, ಸಚಿವನಾಗಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಸೋಲು-ಗೆಲುವಿನಲ್ಲಿ ನಿಮ್ಮ ಜೊತೆಗಿದ್ದೇನೆ ಎಂದು ತಿಳಿಸಿದರು.ನೀಲಗುಂದ, ಕೂಲಹಳ್ಳಿ ಮಾಡ್ಲಿಗೇರಿ, ತೊಗರಿಕಟ್ಟಿ, ಕುಂಚೂರು, ಕೆ.ಕಲ್ಲಹಳ್ಳಿ, ನಿಟ್ಟೂರು, ಹಲುವಾಗಲು, ಕಡತಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.
ಈಸಂದರ್ಭದಲ್ಲಿ ಮುಖಂಡರಾದ ಆರ್.ಲೋಕೇಶ, ಮಂಜುನಾಥ ಆರ್. ನಾಯ್ಕ, ಯಡಿಹಳ್ಳಿ ಶೇಖರಪ್ಪ, ಎಂ.ಮಲ್ಲೇಶ್, ವಿಷ್ಣುರೆಡ್ಡಿ, ತಿಮ್ಮೇಶ, ಮಾಜಿ ಪುರಸಭೆ ಸದಸ್ಯೆ ವಿಜಯಲಕ್ಷ್ಮಿ, ಕಲ್ಲಹಳ್ಳಿ ಪರಸಪ್ಪ, ಹನುಮಂತಪ್ಪ, ಮೌನೇಶ, ಮಜ್ಜಿಗೇರಿ ನಿಂಗಪ್ಪ, ಅಜ್ಜಪ್ಪ, ದಿಳ್ಯೆಪ್ಪ, ಭೀಮಪ್ಪ, ಬಸವರಾಜ ನಾಯ್ಕ್, ಹಂಪಾಪುರ ಬೀರಪ್ಪ, ಕೊಟ್ರೇಶನಾಯ್ಕ್, ಬೇವಿನಹಳ್ಳಿ ಬಸವರಾಜ, ಮಲ್ಲಿಕಾರ್ಜುನ, ಇಟ್ಟಿಗುಡಿ ವಾಮಪ್ಪ, ರೂಪ್ಲನಾಯ್ಕ, ನಾಗರಾಜ ಪಾಟೀಲ್, ಸಿದ್ದೇಶರೆಡ್ಡಿ, ಸೂರ್ಯನಾಯ್ಕ, ಹಾಲಮ್ಮ, ಸುರ್ವಣಮ್ಮ, ಜಿ.ಎಂ. ರೇಖಾ, ಹನುಮಂತ, ಕೊಟ್ರೇಶ, ರಾಜಪ್ಪ, ಶಿಲ್ಯನಾಯ್ಕ, ಮಹೇಶ ಪೂಜಾರ ಇದ್ದರು.