ಘೋಷಣೆಯಾಗಿ 7 ವರ್ಷ ಕಳೆದ್ರೂ ಸರಗೂರಿಗೆ ಇನ್ನೂ ತಾಲೂಕು ಲಕ್ಷಣವೇ ಇಲ್ಲ

| Published : Nov 20 2024, 12:30 AM IST

ಘೋಷಣೆಯಾಗಿ 7 ವರ್ಷ ಕಳೆದ್ರೂ ಸರಗೂರಿಗೆ ಇನ್ನೂ ತಾಲೂಕು ಲಕ್ಷಣವೇ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಕೋಟೆ ತಾಲೂಕು ಆಗಿದ್ದರೂ ಕೂಡ ಸರಗೂರಿನಲ್ಲಿ ಸವಲತ್ತು ಜಾಸ್ತಿ ಇತ್ತು, ಈ ಹಿಂದೆ ಸರಗೂರು ಪುರಸಭೆಯಾಗಿತ್ತು, ಅಂದರೆ ಸರಗೂರಿನ ಜೂನಿಯರ್ ಕಾಲೇಜಿಗೆ ಕೋಟೆಯಿಂದ ಬಂದು ವ್ಯಾಸಂಗ ಮಾಡುತ್ತಿದ್ದರು, ಸರಗೂರು ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಭಾರಿ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿ ಎಲ್ಲ ಇಲಾಖೆಗಳಿಂದ ಶೇ. 80 ರಷ್ಟು ನಮ್ಮ ಸರಗೂರು ಭಾಗದಲ್ಲಿ ಆದಾಯ ಬರುತಿತ್ತು.

ಕನ್ನಡಪ್ರಭ ವಾರ್ತೆ ಸರಗೂರು

ಘೋಷಣೆಯಾಗಿ 7 ವರ್ಷ ಕಳೆದರೂ ಇನ್ನು ಸರಗೂರಿಗೆ ತಾಲೂಕಿಗೆ ಲಕ್ಷಣವೇ ಬಂದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಸರಗೂರು ತಾಲೂಕು ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ರೂಪಿಸಲು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಕೋಟೆ ತಾಲೂಕು ಆಗಿದ್ದರೂ ಕೂಡ ಸರಗೂರಿನಲ್ಲಿ ಸವಲತ್ತು ಜಾಸ್ತಿ ಇತ್ತು, ಈ ಹಿಂದೆ ಸರಗೂರು ಪುರಸಭೆಯಾಗಿತ್ತು, ಅಂದರೆ ಸರಗೂರಿನ ಜೂನಿಯರ್ ಕಾಲೇಜಿಗೆ ಕೋಟೆಯಿಂದ ಬಂದು ವ್ಯಾಸಂಗ ಮಾಡುತ್ತಿದ್ದರು, ಸರಗೂರು ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಭಾರಿ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿ ಎಲ್ಲ ಇಲಾಖೆಗಳಿಂದ ಶೇ. 80 ರಷ್ಟು ನಮ್ಮ ಸರಗೂರು ಭಾಗದಲ್ಲಿ ಆದಾಯ ಬರುತಿತ್ತು ಎಂದರು.

ರಾಜ್ಯ ರೈತ ಸಂಘವನ್ನೊಳಗೊಂಡಂತೆ ತಾಲೂಕಿನ ಎಲ್ಲ ಪ್ರಗತಿಪರ ಸಂಘಟನೆಗಳು ಒಡಗೂಡಿ ಹೋರಾಟ ರೂಪಿಸಲು, ಅಭಿವೃದ್ಧಿಗಾಗಿ ಚಾಲನಾ ಸಮಿತಿ ರಚನೆ ಮಾಡಲಾಯಿತು ಹಾಗೂ ಅದಕ್ಕೆ ಸರಗೂರು ರೈತ ಸಂಘ ಹಾಗೂ ವರ್ತಕರ ಸಂಘ, ಆಟೋ ಚಾಲಕರ ಸಂಘ, ದಸಂಸ, ಸಮಾಜ ರಕ್ಷಣಾ ಸೇನೆ, ಜಗಜೀವನರಾಂ ಕುಶಲಕರ್ಮಿಗಳ ಸಂಘ ಸರಗೂರು ನಿವಾಸಿಗಳು, ಕರ್ನಾಟಕ ರಾಜ್ಯ ದಸಂಸ ಹಾಗೂ ಸಂಯೋಜಕರನ್ನು ನೇಮಿಸಲಾಯಿತು.

ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪಿ. ಮರಂಕಯ್ಯ, ಮೈಸೂರು ಜಿಲ್ಲಾ ರೈತ ಮುಖಂಡರು, ಕರ್ನಾಟಕ ರಾಜ್ಯ ರೈತ ಸಂಘ, ಸರಗೂರು ತಾಲೂಕು ಅಧ್ಯಕ್ಷ ಚನ್ನನಾಯ್ಕ, ಎಚ್‌.ಡಿ. ಕೋಟೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಮಹದೇವನಾಯ್ಕ, ಗೌರವಾಧ್ಯಕ್ಷ ಶಿವಕುಮಾರ ಆರಾಧ್ಯ, ಪ್ರಧಾನ ಕಾರ್ಯದರ್ಶಿ ನಂದೀಶ್ವರ ಸ್ವಾಮಿ, ಚಿಕ್ಕ ಬರಗಿ, ಉಪಾಧ್ಯಕ್ಷ ಗೋವಿಂದ ರಾಜು, ಕಾರ್ಯಾಧ್ಯಕ್ಷ ಮಹಾಲಿಂಗ, ನಿಂಗನಾಯ್ಕ, ಮಹದೇವ ನಾಯ್ಕ, ಕೊಮಾರೇಗೌಡ, ಶಿವಪ್ಪ ಯುವ ಘಟಕದ ಅಧ್ಯಕ್ಷ, ನವೀನ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಎಸ್. ಸರಗೂರು ಚಿನ್ನಯ್ಯ, ಅಣ್ಣಯ್ಯಸ್ವಾಮಿ, ಕಂದಲಿಕೆ ನಿಜಲಿಂಗಪ್ಪ, ಸಂಗೀತ್ ಬಾಬು, ಕೈಗಾರಿಕಾ ರಾಷ್ಟ್ರೀಯ ರೈತ ಸಂಘ, ಟೈಗರ್ ಬ್ಲಾಕ್, ಸರಗೂರು ತಾ, ಅಭಿವೃದ್ಧಿ ಸಂಚಾಲಕ ಕೃಷ್ಣ , ಗೋವಿಂದ, ಕೆ ಹುನಗನಹಳ್ಳಿ, ಸಣ್ಣ ಸ್ವಾಮಿ. ಮಹೇಶ್, ದಸಂಸ ತಾಲೂಕು ಸಂಯೋಜಕ ದೇವಲಾಪುರ, ವೈಕುಂಠನಾಯ್ಕ ಸಮಾಜ ರಕ್ಷಣ ಸೇನೆ, ವೆಂಕಟೇಶ್, ಸರಗೂರು ವರ್ತಕರ ಮಂಡಲಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ದಸಂಸ ನಾಗವಾರ್ ಬಣ, ಸಣ್ಣಸ್ವಾಮಿ ಸರಗೂರು ಇದ್ದರು.