ಮದ್ದೂರು ಪುರಸಭೆ: 43.04 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ

| Published : Mar 14 2024, 02:02 AM IST

ಸಾರಾಂಶ

ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 3 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿತ್ತು. ಪುರಸಭಾ ಸದಸ್ಯರಾದ ಎಂ.ಐ.ಪ್ರವೀಣ, ಸುರೇಶ್ ಕುಮಾರ್ ಸೇರಿದಂತೆ ಇತರೆ ಸದಸ್ಯರು 3 ಲಕ್ಷ ಇರುವ ಹಣವನ್ನು 5 ಲಕ್ಷಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದ ಹಿನ್ನೆಲೆಯಲ್ಲಿ 5 ಲಕ್ಷ ರು.ಗಳನ್ನು ಇಡುವಂತೆ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪುರಸಭೆಯಲ್ಲಿ ಮಂಗಳವಾರ ನಡೆದ 2024-25 ನೇ ಸಾಲಿನ ಬಜೆಟ್ ಸಾಮಾನ್ಯ ಸಭೆಯಲ್ಲಿ 43.04 ಲಕ್ಷ ರು ಉಳಿತಾಯ ಬಜೆಟ್ ಮಂಡಿಸಲಾಯಿತು.

ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಡಳಿತಾಧಿಕಾರಿಯೂ ಅದ ಎಸಿ ಬಿ.ಆರ್.ಮಹೇಶ್ ಅನುದಾನ ಘೋಷಿಸುವ ಮೂಲಕ 43.04 ಲಕ್ಷ ರು ಉಳಿತಾಯ ಬಜೆಟ್ ಮಂಡಿಸಿದರು. ನಂತರ ಸದಸ್ಯರು ಪಕ್ಷತೀತವಾಗಿ ಬಜೆಟ್ ವಿಷಯಗಳ ಬಗ್ಗೆ ಕೆಲಕಾಲ ಚರ್ಚಿಸಿ ಅಂತಿಮವಾಗಿ ಅನುಮೋದನೆ ನೀಡಿದರು.

ಪ್ರಮುಖ ಆದಾಯಗಳು:

ಆಸ್ತಿ ತೆರಿಗೆ ಮತ್ತು ದಂಡ 2.85 ಕೋಟಿ, ಮಳಿಗೆಗಳ ಬಾಡಿಗೆ 15 ಲಕ್ಷ ರು, ಕಟ್ಟಡ ಪರವಾನಗಿ ಶುಲ್ಕಗಳು ಮತ್ತು ಸುಧಾರಣೆ ಶುಲ್ಕಗಳು 8.10 ಲಕ್ಷ ರು. ಉದ್ದಿಮೆ ಪರವಾನಿಗೆ ಶುಲ್ಕಗಳು 15 ಲಕ್ಷ ರು., ನೀರಿ ಶುಲ್ಕಗಳು ಮತ್ತು ಒಳಚರಂಡಿ ಸಂಪರ್ಕಗಳ ಶುಲ್ಕಗಳು ಠೇವಣಿ 1. 5ಕೋಟಿ ರು, ಘನತಾಜ್ಯ ನಿರ್ವಹಣಾ ಶುಲ್ಕಗಳು 20 ಲಕ್ಷರು, ಅನುಪಯುಕ್ತ ನಿರ್ವಹಣಾ ಶುಲ್ಕಗಳು 10 ಲಕ್ಷ ರೂ, ರಸ್ತೆ ಅಗೆತ ಶುಲ್ಕಗಳು 6 ಲಕ್ಷ ರೂ, ಮಾರುಕಟ್ಟೆ ಶುಲ್ಕಗಳು 5 ಲಕ್ಷ ರೂ, ಖಾತ ಬದಲಾವಣೆ ಶುಲ್ಕ, ಖಾತ ಪ್ರತಿಗಳ ಶುಲ್ಕಗಳ ರೂ.13 ಲಕ್ಷ ರೂ, ಜಾಹಿರಾತು ತೆರಿಗೆ 1.50 ಲಕ್ಷ ರೂ, ಬ್ಯಾಂಕ್ಗಳ ಖಾತೆಗಳಿಂದ ಬಂದ ಬಡ್ಡಿ 12 ಲಕ್ಷ ರೂ, ಇತರೆ ಮೂಲಗಳ ಶುಲ್ಕಗಳು ರೂ. 52.45000 (ಟೆಂಡರ್ ಫಾರಂ, ಸಕ್ಕಿಂಗ್ ಮೆಷಿನ್ ಶುಲ್ಕ, ನೆಲ ಬಾಡಿಗೆ, ವಾಹನ ನಿಲುಗಡೆ ಶುಲ್ಕಗಳು, ಸ್ಟಾಂಪ್ ಶುಲ್ಕ, ಪ್ರಮಾಣ ಪತ್ರಗಳು ಇತರೆ ಶುಲ್ಕಗಳು ದಂಡ ಇತರೆ ಆದಾಯ).

ಪ್ರಮುಖ ವೆಚ್ಚಗಳು:

ಕಟ್ಟಡ ನಿರ್ಮಾಣ 1.70 ಕೋಟಿ ರು, ಪುರಸಭಾ ಕಚೇರಿ ಲಾನ್, ಕೌಂಪೌಂಡ್, ಗೇಟ್ ನವೀಕರಣ ಮತ್ತು ಉದ್ಯಾನವನ ಅಭಿವೃದ್ಧಿ ಕಾಮಗಾರಿಗಾಗಿ 25 ಲಕ್ಷ ರು, ಕಚೇರಿ ಉಪಕರಣಗಳ, ಸಲಕರಣೆಗಳು, ಪಿಠೋಪಕರಣಗಳಿಗಾಗಿ 15 ಲಕ್ಷ ರು, ಸ್ವಾಗತ ಕಾಮನು, ಕೌಂಪೌಂಡ್, ಕ್ರೀಡಾಂಗಣ ಅಭಿವೃದ್ಧಿಗೆ, ರಸ್ತೆ ಬದಿ ಮಾರ್ಗಸೂಚಿ ಫಲಕ ಅಳವಡಿಕೆ ಹಾಗೂ ಇತರೆ ಕಾಮಗಾರಿಗಾಗಿ 13 ಲಕ್ಷ ರು, ರಸ್ತೆ, ಪಾದಚಾರಿ ಮತ್ತು ಚರಂಡಿ ಅಭಿವೃದ್ಧಿಗಾಗಿ 1.25 ಕೋಟಿ ರು, ಬೀದಿ ದೀಪ ಕಾಮಗಾರಿಗೆ 12 ಲಕ್ಷ ರು, ಮಳೆ ನೀರಿನ ಚರಂಡಿ ಕಾಮಗಾರಿಗಾಗಿ 20 ಲಕ್ಷ ರು, ಸಾರ್ವಜಕರ ಶೌಚಗೃಹ ಕಟ್ಟಡಗಳ ನಿರ್ಮಾಣ ಕಾಮಗಾರಿಗಾಗಿ 15 ಲಕ್ಷ ರು, ಸ್ಮಶಾನ ಅಭಿವೃದ್ಧಿಗಾಗಿ 20 ಲಕ್ಷ ರು, ನೈರ್ಮಲ್ಯ ವಾಹನ, ಸಲಕರಣೆ ಖರೀದಿಗಾಗಿ 45 ಲಕ್ಷ ರು, ಘನತ್ಯಾಜ್ಯ ವಸ್ತು ನಿರ್ವಹಣೆ ಅಭಿವೃದ್ಧಿಗಾಗಿ 30 ಲಕ್ಷ ರು, ನೀರು ಸರಬರಾಜು ಕಟ್ಟಡಗಳ ನಿರ್ಮಾಣ, ನೀರು ಸಬರಾಜು ಅಭಿವೃದ್ಧಿ ಕಾಮಗಾಗಿಗಾಗಿ ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 70 ಲಕ್ಷ ರು, ಒಳಚರಂಡಿ ಅಭಿವೃದ್ಧಿ ಕಾಮಗಾರಿಗಾಗಿ 20 ಲಕ್ಷ ರು, ಪಾರ್ಕ್ ಅಭಿವೃದ್ಧಿ ಕಾಮಗಾರಿಗಾಗಿ 25 ಲಕ್ಷ ರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕ ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿಗಾಗಿ 16 ಲಕ್ಷ ರು, ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಮತ್ತು ಭತ್ಯೆಗಳ ಪಾವತಿಗಾಗಿ 2.92 ಕೋಟಿ ರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನಗಳು:

ಎಸ್.ಎಫ್.ಸಿ.ಮುಕ್ತನಿಧಿ ಅನುದಾನ 45 ಲಕ್ಷ ರು, ಎಸ್.ಎಪ್.ಸಿ.ವೇತನ ಅನುದಾನ 2.92 ಕೋಟಿ ರು, ಎಸ್.ಎಫ್.ಸಿ. ವಿದ್ಯುತ್ ಅನುದಾನ 3.60 ಕೋಟಿ ರು, ಜನಗಣತಿ ಅನುದಾನ ಹಾಗೂ ಇತರೆ ಅನುದಾನ 7 ಲಕ್ಷ ರು, ನಲ್ಮ್ ಅನುದಾನ 5.50 ಲಕ್ಷ ರು, ಸ್ವಚ್ಛ ಭಾರತ್ ಮಿಷನ್ ಅನುದಾನ 10.50 ಲಕ್ಷ ರು. 15ನೇ ಹಣಕಾಸು ಅನುದಾನ 1.25 ಕೋಟಿ ರು. ವಿಶೇಷ ಅನುದಾನ 5.50 ಕೋಟಿ, ಎಸ್.ಎಫ್.ಸಿ.ಕುಡಿಯುವ ನೀರು 15.5 ಲಕ್ಷ ರುಗಳು.

ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 3 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿತ್ತು. ಪುರಸಭಾ ಸದಸ್ಯರಾದ ಎಂ.ಐ.ಪ್ರವೀಣ, ಸುರೇಶ್ ಕುಮಾರ್ ಸೇರಿದಂತೆ ಇತರೆ ಸದಸ್ಯರು 3 ಲಕ್ಷ ಇರುವ ಹಣವನ್ನು 5 ಲಕ್ಷಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದ ಹಿನ್ನೆಲೆಯಲ್ಲಿ 5 ಲಕ್ಷ ರು.ಗಳನ್ನು ಇಡುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ, ಪುರಸಭಾ ಸದಸ್ಯರು, ಅಧಿಕಾರಿಗಳು ಸಿಬ್ಬಂದಿ ಇದ್ದರು.