ಸಾರಾಂಶ
ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು 2016ನೇ ಇಸವಿಯಲ್ಲಿ ಶ್ರೀ ಕಮಲೇಶಚಂದ್ರ ಕಮಿಟಿ ಆಯೋಗ ನೇಮಿಸಿ, ಗಾಮೀಣ ಅಂಚೆ ನೌಕರರ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿತು. ಆ ಕಮಿಟಿ ವರದಿ ಸಲ್ಲಿಸಿ, 6 ವರ್ಷಗಳು ಕಳೆದರೂ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸದೇ ಕೇಂದ್ರ ಸರ್ಕಾರ ಮತ್ತು ಅಂಚೆ ಆಡಳಿತ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದರು. ಅಲ್ಲದೆ, ವಿವಿಧ ಬೇಡಿಕೆಗಳ ಈಡೇರಿಸುವಂತೆಯೂ ಒತ್ತಾಯಿಸಿದರು.
ಶಿವಮೊಗ್ಗ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆಗೆ 169 ವರ್ಷ ಕಳೆದಿದ್ದರೂ ಇಲಾಖೆಯಲ್ಲಿ ಜೀತ ಪದ್ಧತಿಯಂತೆ ಶೋಷಣೆ ನಡೆಯುತ್ತಿದೆ. ಬ್ರಿಟಿಷರ ಕಾಲದಲ್ಲಿದ್ದ ಕಾನೂನುಗಳನ್ನೇ ಗ್ರಾಮೀಣ ಅಂಚೆ ನೌಕರರಿಗೆ ಆಡಳಿತ ವ್ಯವಸ್ಥೆ ಇನ್ನೂ ಅನ್ವಯಿಸಿ, ಸೇವೆ ನೀಡುತ್ತಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಅಧ್ಯಕ್ಷ ಎಚ್.ಬಿ.ರಾಜ್‌ಕುಮಾರ್ ಆರೋಪಿಸಿದರು.
ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂಚೆ ಇಲಾಖೆಗೆ ನೌಕರನ್ನು 4-5 ಗಂಟೆ ನಿಗದಿಪಡಿಸಿ 8ರಿಂದ 10 ಗಂಟೆ ದುಡಿಸಿಕೊಳ್ಳುವುದು, 15ರಿಂದ 16 ಹಳ್ಳಿಗೆ ಒಬ್ಬ ಪೋಸ್ಟರ್‌ರನ್ನು ನೇಮಿಸುವುದು, ಆತ 4 ಗಂಟೆಗಳಲ್ಲಿ 15 ಸೆಕೆಂಡಿನಂತೆ 1 ಪತ್ರವನ್ನು ಬಟವಾಡೆ ಮಾಡುವಂತೆ ಕಾನೂನಿನಲ್ಲೇ ಇನ್ನೂ ನೀತಿ ಇದೆ. ಆದರೆ, ಜಿಡಿಎಸ್ ನೌಕರರಿಗೆ 30ರಿಂದ 40 ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಗಳನ್ನೇ ನೀಡಿಲ್ಲ ಎಂದು ದೂರಿದರು.ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು 2016ನೇ ಇಸವಿಯಲ್ಲಿ ಶ್ರೀ ಕಮಲೇಶಚಂದ್ರ ಕಮಿಟಿ ಆಯೋಗ ನೇಮಿಸಿ, ಗಾಮೀಣ ಅಂಚೆ ನೌಕರರ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿತು. ಆ ಕಮಿಟಿ ವರದಿ ಸಲ್ಲಿಸಿ, 6 ವರ್ಷಗಳು ಕಳೆದರೂ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸದೇ ಕೇಂದ್ರ ಸರ್ಕಾರ ಮತ್ತು ಅಂಚೆ ಆಡಳಿತ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದರು. ಅಲ್ಲದೆ, ವಿವಿಧ ಬೇಡಿಕೆಗಳ ಈಡೇರಿಸುವಂತೆಯೂ ಒತ್ತಾಯಿಸಿದರು.
ಸಂಘದ ಶಿವಮೊಗ್ಗ ವಿಭಾಗೀಯ ಅಧ್ಯಕ್ಷ ಎಚ್.ಜಿ. ವೆಂಕಟೇಶ್, ಎಚ್.ಆರ್. ಭಾಸ್ಕರ್ ಶೆಟ್ಟಿ, ರಾಯಪ್ಪ ನಾಯಕ್ ಮತ್ತಿತರರು ಇದ್ದರು.