ಹಲುಸುಲಿಗೆ ಗ್ರಾಮ ಸಮೀಪ ತಲುಪಿದಂತೆ 8.30ರ ವೇಳೆ ಭಾರಿ ಶಬ್ಧದೊಂದಿಗೆ ಪೈಪ್‌ಲೈನ್ ಸ್ಫೋಟಗೊಂಡ ಪರಿಣಾಮ ಚಿಲುಮೆಯ ರೂಪದಲ್ಲಿ ನೂರು ಅಡಿಯಷ್ಟು ನೀರು ಮೇಲೆ ಚಿಮ್ಮಿದೆ. ಪೈಪ್‌ಲೈನ್ ಸ್ಫೋಟ ಸಂಭವಿಸಿದ ತಕ್ಷಣ, ನೀರು ಹರಿಯುವುದನ್ನು ಸ್ಥಗಿತಗೊಳಿಸಲಾಯಿತಾದರೂ ಸುಮಾರು ಮೂರು ಗಂಟೆಗಳ ಕಾಲ ನೀರು ವ್ಯರ್ಥವಾಗಿ ಹರಿದು ಸಮೀಪದ ಕಾಫಿತೋಟ ಹಾಗೂ ಗದ್ದೆಗಳಿಗೆ ನುಗ್ಗಿದ ಪರಿಣಾಮ ಹಾನಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಹಲಸುಲಿಗೆ ಗ್ರಾಮ ಸಮೀಪ ಭಾನುವಾರ ಮುಂಜಾನೆ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಸ್ಫೋಟಗೊಂಡ ಪರಿಣಾಮ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ.ಭಾನುವಾರ ಬೆಳಿಗ್ಗೆ 8 ಗಂಟೆಯ ವೇಳೆ ಪೈಪ್‌ಗೆ ನೀರು ಹರಿಸಲಾಗಿದ್ದು ನೀರಿನ ಹರಿವು ಮುಖ್ಯಕೇಂದ್ರದಿಂದ ಕೇವಲ ಐದು ಕಿ.ಮೀ. ದೂರದ ಹಲುಸುಲಿಗೆ ಗ್ರಾಮ ಸಮೀಪ ತಲುಪಿದಂತೆ 8.30ರ ವೇಳೆ ಭಾರಿ ಶಬ್ಧದೊಂದಿಗೆ ಪೈಪ್‌ಲೈನ್ ಸ್ಫೋಟಗೊಂಡ ಪರಿಣಾಮ ಚಿಲುಮೆಯ ರೂಪದಲ್ಲಿ ನೂರು ಅಡಿಯಷ್ಟು ನೀರು ಮೇಲೆ ಚಿಮ್ಮಿದೆ. ಪೈಪ್‌ಲೈನ್ ಸ್ಫೋಟ ಸಂಭವಿಸಿದ ತಕ್ಷಣ, ನೀರು ಹರಿಯುವುದನ್ನು ಸ್ಥಗಿತಗೊಳಿಸಲಾಯಿತಾದರೂ ಸುಮಾರು ಮೂರು ಗಂಟೆಗಳ ಕಾಲ ನೀರು ವ್ಯರ್ಥವಾಗಿ ಹರಿದು ಸಮೀಪದ ಕಾಫಿತೋಟ ಹಾಗೂ ಗದ್ದೆಗಳಿಗೆ ನುಗ್ಗಿದ ಪರಿಣಾಮ ಹಾನಿ ಸಂಭವಿಸಿದೆ.
ಹಲವು ಅನುಮಾನ.. ಸದ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಯುವ ಸಾಮರ್ಥ್ಯ ಹೊಂದಿರುವ ಪೈಪ್‌ಗಳಲ್ಲಿ ಸದ್ಯ 250 ಕ್ಯೂಸೆಕ್ ನೀರು ಮಾತ್ರ ಹರಿಬಿಡಲಾಗುತ್ತಿದ್ದು, ಈ ಅಲ್ಪ ನೀರು ಹರಿಯುವ ವೇಳೆ ಪೈಪ್ ಸ್ಫೋಟಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.