ಮೊಬೈಲ್, ಸಾಮಾಜಿಕ ಜಾಲತಾಗಳಲ್ಲಿನ ಆಮಿಷ, ತಪ್ಪ ಮಾಹಿತಿಗಳು ಅಪರಾಧವನ್ನು ಹೆಚ್ಚಿಸುತ್ತಿವೆ. ರಸ್ತೆ ಸುರಕ್ಷತಾ ನಿಯಮ ಪಾಲಿಸದೆ, ಜೀವಹಾನಿ, ಅಪರಾಧಗಳು ಸಂಭವಿಸುತ್ತಿವೆ. ದರೋಡೆ, ಮನೆಗಳವು, ಸೈಬರ್ ಅಪರಾಧ, ಕೊಲೆ, ಸುಲಿಗೆ, ಕಳ್ಳತನ, ದರೋಡೆ, ವಾಹನ ಕಳವು, ಪಿಕ್‌ಪಾಕೆಟಿಂಗ್‌ಗಳ ಕುರಿತು ಜಾಗೃತಿಯಾಗಬೇಕು.
ಕಿಕ್ಕೇರಿ:
ಗೊತ್ತಿಲ್ಲದೆ ತಪ್ಪು ಮಾಡಿದರೂ ಅಪರಾಧ. ಈ ಉಡಾಫೆ ಭಾವನೆ ಮೊದಲು ಮನಸ್ಸಿನಿಂದ ದೂರ ಮಾಡಿ ಅಪರಾಧಗಳ ಬಗ್ಗೆ ಎಚ್ಚರದಿಂದ ಇರುವಂತೆ ಇನ್ಸ್‌ಪೆಕ್ಟರ್ ಜಯರಾಂ ತಿಳಿಸಿದರು.ಪಟ್ಟಣದ ಆರಕ್ಷಕಠಾಣೆಯಿಂದ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿ, ಪ್ರತಿ ಡಿಸೆಂಬರ್ ಮಾಹೆಯಲ್ಲಿ ಸಾರ್ವಜನಿಕರಿಗೆ ಅಪರಾಧ ತಡೆ ಅರಿವು, ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ರೂಪಿಸಿದೆ ಎಂದರು.
ಮೊಬೈಲ್, ಸಾಮಾಜಿಕ ಜಾಲತಾಗಳಲ್ಲಿನ ಆಮಿಷ, ತಪ್ಪ ಮಾಹಿತಿಗಳು ಅಪರಾಧವನ್ನು ಹೆಚ್ಚಿಸುತ್ತಿವೆ. ರಸ್ತೆ ಸುರಕ್ಷತಾ ನಿಯಮ ಪಾಲಿಸದೆ, ಜೀವಹಾನಿ, ಅಪರಾಧಗಳು ಸಂಭವಿಸುತ್ತಿವೆ. ದರೋಡೆ, ಮನೆಗಳವು, ಸೈಬರ್ ಅಪರಾಧ, ಕೊಲೆ, ಸುಲಿಗೆ, ಕಳ್ಳತನ, ದರೋಡೆ, ವಾಹನ ಕಳವು, ಪಿಕ್‌ಪಾಕೆಟಿಂಗ್‌ಗಳ ಕುರಿತು ಜಾಗೃತಿಯಾಗಬೇಕು ಎಂದರು.ಅಕ್ರಮ ಮದ್ಯ, ಗಾಂಜಾ, ಅಫೀಮು ರೀತಿಯ ಮಾದಕ ದ್ರವ್ಯಗಳ ಮಾಹಿತಿ ನೀಡಬೇಕು. ಯಾವುದೇ ಬ್ಯಾಂಕ್‌ಗಳು ಮೊಬೈಲ್‌ಗಳಲ್ಲಿ ಮಾಹಿತಿ ಕೇಳುವುದಿಲ್ಲ. ಅನವಶ್ಯಕವಾಗಿ ಮೊಬೈಲ್‌ನಲ್ಲಿ ಮಾಹಿತಿ ಹಂಚಿಕೊಳ್ಳದಿರಿ. ತಮ್ಮ ಖಾತೆಗಳನ್ನು ಹ್ಯಾಕ್ ಮಾಡಿಕೊಂಡ ತಕ್ಷಣದಲ್ಲೇ ಹಣ ದೋಚುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಬಂಪರ್ ಬಹುಮಾನ ಮೆಸೆಜ್‌ಗಳಿಗೆ ಮರಳಾಗದಿರಿ ಎಂದು ಎಚ್ಚರಿಸಿದರು.
ಈ ವೇಳೆ ಎಎಸ್‌ಐ ರಮೇಶ್, ಸಿಬ್ಬಂದಿ ಪ್ರವೀಣ್, ಮಂಜು, ಸಾರ್ವಜನಿಕರು ಇದ್ದರು.1.75 ಕೋಟಿ ರು. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ
ಹಲಗೂರು: ಸಮೀಪದ ಅಂತರವಳ್ಳಿಯಲ್ಲಿ ಕಾವೇರಿ ನೀರಾವರಿ ನಿಗಮದಿಂದ 1.75 ಕೋಟಿ ರು. ವೆಚ್ಚದ ಚಾನಲ್ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು.ಮುಖಂಡರಾದ ಕೆ.ಸಿದ್ದಯ್ಯ ಮಾತನಾಡಿ, ಹೆಬ್ಬಾಳ ಚನ್ನಯ್ಯ ನಾಲೆ 24 ನೇ ವಿತರಣಾ ನಾಲೆಯಡಿ ಬರುವ ಅಂತರವಳ್ಳಿ ಕೆರೆ ನಾಲೆಯು 1,710 ಮೀಟರ್ ಉದ್ದವಿದ್ದು, ಲೈನಿಂಗ್ ಇಲ್ಲದೇ ಗಿಡ ಗಂಟೆಗಳು ಬೆಳೆದು ಹೂಳು ತುಂಬಿಕೊಂಡು ನೀರು ಹರಿಯಲು ಬಹಳ ಕಷ್ಟ ಆಗುತ್ತಿತ್ತು. ರಸ್ತೆ ಹೊಂಡ ಬಿದ್ದು, ರೈತರು ಮಳೆಗಾಲದಲ್ಲಿ ಜಮೀನುಗಳಿಗೆ ತೆರಳಲು ಬಹಳ ಕಷ್ಟವಾಗುತ್ತಿತ್ತು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಕಾಮಗಾರಿಗೆ ಅನುದಾನ ಮಂಜೂರು ಮಾಡಿದ್ದಾರೆ ಎಂದರು.
ಈ ವೇಳೆ ಮುಖಂಡ ಬಲರಾಮು, ಎಸ್ಸಿಎಸ್ಟಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎಂ.ಶಿವಕುಮಾರ್, ಗ್ರಾಪಂ ಸದಸ್ಯ ನಾಗರಾಜು, ಚಿಕ್ಕಾಳಯ್ಯ, ಶಿವಲಿಂಗಯ್ಯ, ಎ.ಡಿ.ನಾಗರಾಜು, ಶಶಾಂಕ್, ಈಶ್ವರ, ನಿಂಗರಾಜು, ಚಿಕ್ಕಮೋಗೇಗೌಡ ಭಾಗವಹಿಸಿದ್ದರು.