ಸಾರಾಂಶ
ರಾಜ್ಯದಲ್ಲಿ ಬರವು ಬೀಕರ ಪರಿಸ್ಥಿತಿ ಎದುರಿಸುತ್ತಿದೆ. 236 ತಾಲೂಕು ಗಳ ಪೈಕಿ 226 ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿವೆ. ಕೇಂದ್ರವು ಒಂದು ರು. ಸಹ ರಾಜ್ಯಕ್ಕೆ ನೀಡಿಲ್ಲ ಎಂದು ಪರಮೇಶ್ವರ್ ಆರೋಪಿಸಿದ್ದಾರೆ
ಕನ್ನಡಪ್ರಭ ವಾರ್ತೆ ಕೊರಟಗೆರೆ
ರಾಜ್ಯದ ಜನರು ಶೇ.18ರಷ್ಟು ಜಿಎಸ್‌ಟಿ ಮುಖಾಂತರ 4.5 ಲಕ್ಷ ಕೋಟಿ ರು. ತೆರಿಗೆ ಹಣವನ್ನು ಕೇಂದ್ರಕ್ಕೆ ಕಟ್ಟಿದರೆ ಅದರಲ್ಲಿ ಕೇಂದ್ರ ಸರ್ಕಾರ ನಮಗೆ ನೀಡುವುದು ಕೇವಲ 50 ಸಾವಿರ ಕೋಟಿ ಮಾತ್ರ. ಉಳಿದ ಹಣವನ್ನು ಇತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ಅವರು ಕೊರಟಗೆರೆ ಪಟ್ಟಣದ ರಾಜೀವ ಭವನ ಆವರಣದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗೆ ಚಾಲನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೊದಲಿನಿಂದಲೂ ಅನ್ಯಾಯ ಮಾಡುತ್ತಿದ್ದು, ರಾಜ್ಯದಲ್ಲಿ ಬರವು ಬೀಕರ ಪರಿಸ್ಥಿತಿ ಎದುರಿಸುತ್ತಿದೆ. 236 ತಾಲೂಕು ಗಳ ಪೈಕಿ 226 ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿವೆ. ಕೇಂದ್ರವು ಒಂದು ರು. ಸಹ ರಾಜ್ಯಕ್ಕೆ ನೀಡಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರವು 5 ಗ್ಯಾರಂಟಿಗಳ ಜೊತೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 52 ಸಾವಿರ ರು.ಗಳನ್ನು ಹಾಕಿದ್ದೇವೆ ಎಂದರು.
ಇಂದು ಜಿಲ್ಲಾ ಜೆಡಿಎಸ್ ಕಾರ್ಯಾದ್ಯಕ್ಷ ಮಹಾಲಿಂಗಪ್ಪ ಮತ್ತು ಮಾಜಿ ಜಿ.ಪಂ.ಅಧ್ಯಕ್ಷೆ ಪ್ರೇಮಾ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವು ಬಲ ತಂದಿದೆ. ಜೆಡಿಎಸ್ ಪಕ್ಷವು ಕೋಮುವಾದಿಗಳ ಜೋತೆ ಕೈ ಜೋಡಿಸಿದಕ್ಕಾಗಿ ಬೇಸರಗೊಂಡು ಮಹಾಲಿಂಗಪ್ಪ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. 2024ರ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಸ್.ಪಿ.ಮುದ್ದಹನುಮೇಗೌಡರು 2014 ರಿಂದ 2019 ರವರೆಗೆ ತುಮಕೂರು ಲೋಕಸಭಾ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ರೈತರ ಹಾಗೂ ಬಡವರ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ಕೇಂದ್ರ ಸರ್ಕಾರವನ್ನು ಯುಎನ್‌ಒನಲ್ಲಿ ಪ್ರತಿನಿಧಿಸಿದ್ದಾರೆ. ಅವರನ್ನು ಗೆಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಜೆಡಿಎಸ್ ಪಕ್ಷ ಒಂದು ಮುಳುಗುವ ಹಡಗು. ಅದು ಈಗ ಕೋಮುವಾದಿಗಳ ಜೊತೆ ಕೈಜೋಡಿಸಿದೆ. ಬಿಜೆಪಿ ಸುಳ್ಳು ಹಿಂದುತ್ವದಲ್ಲಿ ಯುವಕರ ದಾರಿ ತಪ್ಪಿಸಿದರೆ, ಜೆಡಿಎಸ್ ಪಕ್ಷವು ಅನುಕೂಲಕ್ಕೆ ತಕ್ಕಂತೆ ತನ್ನ ನೀತಿಗಳನ್ನು ಬದಲಾಯಿಸಿಕೊಳ್ಳುತ್ತದೆ. ದೇವೇಗೌಡರು ಮಹಾನ್ ಸುಳ್ಳಿನ ವ್ಯಕ್ತಿಯಾಗಿದ್ದು, ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುವೇ, ಮೋದಿ ಪ್ರಧಾನಿಯಾದರ ದೇಶವನ್ನೇ ಬಿಟ್ಟು ಹೊರಟು ಹೊಗುವೇ ಎಂದು ಜನರಿಗೆ ಸುಳ್ಳು ಹೇಳುತ್ತಾ ಈಗ ಕೋಮುವಾದಿಗಳ ಜೋತೆ ಕೈಜೋಡಿಸಿದ್ದಾರೆ. ದೇಶಕ್ಕೆ ಟೋಪಿ ಹಾಕುವ ಮಹಾನ್ ಸುಳ್ಳುಗಾರ ಮೋದಿ ಜೊತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಬಡವರ ಪಕ್ಷವಾಗಿದ್ದು, ಶೋಷಿತ ವರ್ಗದವರ ಪರ ನಿಲ್ಲುವ ಪಕ್ಷ. ಈ ಬಾರಿ ಜನರು ಕಾಂಗ್ರೆಸ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದು, ತುಮಕೂರಿನಲ್ಲಿ ಮುದ್ದಹನುಮೇಗೌಡರ ಗೆಲುವು ಖಚಿತ ಎಂದರು.ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ನನ್ನ ಮೇಲೆ ತುಮಕೂರು ಜಿಲ್ಲೆಯ ಜನತೆ ಮತ್ತು ನಾಯಕರುಗಳು ಭರವಸೆ ಇಟ್ಟಿದ್ದಾರೆ. ಕಳೆದ ಬಾರಿಯ ಲೋಸಭಾ ಸದಸ್ಯನಾಗಿದ್ದ ಕಾಲದಲ್ಲಿ ಶೇ.96 ರಷ್ಟು ಸಂಸತ್ ಕಲಾಪದಲ್ಲಿ ಕಳೆದಿದ್ದೇನೆ 700 ಪ್ರಶ್ನೆಯನ್ನು ಹಾಕಿದ್ದೇನೆ, 100 ಗಂಭೀರ ವಿಚಾರಗಳನ್ನು ಚರ್ಚಿಸಿದ್ದೇನೆ. ರೈತರ, ಬಡವರ, ಶೋಷಿತರ ಪರವಾಗಿ ಹೋರಾಡಿದ್ದೇವೆ ಮುಂದೆಯೂ ಅದೇ ರೀತಿ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ ತುಮಕೂರು ಜಿಲ್ಲೆಯ ಜೆಡಿಎಸ್ ಪಕ್ಷದ ಕಾಯಾಧ್ಯಕ್ಷ ಮಹಾಲಿಂಗಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಪೇಮಾ ಸೇರಿದಂತೆ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಶಾಸಕರಾದ ಶ್ರಿನಿವಾಸ್, ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ಮಾಜಿ ಶಾಸಕರಾದ ಕಿರಣ್‌ಕುಮಾರ್, ಗಂಗಹನುಮಯ್ಯ, ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮುಖಂಡರುಗಳಾದ ವೇಣುಗೋಪಾಲ್, ಸಂತೋಷ್ ಜಯಚಂದ್ರ, ಇಕ್ಬಾಲ್ ಅಹಮದ್ ಸೇರಿ ಇತರರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))