ಮಾದಿಗ ಸಮಾಜ ಅಭಿವೃದ್ಧಿಗಾಗಿ ಗ್ರಾಮ ಘಟಕಗಳ ಸ್ಥಾಪನೆ: ಪ್ರಕಾಶ್‌

| Published : Oct 19 2024, 12:26 AM IST

ಸಾರಾಂಶ

ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಗ್ರಾಮ ಘಟಕಗಳನ್ನು ಸ್ಥಾಪಿಸುತ್ತಿದೆ ಎಂದು ತಾಲೂಕು ಅಧ್ಯಕ್ಷ ಎಚ್.ಪ್ರಕಾಶ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಸಂತೆಬೆನ್ನೂರು ಹೋಬಳಿಮಟ್ಟದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಗ್ರಾಮ ಘಟಕಗಳನ್ನು ಸ್ಥಾಪಿಸುತ್ತಿದೆ ಎಂದು ತಾಲೂಕು ಅಧ್ಯಕ್ಷ ಎಚ್.ಪ್ರಕಾಶ್ ಹೇಳಿದರು.

ತಾಲೂಕಿನ ಸಂತೆಬೆನ್ನೂರು ಗ್ರಾಮದ ವಿಜಯ ಯುವಕ ಸಂಘ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಸಂತೆಬೆನ್ನೂರು ಹೋಬಳಿಮಟ್ಟದ ಮಾದಿಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾ ಘಟಕಗಳಿಗೆ ಶಕ್ತಿ ತುಂಬುವಂತಹ ಕೆಲಸಗಳನ್ನು ಮಾಡಲಾಗುವುದು ಎಂದರು.

ಸಮಾಜದ ಯುವ ಸಾಹಿತಿ ಹುಚ್ಚಂಗಿ ಪ್ರಸಾದ್ ಮಾತನಾಡಿ, ಕರ್ನಾಟಕದಲ್ಲಿ ಒಳಮೀಸಲಾತಿ ವಿಚಾರವಾಗಿ ಮಾದಿಗ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮತ್ತು ಸಮುದಾಯದ ಮೇಲೆ ಅನ್ಯಾಯ ಆಗುತ್ತಿರುವುದನ್ನು ಖಂಡಿಸಲು ಗ್ರಾಮೀಣ ಮಟ್ಟದಲ್ಲಿ ಮಾದಿಗ ಸಮುದಾಯದವರನ್ನು ಬಲಿಷ್ಠವಾಗಿ ಸಂಘಟಿಸಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ತಾಲೂಕು ಗೌರವ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಬಗರ್‌ಹುಕುಂ ಸಮಿತಿ ಸದಸ್ಯ ಶೇಖರಪ್ಪ, ರುದ್ರಪ್ಪ, ಕಾನೂನು ಸಲಹೆಗಾರ ವಕೀಲ ಲಿಂಗಮೂರ್ತಿ, ರಘು, ರುದ್ರಪ್ಪ, ಸಿದ್ದೇಶ್ ಮತ್ತು ಸಮಾಜ ಬಾಂಧವರು ಹಾಜರಿದ್ದರು.

ಪದಾಧಿಕಾರಿಗಳ ಆಯ್ಕೆ:

ಇದೇ ಸಂದರ್ಭ ಹೋಬಳಿ ಘಟಕ ನೂತನ ಅಧ್ಯಕ್ಷರನ್ನಾಗಿ ಎಸ್.ಆರ್. ನಾಗರಾಜಪ್ಪ, ಗೌರವ ಅಧ್ಯಕ್ಷ ಪರಶುರಾಮ್, ಉಪಾಧ್ಯಕ್ಷರಾಗಿ ಕಾಕನೂರು ಅಣ್ಣಪ್ಪ, ಕೋಗಲೂರು ಪ್ರವೀಣ್, ಸಂತೆಬೆನ್ನೂರು ಗೋವಿಂದಪ್ಪ, ಅರಳಿಕಟ್ಟೆ ಅಂಜಿನಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ಳಿಗನೂಡು ಅವಿನಾಷ್, ಸಹಕಾರ್ಯದರ್ಶಿಯಾಗಿ ಸಿದ್ದನಮಠದ ಅಶೋಕ್, ತೋಪೇನಹಳ್ಳಿ ಪರಶುರಾಮ್, ತಣಿಗೆರೆ ಶಿವಕುಮಾರ್, ಕೋಗಲೂರು ಚಂದ್ರು ಅವರನ್ನು ಆಯ್ಕೆಮಾಡಲಾಯಿತು.

- - - -18ಕೆಸಿಎನ್ಜಿ1:

ಸಂತೆಬೆನ್ನೂರು ಹೋಬಳಿ ಘಟಕದ ಮಾದಿಗ ಸಮಾಜ ಪದಾಧಿಕಾರಿಗಳನ್ನು ತಾಲೂಕು ಅಧ್ಯಕ್ಷ ಎಚ್.ಪ್ರಕಾಶ್ ಅಧ್ಯಕ್ಷತೆ ಸಭೆಯಲ್ಲಿ ಆಯ್ಕೆ ಮಾಡಲಾಯಿತು.